'ಕೊನೆಯ ಅಡುಗೆ ಮಾಡಿದ್ದೇನೆ, ಊಟ ಮಾಡಿ, ಜೀವನ ಸಾಕಾಗಿದೆ' ಎಂದು ಪತಿಗೆ ಹೇಳಿ ಜೀವಕ್ಕೆ ವಿದಾಯ ಹೇಳಿದ ಶಿಕ್ಷಕಿ!

ಮದುವೆಯಾದ ಮೇಲೆ ಅನುಭವಿಸಿದ ನೋವುಗಳ ಸರಮಾಲೆಯನ್ನೇ ತೆರೆದಿಟ್ಟು ಪಾಲಕರಿಗೆ ವಾಟ್ಸ್​ಆ್ಯಪ್​ ಸಂದೇಶ ಮಾಡಿ, ಶಿಕ್ಷಕಿಯೊಬ್ಬರು ಬದುಕನ್ನು ಅಂತ್ಯಗೊಳಿಸಿದ್ದಾರೆ!
 

Kendriya Vidyalaya teacher took extreme step after suffering for 5 years at the hands of husband and in laws suc

ದೆಹಲಿಯ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ 29 ವರ್ಷದ ಶಿಕ್ಷಕಿಯೊಬ್ಬರು ತಮ್ಮ ಪತಿ ಮತ್ತು ಅತ್ತೆ-ಮಾವನ ಕೈಯಲ್ಲಿ ಐದು ವರ್ಷಗಳ ಕಾಲ ನರಳಿದ ನಂತರ ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ. ಶಿಕ್ಷಕಿ ಅನ್ವಿತಾ ಶರ್ಮಾ ತಮ್ಮ ಹೆತ್ತವರಿಗೆ  ಕೊನೆಯ  ವಾಟ್ಸ್​ಆ್ಯಪ್​ ಸಂದೇಶವನ್ನು ಕಳುಹಿಸಿ ಅದರಲ್ಲಿ ತಾವು ಅನುಭವಿಸಿರುವ ನೋವನ್ನು ತೆರೆದಿಟ್ಟಿದ್ದಾರೆ.  "ಅವರು ಮದುವೆಯಾಗಿದ್ದು ನನ್ನನ್ನಲ್ಲ, ನನ್ನ ಕೆಲಸವನ್ನು. ನನ್ನ ಗಂಡನಿಗೆ ಕೆಲಸವೂ ಇದ್ದ ಸುಂದರ, ಶ್ರಮಶೀಲ ಹೆಂಡತಿ ಬೇಕಾಗಿದ್ದಳು. ನಾನು ನನ್ನ ಕೈಲಾದಷ್ಟು ಮಾಡಿದ್ದೇನೆ, ಆದರೆ ಅದು ಎಂದಿಗೂ ಅವರಿಗೆ ತೃಪ್ತಿ ಆಗಲೇ ಇಲ್ಲ.  ಅವರು ಅತ್ತೆ-ಮಾವನ ಮೇಲೆ ಮಾತ್ರ ಗಮನಹರಿಸುವ ವ್ಯಕ್ತಿಯನ್ನು ಬಯಸಿದ್ದರು, ಆದರೆ ನನ್ನ ಪೋಷಕರು ಮತ್ತು ಸಹೋದರ ನನಗೆ ಅಷ್ಟೇ ಮುಖ್ಯವಾಗಿದ್ದರು. ಕಳೆದ ಐದು ವರ್ಷಗಳಲ್ಲಿ ನನ್ನ ಪತಿ ಮತ್ತು ಅತ್ತೆ  ಕೊಟ್ಟ ನೋವು ಯಾರೂ ಅನುಭವಿಸಿರಲು ಸಾಧ್ಯವಿಲ್ಲ.  ನಾನು ಮಾಡಿದ ಎಲ್ಲದರಲ್ಲೂ ಅವರಿಗೆ ತಪ್ಪುಗಳೇ ಕಂಡುಬರುತ್ತಿದ್ದವು' ಎಂದು ಬರೆದಿದ್ದಾರೆ.  

"ನನ್ನ ಗಂಡನಿಗೆ ನನ್ನ ಬ್ಯಾಂಕ್ ಖಾತೆಗಳು, ಚೆಕ್‌ಬುಕ್ ಮತ್ತು ಎಲ್ಲದರಲ್ಲೂ ಪ್ರವೇಶವಿದೆ' ಎಂದಿರುವ ಅನ್ವಿತಾ ಶರ್ಮಾ ಅವರು, ದಯವಿಟ್ಟು ನನ್ನ ಮಗುವನ್ನು ನೀವೇ ನೋಡಿಕೊಳ್ಳಿ. ನಾನು ಈ ಜಗತ್ತಿನಲ್ಲಿ ನನ್ನ ಮಗನನ್ನು ಹೆಚ್ಚು ಪ್ರೀತಿಸುತ್ತೇನೆ ಮತ್ತು ನೀವು ಅವನನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವನು ತನ್ನ ತಂದೆಯಂತೆ ಆಗಬೇಕೆಂದು ನಾನು ಬಯಸುವುದಿಲ್ಲ ಎಂದು ಅಪ್ಪ-ಅಮ್ಮನಿಗೆ ಹೇಳಿದ್ದಾರೆ. "ನಾನು ಊಟ ತಯಾರಿಸಿದ್ದೇನೆ, ಗೌರವ್ ಕೌಶಿಕ್, ದಯವಿಟ್ಟು ಅದನ್ನು ತಿನ್ನಿರಿ." ಎಂದು ಹೇಳಿ ಈ ಸಂದೇಶವನ್ನು ಮುಗಿಸಿದ್ದಾರೆ! 

Latest Videos

ಸಂಬಂಧ ಹಾಳಾಗ್ಬಾರ್ದಾ? ಹಾಗಿದ್ರೆ ಇವ್ರನ್ನ ಮದ್ವೆಯಾಗಿ ಎಂದ ಟೆಕ್ಕಿ: ಏನ್​ ತಲೆ ಗುರೂ ಅಂತಿರೋ ನೆಟ್ಟಿಗರು!

ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಹಲವಾರು ಹೆಣ್ಣುಮಕ್ಕಳು ಇಂಥ ಹಿಂಸೆ ಅನುಭವಿಸುತ್ತಿರುವ ಬಗ್ಗೆ ಕಮೆಂಟ್​  ಮೂಲಕ ತಿಳಿಸಿದ್ದಾರೆ. ಅನ್ವಿತಾ ಅವರು, ಸಾಯುವ ಬದಲು ವಿಚ್ಛೇದನ ಪಡೆದುಕೊಳ್ಳಬಹುದಿತ್ತು.ಮಗುವಿಗಾದರೂ ಆಕೆ ಬದುಕಬೇಕಿತ್ತು. ಓರ್ವ ಶಿಕ್ಷಕಿಯಾಗಿ ಇಂಥ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ ಎಂದು ಹಲವರು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಮತ್ತೆ ಕೆಲವರು, ಕಾಲ ಎಷ್ಟೇ ಬದಲಾದರೂ ಹೆಣ್ಣಿನ ಮೇಲಿನ ಶೋಷಣೆ ನಿಲ್ಲುತ್ತಿಲ್ಲ. ಆಕೆ ಡಿವೋರ್ಸ್ ಪಡೆದುಕೊಂಡರೆ ಸಮಾಜದ ದೃಷ್ಟಿಯಲ್ಲಿ ಹೆಣ್ಣೇ ವಿಲನ್​ ಆಗಿಬಿಡುತ್ತಾಳೆ. ಆಕೆಯನ್ನು ನೋಡುವ ದೃಷ್ಟಿಗಳೂ ಸರಿಯಾಗಿರುವುದಿಲ್ಲ. ಆದ್ದರಿಂದ ಇವರು ಇಂಥ ಹೆಜ್ಜೆ ಇಟ್ಟಿರಬಹುದು ಎಂದಿದ್ದಾರೆ.

ಆದರೆ, ಅನ್ವಿತಾ ಅವರ ಸಾವು ಹೆಣ್ಣಿನ ಜೀವನ, ಆಕೆಯ ರಕ್ಷಣೆ, ಹೇಳಿಕೊಳ್ಳಲಾಗದ ನೋವುಗಳನ್ನು ತೆರೆದಿಟ್ಟಿದ್ದಾರೆ. 20-25 ವರ್ಷ ಸಾಕಿದ ಅಮ್ಮ-ಅಪ್ಪನನ್ನು ಮದುವೆಯಾದ ಹೆಣ್ಣು ದೂರ ಮಾಡಬೇಕು, ಆಕೆಗೆ ಅತ್ತೆ-ಮಾವನೇ ಸರ್ವಸ್ವ ಎನ್ನುವ ಮನಸ್ಥಿತಿ ಎಷ್ಟು ಘೋರವಾದದ್ದು ಎಂದು ಹಲವರು ಇದರಲ್ಲಿ ಉಲ್ಲೇಖಿಸಿದ್ದಾರೆ. ಎಷ್ಟೋ ಮನೆಗಳಲ್ಲಿ ಹೆಣ್ಣು ಇದೇ ಹಿಂಸೆಯನ್ನೇ ಅನುಭವಿಸುತ್ತಿದ್ದಾರೆ. ಕೆಲವು ಉದಾಹರಣೆಗಳು ಇದಕ್ಕೆ ಹೊರತಾಗಿರಬಹುದು. ಅತ್ತೆ-ಮಾವನನ್ನು ಕೆಟ್ಟದ್ದಾಗಿ ನೋಡಿಕೊಳ್ಳುವ ಸೊಸೆಯಂದಿರು ಇರಬಹುದು. ಆದರೆ ಇದಕ್ಕೆ ಹೋಲಿಸಿದರೆ ಬಹುತೇಕ ಮನೆಗಳಲ್ಲಿ ಸೊಸೆಯಾದ ಮೇಲೆ ಹೆಣ್ಣಿನ ಜೀವನವೇ ಬದಲಾಗಿ ಹೋಗುತ್ತದೆ. ಅದೃಷ್ಟವಂತರಿಗೆ ಮಾತ್ರ ಒಳ್ಳೆಯ ಗಂಡನ ಮನೆ ಸಿಗುತ್ತದೆ, ಆದರೆ ಉಳಿದವರ ಬಾಳು ನರಕವೇ ಎನ್ನುತ್ತಿದ್ದಾರೆ.  

ಬೋಟ್​ಮ್ಯಾನ್​ ಜೊತೆ ಮದುಮಗನ ಪ್ರೀ ವೆಡ್ಡಿಂಗ್​ ಶೂಟ್​... ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಶಾಕ್​!

 

vuukle one pixel image
click me!