ಮೂವರು ಸುಪಾರಿ ಕಿಲ್ಲರ್ಸ್‌ನಿಂದ ಶಿಕ್ಷಕಿಯ ಕುತ್ತಿಗೆ ಕುಯ್ದು ಕೊಲೆ: ಬೆಚ್ಚಿಬಿದ್ದ ಮುಳಬಾಗಿಲು!

By Govindaraj S  |  First Published Aug 14, 2024, 11:04 PM IST

ಶಿಕ್ಷಕಿಯ ಕುತ್ತಿಗೆ ಕುಯ್ದು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಮುತ್ಯಾಲಪೇಟೆ ಬಡಾವಣೆಯಲ್ಲಿ ನಡೆದಿದೆ. ದಿವ್ಯಶ್ರೀ (43) ಕೊಲೆಯಾದ ಶಿಕ್ಷಕಿ.


ಕೋಲಾರ (ಆ.14): ಶಿಕ್ಷಕಿಯ ಕುತ್ತಿಗೆ ಕುಯ್ದು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಮುತ್ಯಾಲಪೇಟೆ ಬಡಾವಣೆಯಲ್ಲಿ ನಡೆದಿದೆ. ದಿವ್ಯಶ್ರೀ (43) ಕೊಲೆಯಾದ ಶಿಕ್ಷಕಿ. ಮೂವರು ಹಂತಕರಿಂದ ಈ ಕೃತ್ಯ ನಡೆದಿದ್ದು, ಸುಪಾರಿ ಕಿಲ್ಲರ್ಸ್‌ನಿಂದ ಕೊಲೆ ಆಗಿರುವ ಅನುಮಾನ ವ್ಯಕ್ತವಾಗಿದೆ. ಸುಮಾರು ದಿನಗಳ ಕಾಲ ಶಿಕ್ಷಕಿಯ ಚಲನವಲನ ಗಮನಿಸಿ ಕೊಲೆಯಾಗಿದೆ ಎಂದು ತಿಳಿದುಬಂದಿದೆ.  ಮನೆಯಲ್ಲಿ ತನ್ನ ಮಗಳೊಂದಿಗೆ ಇದ್ದಾಗ ಕೊಲೆಯಾಗಿದ್ದು, ಈ ವೇಳೇ ಮಗಳನ್ನು ಕೊಲೆ ಮಾಡಲು ಯತ್ನ ನಡೆದಿದ್ದು, ಅದೃಷ್ಟವಶತ್ ಮಗಳು ಬಚಾವ್ ಆಗಿದ್ದಾಳೆ. 

ಮೃತ ಶಿಕ್ಷಕಿ ಮುಳಬಾಗಿಲು ತಾಲ್ಲೂಕು ಮುಡಿಯನೂರು  ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು, ಪತಿ ಪದ್ಮನಾಭ್ ಉದ್ಯಮಿಯಾಗಿದ್ದಾರೆ. ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್, ಎಫ್.ಎಸ್.ಎಲ್‌ ಹಾಗೂ ಶ್ವಾನ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಸಹ ಭೇಟಿ ನೀಡಿದ್ದಾರೆ. ಸದ್ಯ ಶಿಕ್ಷಕಿ ಕೊಲೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಶಿಕ್ಷಕಿ ಕೊಲೆಯಿಂದ ಮುಳಬಾಗಿಲು ನಗರದ ಜನ ಬೆಚ್ಚಿ ಬಿದ್ದಿದ್ದಾರೆ.

Tap to resize

Latest Videos

'ಇಲ್ಲಿ ಬರ್ತ್‌ಡೇ ಪಾರ್ಟಿ ಮಾಡ್ತೀರಿ, ದೇವರ ಪೂಜೆ ಯಾಕಿಲ್ಲ..' ನಾಗಪಾತ್ರಿ ಪ್ರಶ್ನೆಗೆ ತಬ್ಬಿಬ್ಬಾದ ಕಲಾವಿದರು!

ಪೊಲೀಸರ ಮೇಲೇ ಹಲ್ಲೆಗೆ ಯತ್ನ: ಬಂಧಿಸಲು ತೆರಳಿದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಪರಾರಿಯಾಗಲೆತ್ನಿಸಿದ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ಆತನನ್ನು ಬಂಧಿಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಭವಿತ್ (26) ಬಂಧಿತ ರೌಡಿ ಶೀಟರ್. ಈತನ ವಿರುದ್ಧ ಕೊಲೆ, ದರೋಡೆ, ಕೊಲೆ ಯತ್ನ ಸೇರಿದಂತೆ 7 ಪ್ರಕರಣಗಳು ದಾಖಲಾಗಿದ್ದವು. ಜಿಲ್ಲೆಯಿಂದ ಈತನನ್ನು ಗಡಿಪಾರುಗೊಳಿಸಲಾಗಿತ್ತು. ಶಿವಮೊಗ್ಗಕ್ಕೆ ಆರೋಪಿ ವಾಪಾಸ್ ಆಗಿದ್ದ. ಭಾನುವಾರ ರಾತ್ರಿ ಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಭವಿತ್‌ ಮತ್ತು ಇತರೆ ಇಬ್ಬರು ಸಾರ್ವಜನಿಕರನ್ನು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ್ದಾರೆ. 

ಈ ಸಂಬಂಧ ಆರೋಪಿ ಭವಿತ್‌ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಖಚಿತ ಮಾಹಿತಿ ಮೇರೆ ವಿನೋಬನಗರ ಠಾಣೆ ಸಬ್ ಇನ್ಸ್‌ಪೆಕ್ಟರ್‌ ಸುನೀಲ್ ನೇತೃತ್ವದ ತಂಡ ಆರೋಪಿ ಭವಿತ್‌ನನ್ನು ಬಂಧಿಸಲು ತೆರಳಿದ ವೇಳೆ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದ, ದಾಳಿಯಿಂದ ಸಿಬ್ಬಂದಿ ಶ್ರೀಕಾಂತ್ ಎಂಬುವರು ಗಾಯಗೊಂಡಿದ್ದಾರೆ. ತಕ್ಷಣವೇ ಆತ್ಮರಕ್ಷಣೆ ಉದ್ದೇಶದಿಂದ ಸಬ್ ಇನ್ಸ್‌ಪೆಕ್ಟರ್‌ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಿಂದು ಗಾಯಗೊಂಡಿದ್ದ ರೌಡಿ ಶೀಟರ್‌ ಭವಿತ್ ಹಾಗೂ ಆತನಿಂದ ಹಲ್ಲೆಗೆ ಒಳಗಾಗಿ ಗಾಯಗೊಂಡಿದ್ದ ಪೊಲೀಸ್‌ ಸಿಬ್ಬಂದಿ ಶ್ರೀಕಾಂತ್ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

click me!