ರಿಪಬ್ಲಿಕ್‌ ಟಿವಿ ಸಿಒಒ ಪ್ರಿಯಾ ಮುಖರ್ಜಿಗೆ ಬೆಂಗಳೂರಿನಲ್ಲಿ ಬಿಗ್‌ ರಿಲೀಫ್

By Suvarna NewsFirst Published Nov 25, 2020, 4:40 PM IST
Highlights

ಬೆಂಗಳೂರಿನಲ್ಲಿಯೂ ಟಿಆರ್ ಪಿ ಗೋಲ್ ಮಾಲ್ ಪ್ರಕರಣದ ಸದ್ದು/ ರಿಪಬ್ಲಿಕ್ ಟಿವಿ ಸಿಒಒ ಪ್ರಿಯಾ ಮುಖರ್ಜಿಗೆ 20 ದಿನದ ಟ್ರಾನ್ಸಿಟ್ ಜಾಮೀನು / ಕರ್ನಾಟಕ ಹೈ ಕೋರ್ಟ್ ಆದೇಶ/ ಮುಂಬೈ ಪೊಲೀಸರು ನನ್ನನ್ನು ಇಲ್ಲಿ ಬಂಧಿಸುವ ಸಾಧ್ಯತೆ ಇದೆ ಎಂದು  ನ್ಯಾಯಾಲಯದ ಮೆಟ್ಟಿಲು ಏರಿದ್ದರು.

ಬೆಂಗಳೂರು/ ಮುಂಬೈ (ನ. 25) ಕರ್ನಾಟಕ ಹೈ ಕೋರ್ಟ್ ರಿಪಬ್ಲಿಕ್ ಟಿವಿ ಸಿಒಒ ಪ್ರಿಯಾ ಮುಖರ್ಜಿಗೆ 20 ದಿನದ ಟ್ರಾನ್ಸಿಟ್ ಜಾಮೀನು ನೀಡಿದೆ. ಟಿಆರ್‌ಪಿ ಹಗರಣದ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ನೀಡಿದೆ.

ಎಆರ್‌ಜಿ ಮೀಡಿಯಾ ಲಿಮಿಡೆಟ್ ಮುನ್ನಡೆಸುತ್ತಿರುವ ಮುಖರ್ಜಿ ಅವರ ನೇತೃತ್ವದಲ್ಲಿಯೇ ರಿಪಬ್ಲಿಕ್ ಟಿವಿ ಮತ್ತು ಆರ್ ಭಾರತ್ ವಾಹಿನಿಗಳು ಬರುತ್ತವೆ. ಮುಂಬೈ ಪೊಲೀಸರು  ಟಿಆರ್‌ಪಿ(ಟೆಲಿವಿಷನ್ ರೇಟಿಂಗ್) ನಲ್ಲಿ ಗೋಲ್ ಮಾಲ್ ಆಗಿದೆ ಎಂದು ಎಫ್‌ಐಆರ್ ದಾಖಲಿಸಿಕೊಂಡಿದ್ದರು.

ಏನಿದು ಟಿಆರ್‌ ಪಿ ಹಗರಣ? ಸಂಪೂರ್ಣ ಮಾಹಿತಿ

ಇಪ್ಪತ್ತು ದಿನಗಳ ನಂತ ಮುಖರ್ಜಿ ಕಾನೂನು ಸಲಹೆ ಪಡೆದುಕೊಂಡು ಮುಂದಿನ ಹೆಜ್ಜೆ ಇಡಬಹುದು.  ಒಂದು ವೇಳೆ ಅದಕ್ಕೂ ಮುನ್ನ ಅವರನ್ನು ಬಂಧನ ಮಾಡಲು ಮುಂದಾದರೆ ಎರಡು ಲಕ್ಷ ರೂ. ಶ್ಯೂರಿಟಿಯೊಂದಿಗೆ ಬಿಡುಗಡೆ ಮಾಡಬೇಲಾಗುತ್ತದೆ.

ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವಂತೆ ಕಾಣುತ್ತಿದೆ.  ಹಾಗಾಗಿ ನಿಗದಿತ ಅವಧಿಗೆ ಟ್ರಾನ್ಸಿಟ್ ಜಾಮೀನು ನೀಡಲಾಗುತ್ತಿದೆ ಎಂದು ನ್ಯಾಯಮೂರ್ತಿ ಎಚ್‌ಪಿ ಸಂದೇಶ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಮುಂಬೈ ಪೊಲೀಸರು ತಮ್ಮನ್ನು ಬೆಂಗಳೂರಿನಲ್ಲಿ ಬಂಧನ ಮಾಡಬಹುದು ಎಂದು ಮುಖರ್ಜಿ ನ್ಯಾಯಾಲಯದ ಮೊರೆ ಹೋಗಿದ್ದರು . 

click me!