ಮದುವೆ ಆಗುವುದಾಗಿ ನಂಬಿಸಿ ಗೆಳತಿಯನ್ನು ಲೈಂಗಿಕವಾಗಿ ಬಿಲಾಲ್ ಬಳಸಿಕೊಂಡಿದ್ದ. ಈ ಸಂಬಂಧ ಪರಿಣಾಮ ಆಕೆಗೆ ಗರ್ಭವತಿಯಾದ ವಿಚಾರ ತಿಳಿದು ತನ್ನ ವರ್ತನೆಯನ್ನು ಬದಲಾಯಿಸಿದ್ದ ಆರೋಪಿ
ಬೆಂಗಳೂರು(ಅ.10): ಖಾಸಗಿ ಆಸ್ಪತ್ರೆಯ ಶ್ರುಶೂಷಕಿಗೆ ಮದುವೆ ಆಗುವುದಾಗಿ ನಂಬಿಸಿ ಬಳಿಕ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ ಆರೋಪದ ಮೇರೆಗೆ ಆಕೆಯ ಗೆಳೆಯನೊಬ್ಬನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಬಿಲಾಲ್ ರಫೀಕ್ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಆತನ ವಿರುದ್ಧ ಶ್ರುಶೂಷಕಿ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಲವ್, ಸೆಕ್ಸ್, ಧೋಖಾ:
ಹೆಬ್ಬಾಳ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಛತ್ತೀಸ್‌ಘಡ ಮೂಲದ ಯುವತಿ ಕೆಲಸ ಮಾಡುತ್ತಿದ್ದು, ಎರಡು ವರ್ಷಗಳ ಹಿಂದೆ ಆಕೆಗೆ ಇನ್‌ಸ್ಟಾಗ್ರಾಂ ಮೂಲಕ ಬಿಲಾಲ್ ಪರಿಚಯವಾಗಿದೆ. ಬಳಿಕ ಪರಸ್ಪರ ಚಾಟಿಂಗ್ ನಡೆದು ಪ್ರೇಮಕ್ಕೆ ತಿರುಗಿತು. ಇದಾದ ನಂತರ ಹೆಬ್ಬಾಳ ಬಳಿ ಲಿವಿಂಗ್ ಟುಗೆದರ್‌ನಲ್ಲಿ ಇಬ್ಬರು ನೆಲೆಸಿದ್ದರು. ಆಗ ಮದುವೆ ಆಗುವುದಾಗಿ ನಂಬಿಸಿ ಗೆಳತಿಯನ್ನು ಲೈಂಗಿಕವಾಗಿ ಬಿಲಾಲ್ ಬಳಸಿಕೊಂಡಿದ್ದ. ಈ ಸಂಬಂಧ ಪರಿಣಾಮ ಆಕೆಗೆ ಗರ್ಭವತಿಯಾದ ವಿಚಾರ ತಿಳಿದು ತನ್ನ ವರ್ತನೆಯನ್ನು ಆರೋಪಿ ಬದಲಾಯಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಕದ್ದ ಚಿನ್ನ ಭಾವನ ಮನೆಯಲ್ಲಿ ಇಟ್ಟಿದ್ದ ಬಾಮೈದ, ಅವಮಾನದಿಂದ ಕತ್ತು ಕೊಯ್ದುಕೊಂಡು ಸಾವು
ಆದರೆ ಮದುವೆಯಾಗುವಂತೆ ಗೆಳೆಯನಿಗೆ ಸಂತ್ರಸ್ತೆ ಒತ್ತಾಯಿಸುತ್ತಿದ್ದಳು. ಆಗ ಆಕೆಗೆ ಜಾತಿನಿಂದನೆ ಮಾಡಿ ಆರೋಪಿಸಿ ಮದುವೆಗೆ ನಿರಾಕರಿಸಿದ. ಇದರಿಂದ ಬೇಸತ್ತು ಕೊನೆಗೆ ಆಕೆಗೆ ಗೋವಿಂದಪುರ ಠಾಣೆಗೆ ತೆರಳಿ ದೂರು ನೀಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಈ ಮೊದಲು ಕೇರಳದಲ್ಲಿ ಟರ್ಕಿ ದೇಶದ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಬಿಲಾಲ್, ನಂತರ ಬೆಂಗಳೂರಿಗೆ ಬಂದು ಮೆಕ್ಯಾನಿಕ್ ಆಗಿದ್ದ. ಆಗಲೇ ಆತನಿಗೆ ನರ್ಸ್ ಜತೆ ಪ್ರೇಮವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.