ಚಿನ್ನ, ಜಮೀನು, BMW ಕಾರು; ಪ್ರಿಯಕರನ ವರದಕ್ಷಿಣೆ ಬೇಡಿಕೆಗೆ ಮದ್ವೆ ರದ್ದು, ವೈದ್ಯೆ ಬದುಕು ಅಂತ್ಯ!

Published : Dec 07, 2023, 03:17 PM IST
ಚಿನ್ನ, ಜಮೀನು, BMW ಕಾರು; ಪ್ರಿಯಕರನ ವರದಕ್ಷಿಣೆ ಬೇಡಿಕೆಗೆ ಮದ್ವೆ ರದ್ದು, ವೈದ್ಯೆ ಬದುಕು ಅಂತ್ಯ!

ಸಾರಾಂಶ

ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ವೈದ್ಯೆ ಪೋಷಕರ ಒಪ್ಪಿಸಿದ್ದಾಳೆ. ಮದುವೆಗೆ ಸಿದ್ಧತೆಯೂ ನಡೆದಿದೆ. ಎಲ್ಲರನ್ನೂ ಆಮಂತ್ರಿಸಿ ಆಗಿದೆ. ಆದರೆ ಅಂತಿಮ ಹಂತದಲ್ಲಿ ಪ್ರಿಯಕರ BMW ಕಾರು ಚಿನ್ನ ಸೇರಿದಂತೆ ಹಲವು ವರದಕ್ಷಿಣೆ ಡಿಮ್ಯಾಂಡ್ ಮಾಡಿದ್ದಾನೆ. ಈ ಬೇಡಿಕೆ ಪೂರೈಸಲು ವೈದ್ಯೆ ಪೋಷಕರಿಗೆ ಸಾಧ್ಯವಾಗದ ಕಾರಣ ಪ್ರಿಯಕರ ಮದುವೆ ರದ್ದು ಮಾಡಿದ್ದಾನೆ. ಇತ್ತ ವೈದ್ಯೆ ತನ್ನ ಬದುಕನ್ನೇ ಅಂತ್ಯಗೊಳಿಸಿದ್ದಾಳೆ.  

ತಿರುವನಂತಪುರಂ(ಡಿ.07) ಪ್ರೀತಿಗೆ ಕಣ್ಣಿಲ್ಲ, ಜಾತಿ ಇಲ್ಲ, ಧರ್ಮ, ಭಾಷೆ ಗಡಿಗಳ ಹಂಗಿಲ್ಲ. ಆದರೆ ಕೆಲ ಪ್ರೀತಿ ಹಾಗಲ್ಲ, ಮದುವೆ ಬಳಿಕ ಎಲ್ಲವೂ ಬದಲಾಗುತ್ತದೆ. ದುರಂತ ಅಂತ್ಯ ಕಾಣುತ್ತದೆ. ಇದೀಗ ಕೇರಳದ ತಿರುವನಂತಪುರಂದಲ್ಲಿ ವೈದ್ಯೆಯೊಬ್ಬಳು ದುರಂತ ಅಂತ್ಯಕಂಡಿದ್ದಾಳೆ.  ಎಲ್ಲರನ್ನೂ ಒಪ್ಪಿಸಿ ಮದುವೆಗೆ ಸಜ್ಜಾದ ವೈದ್ಯೆಗೆ ಆಘಾತವಾಗಿದೆ. ಮದುವೆಯಾಗಲು ತನ್ನ ಪ್ರಿಯಕರ 15 ಏಕರೆ ಜಮೀನು, 150 ಪವನ್ ಚಿನ್ನ ಹಾಗೂ BMW ಕಾರು ನೀಡುವಂತೆ ವರದಕ್ಷಿಣ ಬೇಡಿಕೆ ಇಟ್ಟಿದ್ದಾನೆ. ಈ ಬೇಡಿಕೆ ಪೂರೈಸಲು ಸಾಧ್ಯವಾಗದ ಕಾರಣ ಅಂತಿಮ ಹಂತದಲ್ಲಿ ಮದುವೆಯನ್ನು ರದ್ದು ಮಾಡಿದ್ದಾರೆ. ಆದರೆ ಈ ಆಘಾತದಿಂದ ವೈದ್ಯೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ತಿರುವಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸರ್ಜರಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ 26 ವರ್ಷದ ಡಾ. ಸಹನಾ ದುಡುಕಿನ ನಿರ್ಧಾರ ಇಡೀ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಕಾಲೇಜು ದಿನಗಳಿಂದ ಡಾ. ಇಎ ರುವಾಯಿಸ್ ಅನ್ನೋ ಹುಡುಗನ ಜೊತೆ ಪ್ರೀತಿ ಶುರುವಾಗಿತ್ತು. ಪೋಷಕರನ್ನು ಒಪ್ಪಿಸಿದ ಸಹನಾ ಮದುವೆಗೆ ಎಲ್ಲಾ ಸಿದ್ಧತೆ ಆರಂಭಿಸಿದ್ದಳು. 

ನಟಿಯೊಬ್ಬರ ಖಾಸಗಿ ಕ್ಷಣ ಸೆರೆಹಿಡಿದು ಬ್ಲ್ಯಾಕ್​ಮೇಲ್​- ನಟಿ ಆತ್ಮಹತ್ಯೆ: ಪುಷ್ಪ ನಟ ಜಗದೀಶ್​ ಅರೆಸ್ಟ್

ಮದುವೆ ಹತ್ತಿರಬರುತ್ತಿದ್ದಂತೆ ರುವಾಸಿಸ್ ವರ್ತನೆ ಬದಲಾಗಿದೆ. ಇದುವರೆಗೂ ನಿಷ್ಕಲ್ಮಶ ಪ್ರೀತಿ ಎಂದುಕೊಂಡಿದ್ದ ಡಾ.ಸಹನಾಗೆ ಆಘಾತವಾಗಿದೆ. ಕಾರಣ ವರದಕ್ಷಿಣೆ ನೀಡಿದರೆ ಮಾತ್ರ ಮದುವೆಯಾಗುತ್ತೇನೆ ಎಂದು ಖಡಾಖಂಡಿತವಾಗಿ ಸಹಾನಗೆ ಹೇಳಿದ್ದಾನೆ. 150 ಪವನ್ ಚಿನ್ನ, 15 ಏಕರೆ ಜಮೀನು ಹಾಗೂ BMW ಕಾರು ವರದಕ್ಷಿಣೆಯಾಗಿ ನೀಡಿದರೆ ಮಾತ್ರ ಮದುವೆಯಾಗುತ್ತೇನೆ ಎಂದಿದ್ದಾನೆ. ಡಾ ಸಹನಾ ತನ್ನ ಪೋಷಕರಿಗೆ ಈ ಕುರಿತು ಮಾಹಿತಿ ನೀಡಿದ್ದಾಳೆ. ಬಳಿಕ ಸಹನಾ ಹುಡುಗನ ಕುಟುಂಬದ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದಾಳೆ. ಆದರೆ ಯಾವುದೂ ಸಾಧ್ಯವಾಗಿಲ್ಲ.

ಮಗಳ ಮದುವೆ ನೆರವೇರಿಸಲು ಪೋಷಕರು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಕೇಳಿದ ವರದಕ್ಷಿಣೆ ಪೂರೈಸಲು ಸಹನಾ ಕುಟುಂಬಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಪ್ರಿಯಕರ ಮದುವೆ ರದ್ದು ಮಾಡಿದ್ದಾನೆ. ಈ ಆಘಾತದಿಂದ ತೀವ್ರ ಮನನೊಂದ ವೈದ್ಯೆ ಬದುಕು ಅಂತ್ಯಗೊಳಿಸಿದ್ದಾರೆ. ಈ ಘಟನೆ ಕೇರಳದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಆರೋಗ್ಯ ಸಚಿವೆ ವೀಣಾ ಜಾರ್ಜ್ ತನಿಖೆಗೆ ಆದೇಶಿಸಿದ್ದಾರೆ.

ಜನಪ್ರಿಯ ಧಾರವಾಹಿಗಳಲ್ಲಿ ನಟಿಸಿ ಇದೀಗ ಹೀರೋ ಆಗಲು ಹೋಗಿ ಜೈಲು ಸೇರಿದ ನಟ!

ಇತ್ತ ವೈದ್ಯೆ ಕುಟುಂಬಸ್ಥರು ಪೋಷಕರಿದಂ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಹೇಳಿಕೆಗಳನ್ನು ದಾಖಲಿಸಿದ್ದಾರೆ. ಜೊತೆಗೆ ವೀಣಾ ಮೊಬೈಲ್ ಫೋನ್ ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!