ಹೋಂಸ್ಟೇನಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯನ್ನು ಕೋಣೆಯೊಳಗೆ ಎಳೆದೊಯ್ದು ಗ್ಯಾಂಗ್‌ ರೇಪ್‌: ವಿಡಿಯೋ ವೈರಲ್‌

By BK Ashwin  |  First Published Nov 13, 2023, 2:46 PM IST

ಅತ್ಯಾಚಾರಕ್ಕೊಳಗಾದವರು ಹೋಂಸ್ಟೇ ಉದ್ಯೋಗಿ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಮೇಲೆ ಪುರುಷರ ಗುಂಪೊಂದು ಹಲ್ಲೆ ನಡೆಸುತ್ತಿರುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ.


ಆಗ್ರಾ (ನವೆಂಬರ್ 13, 2023): ಉತ್ತರ ಪ್ರದೇಶದ ಆಗ್ರಾದ ತಾಜ್‌ಗಂಜ್ ಪ್ರದೇಶದ ಹೋಂಸ್ಟೇಯಲ್ಲಿ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಆಕ್ಷೇಪಾರ್ಹ ವಿಡಿಯೋವನ್ನು ಈ ಹಿಂದೆ ರೆಕಾರ್ಡ್‌ ಮಾಡಲಾಗಿತ್ತು. ಅದರ ಆಧಾರದ ಮೇಲೆ ಮಹಿಳೆಯನ್ನು ಬ್ಲ್ಯಾಕ್‌ಮೇಲ್‌ ಮಾಡಲಾಗಿದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.

ತನಗೆ ಬಲವಂತವಾಗಿ ಮದ್ಯ ಕುಡಿಸಲಾಯಿತು ಮತ್ತು ತನ್ನ ತಲೆಯ ಮೇಲೆ ಗಾಜಿನ ಬಾಟಲಿಯನ್ನು ಒಡೆದು ಹಾಕಲಾಯಿತು ಎಂದೂ 25 ವರ್ಷದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಸಂಬಂಧ ಮಾಹಿತಿ ನೀಡಿದ ಪೊಲೀಸ್‌ ಅಧಿಕಾರಿ, ಶನಿವಾರ ರಾತ್ರಿ, ತಾಜ್‌ಗಂಜ್ ಪೊಲೀಸರಿಗೆ ‘ರಿಚ್‌ ಹೋಂಸ್ಟೇ’ಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಲಾಗಿದೆ ಮತ್ತು ಹಲ್ಲೆ ಮಾಡಲಾಗಿದೆ ಎಂದು ಕರೆ ಬಂದಿತು. ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸಿಪಿ ಅರ್ಚನಾ ಸಿಂಗ್ ಹೇಳಿದ್ದಾರೆ.

Tap to resize

Latest Videos

ಇದನ್ನು ಓದಿ: ವಾಟ್ಸಾಪ್‌, ಎಸ್‌ಎಂಎಸ್‌ನಲ್ಲಿ ಬರುವ ಈ 7 ಸಂದೇಶಗಳ ಲಿಂಕನ್ನು ಯಾವ ಕಾರಣಕ್ಕೂ ಕ್ಲಿಕ್ ಮಾಡ್ಬೇಡಿ!

ಘಟನೆ ವರದಿಯಾದ ನಂತರ ಒಬ್ಬ ಮಹಿಳೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದೂ ಆಗ್ರಾ ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರಕ್ಕೊಳಗಾದವರು ಹೋಂಸ್ಟೇ ಉದ್ಯೋಗಿ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಮೇಲೆ ಪುರುಷರ ಗುಂಪೊಂದು ಹಲ್ಲೆ ನಡೆಸುತ್ತಿರುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ. ಈ ವೇಳೆ, ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಆಕೆ ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬರುತ್ತಿದೆ. ಹಾಗೂ, ಒಬ್ಬ ವ್ಯಕ್ತಿ ಅವಳನ್ನು ಕೋಣೆಯೊಳಗೆ ಎಳೆದೊಯ್ದಿದ್ದು, ಅವಳು ನೆಲದ ಮೇಲೆ ಮಲಗಿರುವುದನ್ನು ಹಾಗೂ ಪುರುಷರಿಂದ ಚಿತ್ರಹಿಂಸೆ ಅನುಭವಿಸುವುದನ್ನು ವಿಡಿಯೋ ತೋರಿಸುತ್ತದೆ.

ಘಟನೆಯ ನಂತರ ನಾಲ್ವರು ಪುರುಷರು ಮತ್ತು ಮಹಿಳೆಯನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗುವುದು ಮತ್ತು ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಘಟನೆ ಬಗ್ಗೆ ಮಾಹಿತಿ ನೀಡಿದ ಅರ್ಚನಾ ಸಿಂಗ್ ಹೇಳಿದರು. ಸಂತ್ರಸ್ತೆ ಸಲ್ಲಿಸಿದ ದೂರಿನ ಆಧಾರದ ಮೇಲೆ, ಹಲವು ಸೆಕ್ಷನ್‌ಗಳಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ‘ಎಣ್ಣೆ’ ಕೊಡ್ಲಿಲ್ಲ ಅಂತ ವೈನ್ ಶಾಪ್‌ಗೆ ಬೆಂಕಿ ಹಚ್ಚಿದ ಭೂಪ: ಲಕ್ಷಾಂತರ ಮೌಲ್ಯದ ಮದ್ಯ ನಾಶ!

ಬಂಧಿತ ವ್ಯಕ್ತಿಗಳಲ್ಲಿ ‘ರಿಚ್ ಹೋಂಸ್ಟೇ’ ಮ್ಯಾನೇಜರ್ ರವಿ ರಾಥೋಡ್ ಮತ್ತು ಅವರ ಸ್ನೇಹಿತರಾದ ಮನೀಶ್ ರಾಥೋಡ್, ಜಿತೇಂದ್ರ ರಾಥೋಡ್ ಮತ್ತು ದೇವ್ ಕಿಶೋರ್ ಇದ್ದಾರೆ. ಸಂತ್ರಸ್ತೆಯ ಆಕ್ಷೇಪಾರ್ಹ ವಿಡಿಯೋ ಮಾಡಲು ಆರೋಪಿಗಳಿಗೆ ಸಹಾಯ ಮಾಡಿದ ಮಹಿಳಾ ಉದ್ಯೋಗಿಯನ್ನೂ ಬಂಧಿಸಲಾಗಿದೆ.

ಇದನ್ನೂ ಓದಿ: ಡಿಸಿಪಿ ಕಚೇರಿ ಮುಂಭಾಗವೇ ನಡೆಯಿತು ಯುವತಿ ಮೇಲೆ ದೌರ್ಜನ್ಯ; ಬಟ್ಟೆ ಹಿಡಿದು ಎಳೆದಾಡಿ ಕಾಮುಕ ಎಸ್ಕೇಪ್!

click me!