ಪಿಎಸ್ಐ ಹಗರಣ ತನಿಖೆ ಮತ್ತಷ್ಟು ಚುರುಕು, 2 ವರ್ಷದ ಬಳಿಕ ಕಿಂಗ್‌ಪಿನ್‌ ಆರ್‌ಡಿ ಪಾಟೀಲ್‌ ಬಂಟರು ಬಂಧನ!

Published : Feb 18, 2024, 12:38 PM ISTUpdated : Feb 18, 2024, 12:40 PM IST
ಪಿಎಸ್ಐ ಹಗರಣ ತನಿಖೆ ಮತ್ತಷ್ಟು ಚುರುಕು,  2 ವರ್ಷದ ಬಳಿಕ  ಕಿಂಗ್‌ಪಿನ್‌ ಆರ್‌ಡಿ ಪಾಟೀಲ್‌ ಬಂಟರು ಬಂಧನ!

ಸಾರಾಂಶ

ಪಿಎಸ್ಐ  ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಎರಡು ವರ್ಷಗಳ ಬಳಿಕ ಮೂವರು ಆರೋಪಿಗಳನ್ನು ಬಂಧಿಸಿದೆ.

ಕಲಬುರಗಿ (ಫೆ.18): ಎರಡು ವರ್ಷಗಳಿಂದ ವಿವಾದದಲ್ಲಿ ಸಿಲುಕಿರುವ 545 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿ ಹಗರಣದ ತನಿಖೆ ಮತ್ತೆ ಚುರುಕುಗೊಂಡಿದೆ. ಪಿಎಸ್ಐ  ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಮೂವರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳು ಅಭ್ಯರ್ಥಿಗಳಿಗೆ ಬ್ಲೂಟೂಥ್ ಮೂಲಕ ಉತ್ತರ ಹೇಳಿ ಕೊಟ್ಟಿದ್ದಕ್ಕೆ ಸಂಬಂಧಿಸಿದಂತೆ  ಕಲಬುರಗಿ ಅಶೋಕ್ ನಗರದಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಈಗ ಸಿಐಡಿ ಬಂಧಿಸಿದೆ. 

ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಂಧಿಸಿದಂತೆ  ಶನಿವಾರ ಮಧ್ಯಾಹ್ನ ಆರ್‌ ಡಿ ಪಾಟೀಲ್‌ನ ಬಲಗೈ ಬಂಟರಾದ ಇಬ್ಬರು ಸರಕಾರಿ ನೌಕರರು ಹಾಗೂ ಬಿ ಕಾಂ ವಿದ್ಯಾರ್ಥಿ ಸಿಐಡಿ ಬಲೆಗೆ ಬಿದ್ದಿದ್ದಾರೆ. ಸಿಐಡಿ ಅಧಿಕಾರಿಗಳು  ಕಲಬುರಗಿಯಲ್ಲಿ ಮೂವರನ್ನ ಬಂಧನ ಮಾಡಿದ್ದಾರೆ.

ನಮ್ಮ ಮೆಟ್ರೋ ಬೆಂಗಳೂರಿನಿಂದ ತುಮಕೂರುವರೆಗೆ ವಿಸ್ತರಣೆಗೆ ವರದಿ ತಯಾರಿಕೆ, ಬಜೆಟ್‌ ನಲ್ಲಿ ಸಿಎಂ ಘೋಷಣೆ

ಬಂಧಿತ ಆರೋಪಿಗಳೆಲ್ಲರೂ ಪಿಎಸ್‌ಐ ಪರಿಕ್ಷಾ ಹಗರಣ ಮತ್ತು ಕೆಇಎ ಪರೀಕ್ಷೆ ಅಕ್ರಮದ ಕಿಂಗ್‌ಪಿನ್‌ ಆರ್ ಡಿ ಪಾಟೀಲ್ ಜೊತೆ ಸಂಪರ್ಕವಿದ್ದವರಾಗಿದ್ದಾರೆ. ಬಂಧಿತ ಚಂದ್ರಕಾಂತ್ ಪ್ಯಾಟಿ ಆರೋಗ್ಯ ಇಲಾಖೆ ಶಹದಾಬಾದ್ ನಲ್ಲಿ ಎಫ್ ಡಿಎ ಅಧಿಕಾರಿಯಾಗಿದ್ದಾನೆ. ಮತ್ತೋರ್ವ ಬಂಧಿತ ಬಸವರಾಜನ್ ಸಿದ್ದರಾಮಪ್ಪ ಅಫ್ಜಲ್‌ಪುರದ ಬಿಸಿಎಂ ವಸತಿ ನಿಲಯದ ಸೂಪರಿಂಟೆಂಡೆಂಟ್‌ ಆಗಿದ್ದಾನೆ. ಮೂರನೇ ಬಂಧಿತ ಆರೋಪಿ ಶಶಿಧರ್ ಬಿಕಾಂ ವಿದ್ಯಾರ್ಥಿಯಾಗಿದ್ದಾನೆ.

ಆರೋಪಿಗಳು ಪ್ರಶ್ನೆಗಳಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳುವ ಕೆಲಸವನ್ನು ಮಾಡ್ತಿದ್ದರು.  ಈಗಾಗಲೇ ಬಂಧಿತರಾಗಿರುವ ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ಉತ್ತರ ಕೊಟ್ಟಿದ್ದರ ಬಗ್ಗೆ ಸಿಐಡಿ ಪ್ರಮುಖ ಸಾಕ್ಷ್ಯ ಕಲೆ ಹಾಕಿದೆ. ಆರ್ ಡಿ ಪಾಟೀಲ್ ನ ಕೆಲ ಸಂಪರ್ಕಿತರ ಮೂಲಕ ಸಿಕ್ಕ ಸಾಕ್ಷ್ಯ ಹಾಗೂ ಬಂಧಿತ ಆರೋಪಿ ಸಿದ್ದುಗೌಡ ಮತ್ತು  ಅಭ್ಯರ್ಥಿಗಳು ಕೊಟ್ಟ ಮಾಹಿತಿ ಆಧರಿಸಿ ಈ ಮೂವರ ಬಂಧನವಾಗಿದೆ.

ನಟಿ ಜಯಾ ಬಚ್ಚನ್ ಬಳಿ 40 ಕೋಟಿಗೂ ಹೆಚ್ಚು ಬಂಗಾರ ಇರುವುದು ಬಹಿರಂಗ, ಅಮಿತಾಬ್ ಬಳಿ ಇನ್ನೂ ಹೆಚ್ಚು!

ಸದ್ಯ ಮೂವರು ಆರೋಪಿಗಳನ್ನ ಸಿಐಡಿ ಸಂಜೆ ಕಲ್ಬುರ್ಗಿಯ ಕೋರ್ಟ್ ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದೆ. ಕಲಬುರಗಿಯಲ್ಲೇ  ಆರೋಪಿಗಳ ವಿಚಾರಣೆ ನಡೆಯಲಿದೆ.

ಈಗಾಗಲೇ ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ಮಾಜಿ ಮುಖ್ಯಸ್ಥ ಎಡಿಜಿಪಿ ಅಮೃತ್‌ಪೌಲ್‌, ಪೊಲೀಸ್‌ ಅಧಿಕಾರಿಗಳು,  ಹಾಗೂ ಅಭ್ಯರ್ಥಿಗಳು ಸೇರಿದಂತೆ ರಾಜ್ಯಾದ್ಯಂತ 100ಕ್ಕೂ ಹೆಚ್ಚಿನ ಜನರು ಬಂಧಿತರಾಗಿದ್ದು, ಈ ಹಗರಣವು ಸಾರ್ವಜನಿಕ ಹಾಗೂ ರಾಜಕೀಯ ವಲಯಗಳಲ್ಲಿ ಭಾರಿ ಬಿರುಗಾಳಿ ಎಬ್ಬಿಸಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!