ಹುಲಿ ಉಗುರು ಧರಿಸಿ ಶೋಕಿ ತೋರಿದ ಇಬ್ಬರು ಅರಣ್ಯಾಧಿಕಾರಿಗಳು ಸಸ್ಪೆಂಡ್

By Gowthami K  |  First Published Oct 27, 2023, 1:38 PM IST

ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ  ಹುಲಿ ಉಗುರು ಧರಿಸಿದ ಅರಣ್ಯಾಧಿಕಾರಿಗಳನ್ನ ಸಸ್ಪೆಂಡ್ ಮಾಡಲು ಸಚಿವ ಈಶ್ವರ್‌ ಖಂಡ್ರೆ ಸೂಚನೆ ನೀಡಿದ್ದಾರೆ.


ಬೆಂಗಳೂರು (ಅ.27): ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ  ಹುಲಿ ಉಗುರು ಧರಿಸಿದ ಅರಣ್ಯಾಧಿಕಾರಿಗಳನ್ನ ಸಸ್ಪೆಂಡ್ ಮಾಡಲು ಸಚಿವ ಈಶ್ವರ್‌ ಖಂಡ್ರೆ ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆಗೊಂದು ನ್ಯಾಯ, ಜನ ಸಾಮಾನ್ಯನಿಗೊಂದು ನ್ಯಾಯ ಎಂದು ಸುವರ್ಣ ನ್ಯೂಸ್ ವರದಿ ಮಾಡಿದ್ದ ಬೆನ್ನಲ್ಲೇ ಸಸ್ಪೆಂಡ್ ಮಾಡಲು ಸೂಚನೆ ನೀಡಿದ್ದಾರೆ.

ಜೊತೆಗೆ ಇಬ್ಬರು ಅರಣ್ಯಾಧಿಕಾರಿಗಳ ಮಾಹಿತಿ ತೆಗೆದುಕೊಂಡ ಸಚಿವ ಈಶ್ವರ್ ಖಂಡ್ರೆ ಹುಲಿ ಉಗುರು ಧರಿಸಿದ ಅರಣ್ಯಾಧಿಕಾರಿಗಳನ್ನ ಸಸ್ಪೆಂಡ್ ಮಾಡಲು ಏಷ್ಯಾ ಸುವರ್ಣ ನ್ಯೂಸ್ ಕ್ಯಾಮೆರಾ ಎದುರೇ PCCF ಗೆ ಸೂಚನೆ ನೀಡಿದರು.

Tap to resize

Latest Videos

ವರ್ತೂರು ಸಂತೋಷ್‌ ಬಂಧನ ಬೆನ್ನಲ್ಲೇ ಅರಣ್ಯ ಅಧಿಕಾರಿಗಳ ಮೇಲೆ ಹಲವು ಅನುಮಾನ!

DRFO ದರ್ಶನ್ ಎಂಬವರು ಹುಲಿ ಉಗುರು ಧರಿಸಿದ್ದ ಬಗ್ಗೆ ದೂರು ದಾಖಲಾಗಿತ್ತು. ಅಲ್ಲದೇ ಚಿಕ್ಕಬಳ್ಳಾಪುರ RFO ಮುನಿರಾಜ್ ಕೂಡ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ರು ಇಬ್ಬರ ಕುರಿತು ಅರಣ್ಯ ಇಲಾಖೆಗೆ ದೂರು ದಾಖಲಾಗಿತ್ತು. ಪಿಸಿಸಿಎಫ್ ಪುಷ್ಕರ್ ಕುಮಾರ್ ಗೆ ಕರೆ ಮಾಡಿ ತನಿಖೆ ಪ್ರಗತಿಯಲ್ಲಿ ಇಟ್ಟು ಸಸ್ಪಂಡ್ ಮಾಡಲು ಸೂಚನೆ ನೀಡಿದರು.

DRFO ದರ್ಶನ್ ವಿಚಾರಣೆಗೆ ಹಾಜರಾಗದೇ ಇರುವ ಬಗ್ಗೆ ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಸಸ್ಪಂಡ್ ಮಾಡಿ ಎಂದು ದೂರವಾಣಿಯಲ್ಲೇ ಈಶ್ವರ್ ಖಂಡ್ರೆ ತಿಳಿಸಿದರು. ಈ ಮೂಲಕ ತಪ್ಪು ಮಾಡಿದ ಅರಣ್ಯಾಧಿಕಾರಿಗಳ ವಿರುದ್ಧವೂ ಈಶ್ವರ್ ಖಂಡ್ರೆ ಖಡಕ್ ಕ್ರಮ ನಿರ್ವಹಿಸಿದ್ದಾರೆ.

ಇನ್ನು ಹುಲಿ ಉಗುರು ಪ್ರಕರಣದಲ್ಲಿ ಹಿಂದೂಗಳ ಟಾರ್ಗೆಟ್ ಎಂಬ ಅರವಿಂದ ಬೆಲ್ಲದ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಅರವಿಂದ ಬೆಲ್ಲದ್ ಅವರಿಂದ ಇಂತಹ ಹೇಳಿಕೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಅರವಿಂದ್ ಬೆಲ್ಲದ್ ಅವರನ್ನ ಬುದ್ದಿವಂತ ರಾಜಕಾರಣಿ ಎಂದು ನಾನು ತಿಳಿದುಕೊಂಡಿದ್ದೆ.

 

ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಶಾಕ್ ಮೇಲೆ ಶಾಕ್, ಅಳಿಯನ ಮನೆ ಬಾಗಿಲು ಬಡಿದ ಅರಣ್ಯಾಧಿಕಾರಿಗಳು!

ಈ ವಿಚಾರದಲ್ಲೂ ರಾಜಕೀಯ ತರುತ್ತಾರೆ ಯಾವ ಮಟ್ಟಿಗೆ ಹೋಗಿದ್ದಾರೆ. ಇದನ್ನ ಯಾರು ಆಲೋಚನೆ ಮಾಡಲು ಸಾಧ್ಯವಿಲ್ಲ. ಜಾತಿ-ಜಾತಿ ಧರ್ಮ-ಧರ್ಮ ಹೊಡೆದಾಡುವ ನೀತಿಯನ್ನೇ ಅನುಸರಿಸಿ ಇಡೀ ರಾಜ್ಯ ರಾಷ್ಟ್ರದಲ್ಲಿ ಬೇಧ ವಾತಾವರಣ ನಿರ್ಮಾಣ ಮಾಡಿದ್ದಾರೆ. ಇಂಥ ಹೇಳಿಕೆಗಳನ್ನು ಕೊಟ್ಟು ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ , ಇದನ್ನ ನಾನು ಖಂಡಿಸುತ್ತೇನೆ. ಇದರಲ್ಲಿ ಯಾವುದೇ ಜಾತಿ ಧರ್ಮ ಸಂಬಂಧ ಪಡುವುದಿಲ್ಲ. ಸರ್ಕಾರ ಸಮಾನವಾಗಿ ಎಲ್ಲರನ್ನು ನೋಡುತ್ತದೆ ಎಂದು ತಿರುಗೇಟು ನೀಡಿದ್ದಾರೆ.
 

click me!