ಜಿಲ್ಲೆಯ ಯಕ್ಲಾಸಪೂರ ಬಡಾವಣೆಯಲ್ಲಿ ಬ್ಯಾರಲ್‌ಗಟ್ಟಲೇ ನಿಷೇಧಿತ ಸೇಂದಿ ಸಂಗ್ರಹ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ರಾಯಚೂರು ಗ್ರಾಮೀಣ ಪೊಲೀಸರು ಹಾಗೂ ಅಬಕಾರಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಸೇಂದಿ ಜಪ್ತಿ ಮಾಡಿದ್ದಾರೆ.
ರಾಯಚೂರು (ಡಿ.7) ಜಿಲ್ಲೆಯ ಯಕ್ಲಾಸಪೂರ ಬಡಾವಣೆಯಲ್ಲಿ ಬ್ಯಾರಲ್‌ಗಟ್ಟಲೇ ನಿಷೇಧಿತ ಸೇಂದಿ ಸಂಗ್ರಹ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ರಾಯಚೂರು ಗ್ರಾಮೀಣ ಪೊಲೀಸರು ಹಾಗೂ ಅಬಕಾರಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಸೇಂದಿ ಜಪ್ತಿ ಮಾಡಿದ್ದಾರೆ.
ಮನೆಯೊಂದರಲ್ಲಿ ತಾಯಿ ಮಗಳಿಬ್ಬರೂ ಸೇರಿಕೊಂಡು ಅಕ್ರಮ ಸೇಂದಿ ಮಾರಾಟ ದಂಧೆ ನಡೆಸುತ್ತಿದ್ದರು. ಕಾರ್ಯಾಚರಣೆ ವೇಳೆ ಮನೆಯಲ್ಲಿ ಬ್ಯಾರೆಲ್ ಗಟ್ಟಲೆ ಕಲಬೆರಕೆ ಸೇಂದಿ ಪತ್ತೆಯಾಗಿದೆ. 50,100,200 ರೂಪಾಯಿಗಳಿಗೆ ಕಲಬೆರಕೆ ಸೇಂದಿ ಮಾರಾಟ. ಸುಮಾರು 800 ಲೀಟರ್ ಸೇಂದಿ ಜಪ್ತಿ ಮಾಡಿದ ಅಬಕಾರಿ ಪೊಲೀಸರು
undefined
ಸಾರೇ ಜಹಾಸೇ ಅಚ್ಚಾ... ದೇಶಭಕ್ತಿ ಗೀತೆ ಮೂಲಕ ಯತ್ನಾಳ್‌ಗೆ ಟಾಂಗ್ ಕೊಟ್ಟ ಮೌಲ್ವಿ ತನ್ವೀರ್ ಹಾಶ್ಮಿ! ವೈರಲ್ ವಿಡಿಯೋ
ಜನವಸತಿ ಪ್ರದೇಶದಲ್ಲಿಯೇ ರಾಜಾರೋಷವಾಗಿ ನಿಷೇಧಿತ ಸೇಂದಿ ಮಾರಾಟ ಮಾಡಿದ್ದ ತಾಯಿ ಮಗಳು ಬಂದ ಲಾಭದಿಂದಲೇ ಹೊಸ ಮನೆ ನಿರ್ಮಾಣ ಮಾಡ್ತಿದ್ದರು. ನಿರ್ಮಾಣ ಹಂತದ ಮನೆಯ ಮೊದಲ ಮಹಡಿಯಲ್ಲಿ ಸೇಂದಿ ಶೇಖರಣೆ ಮಾಡಿದ್ದರು. ಬ್ಯಾರೆಲ್ & ಬುಟ್ಟಿ ಗಳಲ್ಲಿ ಕಲಬೆರಕೆ ಸೇಂದಿ ಇಟ್ಟಿದ್ದ ತಾಯಿ-ಮಗಳು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ತಡರಾತ್ರಿ ಕಾರ್ಯಾಚರಣೆ ನಡೆಸಿರುವ ಅಬಕಾರಿ ಪೊಲೀಸರು. ಮನೆಯ ಇಂಚಿಂಚು ಪಾತ್ರೆಗಳನ್ನ ಪರಿಶೀಲಿಸಿದ್ದಾರೆ. ಯಾರೂ ಒಳಬರದಂತೆ ಮನೆಯಲ್ಲಿ ಎರಡು ಕಾವಲು ನಾಯಿ ಸಾಕಿದ್ದ ಆರೋಪಿಗಳು.
ತೆಲಂಗಾಣದಿಂದ ಸಿ.ಎಚ್. ಪೌಡರ್ ತಂದು ಸೇಂದಿ ದಂಧೆ:
ತೆಲಂಗಾಣದಲ್ಲಿ ಸೇಂದಿ ಮಾರಾಟಕ್ಕೆ ಸರ್ಕಾರವೇ ಅನುಮತಿ ನೀಡಿದೆ. ಹೀಗಾಗಿ ತೆಲಂಗಾಣ ತುಂಬಾ ರಾಜಾರೋಷವಾಗಿ ಸೇಂದಿ ಮಾರಾಟವಾಗುತ್ತೆ.ಆದ್ರೆ ನಮ್ಮ ರಾಜ್ಯದಲ್ಲಿ ಸೇಂದಿ ನಿಷೇಧವಿದೆ. ಆದ್ರೂ ರಾಯಚೂರು ನಗರದ ಗಲ್ಲಿ ಗಲ್ಲಿಯ ಮನೆಗಳಲ್ಲಿ ಅಕ್ರಮವಾಗಿ ವಿಷಪೂರಿತ ಸೇಂದಿ ಮಾರಾಟ ದಂಧೆ ಜೋರಾಗಿ ನಡೆದಿದೆ. ಈ ಹಿಂದೆ ಕ್ವಿಂಟಾಲ್ ಗಟ್ಟಲೇ ಸಿ.ಎಚ್. ಪೌಡರ್ ತಂದು ಸೇಂದಿ ಮಾರಾಟ ದಂಧೆ ಮಾಡುವ ದಂಧೆಕೋರರು ಈಗ ಆ ದಂಧೆ ಬಿಟ್ಟಿದ್ದಾರೆ. ಅವರು ಮಾಡಿದ ದಂಧೆಯಿಂದ ಸೇಂದಿ ದಾಸರಾದ ಬಡ ಜನರು ಈಗ ಸಿ.ಎಚ್. ಪೌಡರ್ ಸೇಂದಿ ಮಾರಾಟಕ್ಕೆ ಇಳಿದಿದ್ದಾರೆ. ಲೀಟರ್ ಸಿ.ಎಚ್. ಪೌಡರ್ ಸೇಂದಿಗೆ 50ರೂಪಾಯಿಗೆ ನಗರದಲ್ಲಿ ಮಾರಾಟವಾಗುತ್ತಿದೆ.
ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು