
ಕೋಲಂ(ಜೂ. 04) ವಿಷಸರ್ಪದಿಂದ ಕಚ್ಚಿಸಿ ಹೆಂಡತಿ ಕೊಲೆ ಮಾಡಿದ್ದ ಪಾತಕಕ್ಕೆ ಸಂಬಂಧಿಸಿ ಪೊಲೀಸರು ವರದಿ ಸಲ್ಲಿಸಿದ್ದಾರೆ. ಕೇರಳ ಮಹಿಳಾ ಆಯೋಗದ ನಿರ್ದೇಶನದಂತೆ ಪಥನಮತ್ತಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥ ವರದಿ ಸಲ್ಲಿಸಿದ್ದಾರೆ.
ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳ ದೂರನ್ನು ಹತ್ಯೆಯಾದ ಊತ್ರಾ ಪೋಷಕರು ನೀಡಿದ್ದರು. ಊತ್ರಾ ಗಂಡನ ಕುಟುಂಬದಿಂದ ದೌರ್ಜನ್ಯಕ್ಕೆ ಒಳಗಾಗಿದ್ದರು. ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಸೆಕ್ಷನ್ ಗಳು ಇದಕ್ಕೆ ಅನ್ವಯವಾಗುತ್ತವೆ ಎಂದಿರುವ ಪೊಲೀಸರು ಕೋಲಂ ವಿಭಾಗದ ಪೊಲೀಸ್ ಮುಖ್ಯಸ್ಥರಿಗೆ ಸಲ್ಲಿಕೆ ಮಾಡಲಿದ್ದಾರೆ.
ವಿಷಪೂರಿತ ಹಾವು ಮನೆಗೆ ತಂದಿದ್ದಾದರೂ ಹೇಗೆ?
ಕೊಲೆ ಮತ್ತು ದೌರ್ಜನ್ಯ ಎರಡು ಪ್ರಕರಣಗಳನ್ನು ಒಂದೇ ಪೊಲೀಸ್ ವಿಭಾಗ ತನಿಖೆ ಮಾಡುವುದು ಒಳಿತು ಎಂದು ಹೇಳಲಾಗಿದೆ. ಊತ್ರಾ ಗಂಡ ಆರೋಪಿತ ಸೂರಜ್ ನ ಪೋಷಕರು ಮತ್ತು ಸಹೋದರಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸುರಜ್ ತಂದೆ ಸುರೇಂದ್ರನ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ಕೊಲೆಗೆ ಪ್ರಚೋದನೆ: ಪೊಲೀಸರ ವರದಿ ಹೇಳಿವಂತೆ ಸೂರಜ್ ತಂದೆ ಸುರೇಂದ್ರನ್ ಅಪರಾಧ ಕೃತ್ಯಕ್ಕೆ ಪ್ರಚೋದನೆ ನೀಡಿದ್ದರು ಎಂಬ ಮಾಹಿತಿಯೂ ಬಹಿರಂಗವಾಗಿದೆ. ಊತ್ರಾ ಚಿನ್ನಾಭರಣ ನಾಪತ್ತೆಯಾಗಲು ಏನು ಕಾರಣ ಎಂಬುದನ್ನು ತನಿಖೆ ಮಾಡಲಾಗುತ್ತಿದೆ.
ಹಾವನ್ನು ಬಳಸಿ ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿದ ಆರೋಪ ಸೂರಜ್ ಮೇಲಿದೆ. ಹಾವು ಕಚ್ಚಿ ಮೇ 7 ರಂದು ಉತ್ರಾ ಸಾವನ್ನಪ್ಪಿದ್ದರು. ಇದಾದ ಮೇಲೆ ಪೊಲೀಶರು ವಿಚಾರಣೆ ನಡೆಸಿದಾಗ ಹೆಂಡತಿಯನ್ನು ಕೊಲೆ ಮಾಡಿದ್ದಾಗಿ ಸೂರಜ್ ಒಪ್ಪಿಕೊಂಡಿದ್ದ. 10 ಸಾವಿರ ರೂ. ಕೊಟ್ಟು ಎರಡು ಹಾವು ತಂದಿದ್ದಾಗಿಯೂ ಹೇಳಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ