
ಕೊಚ್ಚಿ. ಕೇರಳದ ಕೊಚ್ಚಿಯಲ್ಲಿ 15 ವರ್ಷದ ಶಾಲಾ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯ ಕೆಲವು ವಾರಗಳ ನಂತರ ಬಾಲಕನ ತಾಯಿ ತನ್ನ ಮಗ ರ್ಯಾಗಿಂಗ್‌ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ರಾಜನಾ ಪಿಎಮ್ ತನ್ನ ಮಗ ಮಿಹಿರ್ ಅಹ್ಮದ್‌ನನ್ನು ಹೊಡೆಯಲಾಗಿದೆ. ನಿಂದಿಸಿದ್ದಾರೆ. ಶೌಚಾಲಯದ ಸೀಟನ್ನು ನೆಕ್ಕುವಂತೆ ಒತ್ತಾಯಿಸಲಾಗಿದೆ ಇದೇ ಕಾರಣಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಿಹಿರ್ ತಾಯಿ ಸಿಎಂ ಪಿಣರಾಯಿ ವಿಜಯನ್ ಕಚೇರಿ ಮತ್ತು ಕೇರಳ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದು ತಮ್ಮ ಮಗನ ಸಾವಿನ ತನಿಖೆಗೆ ಒತ್ತಾಯಿಸಿದ್ದಾರೆ . ಮಿಹಿರ್ ಜನವರಿ 15 ರಂದು ಕೊಚ್ಚಿಯ ತ್ರಿಪುನಿತುರದಲ್ಲಿ 26 ನೇ ಮಹಡಿಯ ಫ್ಲಾಟ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಾಲೆಯಿಂದ ಹಿಂತಿರುಗಿ ಒಂದು ಗಂಟೆಯ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗನ ಸಾವಿಗೆ ನ್ಯಾಬೇಕು:
ಮೃತ ಬಾಲಕನ ತಾಯಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. "ಮಗನ ಸಾವಿನ ನಂತರ ನಾನು ಮತ್ತು ನನ್ನ ಪತಿ ಮಿಹಿರ್ ಇಂಥ ದೊಡ್ಡ ನಿರ್ಧಾರಕ್ಕೆ ಏಕೆ ಬಂದ ಎಂಬ ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸಿದೆವು. ಅವನ ಸ್ನೇಹಿತರು ಮತ್ತು ಸಹಪಾಠಿಗಳೊಂದಿಗೆ ಮಾತನಾಡಿದೆವು. ಸಾಮಾಜಿಕ ಮಾಧ್ಯಮದಲ್ಲಿ ಬಂದ ಸಂದೇಶಗಳನ್ನು ನೋಡಿದೆವು. ಇದರಿಂದ ವಿದ್ಯಾರ್ಥಿಗಳ ಗುಂಪು ಶಾಲೆಯಲ್ಲಿ ಮತ್ತು ಶಾಲಾ ಬಸ್‌ನಲ್ಲಿ ಮಿಹಿರ್‌ಗೆ ಕ್ರೂರ ರ್ಯಾಗಿಂಗ್ ಮಾಡಿದ್ದಾರೆ ಎಂದು ತಿಳಿದು ಆಘಾತಕ್ಕೊಳಗಾಗಿದ್ದೇವೆ ಎಂದರು.
“ನಾವು ಸಂಗ್ರಹಿಸಿದ ಪುರಾವೆಗಳಿಂದ ಮಿಹಿರ್‌ನನ್ನು ಹೊಡೆಯಲಾಗಿದೆ ಎಂದು ತಿಳಿದುಬಂದಿದೆ. ಅವನನ್ನು ಬಲವಂತವಾಗಿ ಶೌಚಾಲಯಕ್ಕೆ ಕರೆದೊಯ್ಯಲಾಗಿದೆ. ಶೌಚಾಲಯದ ಸೀಟನ್ನು ನೆಕ್ಕುವಂತೆ ಒತ್ತಾಯಿಸಲಾಗಿದೆ. ಫ್ಲಶ್ ಮಾಡುವಾಗ ಅವನ ತಲೆಯನ್ನು ಶೌಚಾಲಯದಲ್ಲಿ ತಳ್ಳಲಾಯಿತು” ಎಂದಿದ್ದಾರೆ.
ನನ್ನ ಮಗ ಮಿಹಿರನಿಗೆ ಅವನ ಬಣ್ಣದ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿತ್ತು ಎಂದು ಅವರ ತಾಯಿ ಹೇಳಿದ್ದಾರೆ. ಸಾವಿನ ನಂತರವೂ ಕ್ರೌರ್ಯ ನಿಲ್ಲಲಿಲ್ಲ. ಆಘಾತಕಾರಿ ಚಾಟ್ ಸ್ಕ್ರೀನ್‌ಶಾಟ್‌ನಲ್ಲಿ ಕ್ರೌರ್ಯದ ಮಟ್ಟ ತಿಳಿದುಬಂದಿದೆ. 'ಅವನು ನಿಜವಾಗಿಯೂ ಸತ್ತನು' ಎಂದು ಬರೆಯಲಾಗಿತ್ತು. ಸಂದೇಶದಲ್ಲಿ ಮಿಹಿರ್ ಸಾವನ್ನು ಆಚರಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ