ಕಂಠಪೂರ್ತಿ ಕುಡಿದು ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರನ ರಂಪಾಟ

Published : Oct 27, 2023, 09:39 AM ISTUpdated : Oct 27, 2023, 02:49 PM IST
ಕಂಠಪೂರ್ತಿ ಕುಡಿದು ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರನ ರಂಪಾಟ

ಸಾರಾಂಶ

ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಂ ಬಿದ್ದಪ್ಪ ಮತ್ತೊಂದು ಪುಂಡಾಟ ಮೆರೆದಿದ್ದಾನೆ. ರಾತ್ರಿ ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಹೈಡ್ರಾಮಾ ಮಾಡಿ  ಕೇಸ್ ದಾಖಲಾಗಿದೆ.

ಬೆಂಗಳೂರು (ಅ.27): ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಮತ್ತೊಂದು ಪುಂಡಾಟ ಮೆರೆದಿದ್ದಾನೆ. ರಾತ್ರಿ ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಹೈಡ್ರಾಮಾ ಮಾಡಿದ್ದು, ಪ್ರಸಾದ್  ಪುತ್ರ ಆ್ಯಡಂ ಬಿದ್ದಪ್ಪ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

ಕಾನೂನು ಸುವ್ಯವಸ್ಥೆ ಮತ್ತು ಸಂಚಾರಿ ಎರಡೂ ಪೊಲೀಸರು ಬಂದರೂ ಆ್ಯಡಂ ಬಿದ್ದಪ್ಪ ಅವರನ್ನು ಹತೋಟಿಗೆ ತರಲು ಹರಸಾಹಸ ಪಟ್ಟರು. ಮೊನ್ನೆ ರಾತ್ರಿ ಯಲಹಂಕದ ರಸ್ತೆಯಲ್ಲಿ ಘಟನೆ  ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ವರ್ತೂರು ಸಂತೋಷ್‌ ಬಂಧನ ಬೆನ್ನಲ್ಲೇ ಅರಣ್ಯ ಅಧಿಕಾರಿಗಳ ಮೇಲೆ ಹಲವು ಅನುಮಾನ!

ಆ್ಯಡಂ ಬಿದ್ದಪ್ಪ ಕಂಠಪೂರ್ತಿ ಕುಡಿದು ಅತಿವೇಗದ ಚಾಲನೆ ಮಾಡುತ್ತಿದ್ದ, ಈ ವೇಳೆ ರಾಹುಲ್ ಎಂಬಾತ‌ ಹಿಂದೆಯಿಂದ ಕಾರ್ ಹಾರನ್ ಮಾಡಿದ್ದ. ಅಷ್ಟಕ್ಕೇ ಆ್ಯಡಂ  ಕಾರ್ ಓವರ್ ಟೇಕ್ ಮಾಡಿ ರೋಡ್  ಬ್ಲಾಕ್ ಮಾಡಿ ಗಲಾಟೆ ಮಾಡಿದ್ದಾನೆ. ಆ್ಯಡಂ ರಂಪಾಟ ತಡೆಯಲಾಗದ ರಾಹುಲ್‌  ಕೂಡಲೇ ಪೊಲೀಸ್ ಎಮರ್ಜೆನ್ಸಿ ಸಂಖ್ಯೆ 112ಗೆ ಕರೆ ಮಾಡಿದ್ದರು.

ಸ್ಥಳಕ್ಕೆ ಬಂದ ಪೊಲೀಸರ ಜೊತೆ ಕೂಡ  ಬಿದ್ದಪ್ಪ ಕೂಗಾಟ ನಡೆಸಿದ್ದು, ಅಷ್ಟರಲ್ಲಾಗಲೇ  ಯಲಹಂಕ ಸಂಚಾರಿ ಪೊಲೀಸರು ಸಹ ಸ್ಥಳಕ್ಕೆ ಬಂದರು. ಈ ವೇಳೆ ಆ್ಯಡಂ ಪರಿಶೀಲಿಸಲಾಗಿ ಕಂಠ ಪೂರ್ತಿ ಕುಡಿದಿರುವುದು ಪತ್ತೆಯಾಯ್ತು. ತಕ್ಷಣ ಯಲಹಂಕ ಸಂಚಾರಿ ಪೊಲೀಸರು ಆತನ ಕಾರ್ ಸೀಜ್ ಮಾಡಿದರು. ಬಳಿಕ ಯಲಹಂಕ ನ್ಯೂಟೌನ್ ಪೊಲೀಸರು  ಆ್ಯಡಂ ಬಿದ್ದಪ್ಪನ ವಶಕ್ಕೆ ಪಡೆದರು.

ಉಡುಪಿ ರೈಲ್ವೆ ಮೇಲ್ವೇತುವೆಯಲ್ಲಿ ಆತ್ಮಹತ್ಯೆ ತನಿಖೆಗೆ ಪೊಲೀಸರು ಹೋದಾಗ ಸಡನ್‌ ಟ್ರೈನ್‌ ಎಂಟ್ರಿ!

ಮತ್ತೊಂದೆಡೆ ರಾಹುಲ್ ದೂರಿನ ಹಿನ್ನೆಲೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆ್ಯಡಂ ವಶಕ್ಕೆ ಪಡೆದ ಪೊಲೀಸರು ಮೆಡಿಕಲ್ ಮಾಡಿಸಿದಾಗ ಕುಡಿದಿರುವುದು ಸ್ಪಷ್ಟವಾಗಿದೆ.  

ಆ್ಯಡಂ ಕುಡಿದು ಗಲಾಟೆ ಮಾಡಿರುವುದು ಇದೇ ಮೊದಲೇನಲ್ಲ, ಈ ಹಿಂದೆ ಕೂಡ ಇದೇ ರೀತಿ ಪ್ರಕರಣದಲ್ಲಿ ಸಿಲುಕಿ ಬಂಧನವಾಗಿತ್ತು. ಸ್ಯಾಂಡಲ್​ವುಡ್​ ಖ್ಯಾತ ನಟಿಯೊಬ್ಬರಿಗೆ ಕಳೆದ ವರ್ಷ ಫೆಬ್ರವರಿ ತಿಂಗಳ ಮಧ್ಯರಾತ್ರಿ ಆ್ಯಡಂ ಬಿದ್ದಪ್ಪ ಅಶ್ಲೀಲ ಮೆಸೇಜ್ ಕಳಿಸಿದ್ದಾರೆ ಎಂದು ದೂರು ನೀಡಿ, ಬಂಧನವಾಗಿದ್ದನು. ಈತ ನಟ ಅಭಿಷೇಕ್‌ ಅಂಬರೀಶ್ ಅವರ ಪತ್ನಿ ಅವಿವಾ ಬಿದ್ದಪ್ಪ ಅವರ ಸಹೋದರ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!