ಬೆಂಗಳೂರು: ದಾಂಪತ್ಯದಲ್ಲಿ ವಿರಸದ ಸಿಟ್ಟಿನಲ್ಲಿ ಪತ್ನಿಗೆ ಇರಿದು ಕೊಂದ ಪತಿ ಸೆರೆ

By Kannadaprabha News  |  First Published Aug 15, 2024, 6:15 AM IST

ಜಟ್ಟಿಗನಹಳ್ಳಿ ನಿವಾಸಿ ಗೌರಿ ಕೊಲೆಯಾದ ದುರ್ದೈವಿ. ಈ ಕೃತ್ಯ ಸಂಬಂಧ ಮೃತಳ ಪತಿ ನಾಗೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಜಟ್ಟಿಗನಹಳ್ಳಿ ಸ್ಮಶಾನ ಸಮೀಪ ಪ್ರದೇಶದಲ್ಲಿ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಕೊಂದು ನಾಗೇಶ್ ಪರಾರಿಯಾಗಿದ್ದ.


ಬೆಂಗಳೂರು(ಆ.15):  ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದ ಪತಿಯನ್ನು ಕೃತ್ಯ ನಡೆದ ಕೆಲವೇ ತಾಸಿನಲ್ಲಿ ಕೆಂಗೇರಿ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಜಟ್ಟಿಗನಹಳ್ಳಿ ನಿವಾಸಿ ಗೌರಿ (30) ಕೊಲೆಯಾದ ದುರ್ದೈವಿ. ಈ ಕೃತ್ಯ ಸಂಬಂಧ ಮೃತಳ ಪತಿ ನಾಗೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಜಟ್ಟಿಗನಹಳ್ಳಿ ಸ್ಮಶಾನ ಸಮೀಪ ಪ್ರದೇಶದಲ್ಲಿ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಕೊಂದು ನಾಗೇಶ್ ಪರಾರಿಯಾಗಿದ್ದ.

Tap to resize

Latest Videos

ಮೂವರು ಸುಪಾರಿ ಕಿಲ್ಲರ್ಸ್‌ನಿಂದ ಶಿಕ್ಷಕಿಯ ಕುತ್ತಿಗೆ ಕುಯ್ದು ಕೊಲೆ: ಬೆಚ್ಚಿಬಿದ್ದ ಮುಳಬಾಗಿಲು!

ಖಾಲಿ ಪ್ರದೇಶದಲ್ಲಿ ರಕ್ತದ ಮಡುವಿನಲ್ಲಿ ಅಪರಿಚಿತ ಮೃತದೇಹವನ್ನು ಕಂಡು ಪೊಲೀಸ್ ನಿಯಂತ್ರಣ ಕೊಠಡಿಗೆ ಬೆಳಗ್ಗೆ ಸಾರ್ವಜನಿಕರು ಕರೆ ಮಾಡಿದ್ದರು. ಈ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಕೂಡಲೇ ಮೃತಳ ಗುರುತು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಅಧಿಕಾರಿಗಳು

ಎಂಟು ವರ್ಷಗಳ ಹಿಂದೆ ರಾಮನಗರ ಜಿಲ್ಲೆಯ ಗೌರಿ ಹಾಗೂ ನಾಗೇಶ್ ವಿವಾಹವಾಗಿದ್ದು, ಇತ್ತೀಚೆಗೆ ಕೌಟುಂಬಿಕ ಕಾರಣಕ್ಕೆ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಇದೇ ವಿಚಾರವಾಗಿ ಪರಸ್ಪರ ಜಗಳವಾಡುತ್ತಿದ್ದರು. ಕೊನೆಗೆ ದಾಂಪತ್ಯ ವಿರಸ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

click me!