
ಕಾರವಾರ, ಉತ್ತರ ಕನ್ನಡ (ಆಗಸ್ಟ್,20): ದೀರ್ಘಕಾಲದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಕಾರವಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಕಡಪಾ ನಿವಾಸಿಯಾದ ಶಿವರಾಮ ರೆಡ್ಡಿ ಎಂಬಾತನೇ ಬಂಧಿತ ಆರೋಪಿ.
2011ರಲ್ಲಿ ಅಕ್ರಮವಾಗಿ ಗೋವಾ ಸಾರಾಯಿ ಮಾರಾಟ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಈತನನ್ನು ಮೊದಲು ಬಂಧಿಸಲಾಗಿತ್ತು. ಕಾರವಾರದ ಮಾಜಾಳಿ ಘೋಟ್ನೇಭಾಗ್ ಕೋಮಾರಪಂತ್ ಕ್ರಾಸ್ ಬಳಿ ಈತನ ಬಂಧನವಾಗಿತ್ತು. ಪೊಲೀಸರು ಆಗ ಶಿವರಾಮ ರೆಡ್ಡಿಯ ಬಳಿ ಸುಮಾರು 4000 ರೂಪಾಯಿ ಬೆಲೆಯ ವಿಸ್ಕಿ ಮತ್ತು ಬ್ರಾಂಡಿ ಬಾಟಲಿಗಳನ್ನು ಒಳಗೊಂಡ ಬ್ಯಾಗ್‌ವೊಂದನ್ನು ವಶಪಡಿಸಿಕೊಂಡಿದ್ದರು
ಇದನ್ನೂ ಓದಿ:. ಹಾವೇರಿ: ಪತ್ನಿಯ ಶೀಲ ಶಂಕಿಸಿ ಕುತ್ತಿಗೆ ಚಾಕು ಇರಿದ ಪಾಪಿ ಪತಿ! ಸಪ್ತಪದಿ ತುಳಿದವಳ ಸ್ಥಿತಿ ಚಿಂತಾಜನಕ!
ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಶಿ ವರಾಮ ರೆಡ್ಡಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ಹುಡುಕಾಟದಲ್ಲಿ ತೊಡಗಿದ್ದ ಕಾರವಾರ ಚಿತ್ತಾಕುಲ ಪೊಲೀಸ್ ಠಾಣೆಯ ಪಿಎಸ್‌ಐ ಮಹಾಂತೇಶ್ ವಾಲ್ಮೀಕಿ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮತ್ತೆ ಬಂಧಿಸಿದೆ.
ಈ ಘಟನೆಯಿಂದ ಕಾರವಾರದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸ್ ಇಲಾಖೆಯ ಕಠಿಣ ಕ್ರಮದ ಬಗ್ಗೆ ಮತ್ತೊಮ್ಮೆ ಸಾಬೀತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ