
ಕೊಟ್ಟೂರು(ಜು.17): ಪಟ್ಟಣದ ಆರಾಧ್ಯದೈವ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ಹರಕೆಗೆ ಭಕ್ತರು ಬಿಟ್ಟಗೋವುಗಳ ಮೇಲೆ ಕಳ್ಳಕಾಕರ ಕಣ್ಣು ಬಿದ್ದಿದ್ದು, 3 ಗೋವುಗಳನ್ನು ಅಪಹರಿಸಿದ್ದಾರೆ. ಈ ಕುರಿತು ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಟ್ಟಣದ ಹರಪನಹಳ್ಳಿ ರಸ್ತೆಯ ಕತ್ತಿಮರಡಿ ಜಿನ್ನಿನ ಆವರಣದಲ್ಲಿ ಮುಖಗವಸು ಧರಿಸಿದ್ದ ಮೂವರು ಆಗುಂತಕರು ಗುರುವಾರ ಮಧ್ಯರಾತ್ರಿ 2.30ರ ಸಮಯದಲ್ಲಿ ಆಗಮಿಸಿ ಗೋವುಗಳನ್ನು ಹಿಡಿದು ಹಿಂಸಿಸಿ ವಾಹನವೊಂದರಲ್ಲಿ ಹಾಕಿಕೊಂಡು ಹೋಗಿದ್ದಾರೆ. ಅಪಹರಣದ ದೃಶ್ಯಾವಳಿಗಳು ಪಟ್ಟಣದಲ್ಲೆಡೆ ವೈರಲ್ ಆಗಿದೆ.
ಗೋ ಕಳ್ಳರಿಗೆ ಸಿದ್ದರಾಮಯ್ಯ ಸರ್ಕಾರ ಪರೋಕ್ಷ ಬೆಂಬಲ ನೀಡ್ತಿದೆ: ಬಿಜೆಪಿ ಮುಖಂಡರ ಆರೋಪ
ಯಾವುದೇ ರಕ್ಷಣೆ ಮತ್ತು ಗೋಶಾಲೆಗಳು ಇಲ್ಲದ ಕಾರಣಕ್ಕಾಗಿ ಪಟ್ಟಣದಲ್ಲಿ ಗೋವುಗಳು ಎಲ್ಲೆಂದರಲ್ಲಿ ಆಹಾರ ಅರಸಿಕೊಂಡು ಹೋಗಿ ಅಲ್ಲಿಯೇ ವಿಶ್ರಾಂತಿ ಪಡೆಯುತ್ತಿವೆ. ದೇವರಿಗೆ ಹರಕೆ ಬಿಟ್ಟಗೋವುಗಳು ಪಟ್ಟಣದಲ್ಲಿ ಸಾಕಷ್ಟುಸಂಖ್ಯೆಯಲ್ಲಿದ್ದು, ಇವುಗಳನ್ನು ಕದ್ದೊಯ್ದು ದೂರದ ಊರುಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದುರಾಲೋಚನೆ ಆಗುಂತಕ ಕಿಡಿಗೇಡಿಗಳಾಗಿದ್ದು, ಈ ಕಾರಣದಿಂದಲೇ ಗೋವುಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗೋವುಗಳನ್ನು ಅಪಹರಿಸಿಕೊಂಡು ಹೋಗುವ ಹಲವು ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದವು. ಇದೀಗ ಕೊಟ್ಟೂರಿಗೆ ಕಾಲಿಟ್ಟಿದ್ದು, ಕಿಡಿಗೇಡಿಗಳು ದೇವರ ಹಸುಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಇಂತಹ ಪ್ರಕರಣಗಳಿಂದ ಗೋವುಗಳನ್ನು ರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಅಂತ ಕೊಟ್ಟೂರು ಸಾರ್ವಜನಿಕ ಗುರುಬಸವರಾಜ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ