
ಮಲಪ್ಪುರಂ(ಆ.15): ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ಓರ್ವ ರೂಪದರ್ಶಿ ಹಾಗೂ ಆಕೆಯ ಮೂವರು ಸಹಚರರನ್ನು ಕೇರಳ ಪೊಲೀಸರು ಮಲಪ್ಪುರಂನಲ್ಲಿ ಬುಧವಾರ ಬಂಧಿಸಿದ್ದಾರೆ.
ಕಲ್ಲಿಕೋಟೆಯವಳಾದ ಜಿಸ್ಕಿರಾಜ್ ಬೆಂಗಳೂರಿನಲ್ಲಿ ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆಕೆಯ ಹಾಗೂ ಸಹಚರರ ಬಳಿ ನಿಷೇಧಿತ ಮಾದಕ ವಸ್ತುಗಳಿರುವುದು ಪತ್ತೆಯಾಗಿದೆ.
ಧಾರವಾಡ: ಅವಳಿ ನಗರ ಕ್ರೈಂಸಿಟಿ ಮುಕ್ತಗೊಳಿಸಲು ಪೊಲೀಸ್ ಕಮಿಷನರ್ ಪಣ
ತಮಗೆ ಸಿಕ್ಕ ಸುಳಿವನ್ನು ಆಧರಿಸಿ ಬೆಂಗಳೂರಿನಿಂದ ಕೇರಳಕ್ಕೆ ಜಿಸ್ಕಿ ಪ್ರಯಾಣಿಸುತ್ತಿದ್ದ ಬಸ್ ತಡೆದ ಪೊಲೀಸರಿಗೆ ಆಕೆಯ ಬ್ಯಾಗ್‌ನಲ್ಲಿ ನಿಷೇಧಿತ ಎಮ್‌ಡಿಎಮ್‌ಎ ಡ್ರಗ್ಸ್ ಪತ್ತೆಯಾಗಿವೆ. ಹೀಗಾಗಿ ಆಕೆಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ವಿಚಾರಣೆಯ ವೇಳೆ ಮಲಪ್ಪುರಂನಲ್ಲಿರುವ ಒಬ್ಬರಿಗೆ ಅದನ್ನು ತಲುಪಿಸಬೇಕಿತ್ತು ಎಂದು ಜಿಸ್ಕಿ ಒಪ್ಪಿಕೊಂಡಿದ್ದಾಳೆ. ಅವಳ ಹೇಳಿಕೆ ಆಧರಿಸಿ ಮಂಗಳವಾರ ಇನ್ನೂ ಮೂವರನ್ನು ಬಂಧಿಸಲಾಗಿದ್ದು, ಅವರೆಲ್ಲರೂ ಕೇರಳದವರೆಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ