ಬಿಟ್‌ ಕಾಯಿನ್‌ ಹಗರಣ: ಮಗದೊಬ್ಬ ಪೊಲೀಸ್ ಅರೆಸ್ಟ್, ಅಧಿಕಾರಿಗಳಿಗೆ ಕಾರಿಂದ ಗುದ್ದಿ ಆರೋಪಿ ಡಿವೈಎಸ್ಪಿ ಎಸ್ಕೇಪ್!

By Suvarna News  |  First Published Feb 28, 2024, 4:26 PM IST

ಬಿಟ್ ಕಾಯಿನ್ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪೊಲೀಸ್‌ ಅಧಿಕಾರಿಯನ್ನು ಎಸ್ ಐಟಿ ಬಂಧಿಸಿದೆ.  ಇನ್ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯ ಎಂಬುವವರನ್ನು  ಬಂಧಿಸಿದ್ದು,  ಶ್ರೀಧರ್ ಬಂಧನಕ್ಕೆ ತೆರಳಿದಾಗ ಪೊಲೀಸರಿಗೆ ಗುದ್ದಿದ್ದಾನೆ.


ಬೆಂಗಳೂರು (ಫೆ.28):  ಬಿಟ್ ಕಾಯಿನ್ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪೊಲೀಸ್‌ ಅಧಿಕಾರಿಯನ್ನು ಎಸ್ ಐಟಿ ಬಂಧಿಸಿದೆ.  ಇನ್ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯ ಎಂಬುವವರನ್ನು  ಬಂಧಿಸಿದ್ದು, ಇವರು ಸಿಸಿಬಿಯಲ್ಲಿ ಬಿಟ್ ಕಾಯಿನ್ ಕೇಸ್ ತನಿಖಾಧಿಕಾರಿ ಆಗಿದ್ರು. ಇಂದು ಬೆಳಗ್ಗೆ ಲಕ್ಷೀಕಾಂತಯ್ಯನನ್ನು  ಎಸ್ ಐಟಿ ಬಂಧಿಸಿದ್ದು, 1ನೇ ACMM ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹೆಚ್ಚಿನ ವಿಚಾರಣೆ ಹಿನ್ನೆಲೆ  ಇನ್ಸಪೆಕ್ಟರ್  ಕಾಂತಯ್ಯ ಮಾ.7ರವರೆಗೆ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶಿಸಲಾಗಿದೆ.

ನಿನ್ನೆ ಪ್ರಕರಣ ಸಂಬಂಧ ಪೊಲೀಸ್‌ ಅಧಿಕಾರಿ ಶ್ರೀಧರ್ ಪೂಜಾರ್ ಬಂಧಿಸಲು ತೆರಳಿದಾಗಿ  ಕಾರಿನಿಂದ ಗುದ್ದಿ ಪರಾರಿಯಾಗಿದ್ದ. ಮತ್ತೊಬ್ಬ ಇನ್ಸ್ಪೆಕ್ಟರ್ ಚಂದ್ರಾಧರ್ ಕೂಡ ಎಸ್ಕೇಪ್ ಆಗಿದ್ದಾನೆ. ಸದ್ಯ ತಲೆಮರೆಸಿಕೊಂಡಿರುವ ಶ್ರೀಧರ್ ಪೂಜಾರ್ ಹಾಗೂ ಚಂದ್ರಾಧರ್ ಗಾಗಿ ಎಸ್ಐಟಿ ತೀವ್ರ ಹುಡುಕಾಟ ನಡೆಸುತ್ತಿದೆ.

Latest Videos

undefined

ಬಿಟ್‌ ಕಾಯಿನ್ ಹಗರಣದ ಬಂಧಿತ ಪೊಲೀಸ್‌ ಅಧಿಕಾರಿಗೆ ಕೋರ್ಟ್‌ನಿಂದ ಛೀಮಾರಿ, ಜಾಮೀನು ನಿರಾಕರಣೆ

ಶ್ರೀಧರ್ ವಿರುದ್ಧ ಮತ್ತೆ ಪ್ರಕರಣ ದಾಖಲು: ಇನ್ನು ಬಿಟ್ ಕಾಯಿನ್ ಹಗರಣ ಪ್ರಕರಣದ  ಪ್ರಮುಖ ಆರೋಪಿಯನ್ನು ಬಂಧಿಸೋದಕ್ಕೆ ತೆರಳಿದಾಗ ಆರೋಪಿ ಎಸ್ಕೇಪ್ ಆಗಿದ್ದು, ಪೊಲೀಸರಿಗೆ ಕಾರಿನಿಂದ ಗುದ್ದಿ ಆರೋಪಿ ಡಿವೈಎಸ್ಪಿ ಶ್ರೀಧರ್ ಪೂಜಾರ್ ಎಸ್ಕೇಪ್ ಆಗಿದ್ದಾನೆ. ಮಂಗಳವಾರ ಕಾಫಿ ಬೋರ್ಡ್ ಸಿಗ್ನಲ್ ಬಳಿ ಘಟನೆ ನಡೆದಿದ್ದು, ಎಸ್ಐಟಿ ತಂಡದ ಇನ್ಸ್ಪೆಕ್ಟರ್ ಅನಿಲ್ ಮತ್ತು ತಂಡ ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 

ಶ್ರೀಧರ್ ಪೂಜಾರ್‌ ವಿರುದ್ಧ 307 ಕೊಲೆ ಯತ್ನ, 353 ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್  ದಾಖಲು ಮಾಡಲಾಗಿದೆ. ಬಿಟ್ ಕಾಯಿನ್ ಪ್ರಕರಣ ಸಂಬಂಧ ಶ್ರೀಧರ್ ಜಾಮೀನು ಅರ್ಜಿ ಹಾಕಿದ್ದ ಆದರೆ ಜಾಮೀನು ಅರ್ಜಿ ನ್ಯಾಯಾಲಯ ವಜಾಗೊಳಿಸಿತ್ತು. ಜಾಮೀನು ವಜಾ ಹಿನ್ನಲೆ ಪ್ರಮುಖ ಆರೋಪಿ ಶ್ರೀಧರ್ ಬಂಧನಕ್ಕೆ ಎಸ್‌ಐಟಿ ಹೋಗಿತ್ತು. ಈ ವೇಳೆ ಪೊಲೀಸರಿಗೆ‌ ಗುದ್ದಿ ಎಸ್ಕೇಪ್ ಆಗಿದ್ದಾನೆ. ಹಿಡಿಯಲು ಹೋದ ಎಸ್ಐಟಿ ಎಎಸ್ ಐ ಭಾಸ್ಕರ್ ಸಣ್ಣ ಪುಟ್ಟ ಗಾಯವಾಗಿದೆ.

ಪರಿಷತ್‌ ಗದ್ದಲ ತಾರಕ್ಕಕ್ಕೆ, ರವಿಕುಮಾರ್-ಜಬ್ಬಾರ್ ನಡುವಿನ ಗಲಾಟೆ ನಿಲ್ಲಿಸಲು ಮಾರ್ಷಲ್‌ಗಳ ಎಂಟ್ರಿ!

ಎಸ್‌ಐಟಿ ಎಫ್‌ಐಆರ್‌ನಲ್ಲಿ ಆರೋಪಿಯಾಗಿರುವ ನಾಲ್ವರು ಮಾಜಿ ಅಪರಾಧ ವಿಭಾಗದ ಅಧಿಕಾರಿಗಳೆಂದರೆ ಪೂಜಾರ್, ಇನ್ಸ್‌ಪೆಕ್ಟರ್‌ಗಳಾದ ಪ್ರಶಾಂತ್ ಬಾಬು, ಚಂದ್ರಧರ್ ಎಸ್ ಆರ್ ಮತ್ತು ಲಕ್ಷ್ಮೀಕಾಂತಯ್ಯ ಮತ್ತು 2020 ರಲ್ಲಿ ತನಿಖೆಗೆ ಸಹಾಯ ಮಾಡಿದ ಖಾಸಗಿ ಸೈಬರ್ ತಜ್ಞ ಕೆ ಎಸ್ ಸಂತೋಷ್ ಕುಮಾರ್.

ಶುಕ್ರವಾರ, ವಿಶೇಷ ಸಿಐಡಿ ನ್ಯಾಯಾಲಯವು ಜನವರಿ 24 ರಂದು ಬಂಧನಕ್ಕೊಳಗಾದ ಬಾಬು ಮತ್ತು ಕುಮಾರ್ ಅವರ ಜಾಮೀನು ಅರ್ಜಿಗಳನ್ನು ಅಂಗೀಕರಿಸಿತು.  ಮಾಜಿ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಶ್ರೀಧರ್ ಪೂಜಾರ್ ಅವರ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿತು. ಪೂಜಾರ್ ಪ್ರಕರಣದಲ್ಲಿ ತನಿಖೆಗೆ ಸಹಕರಿಸದ ಕಾರಣ ಅವರ ಕಸ್ಟಡಿ ವಿಚಾರಣೆ ಅಗತ್ಯವಾಗಬಹುದು ಎಂದು ನ್ಯಾಯಾಲಯ ಹೇಳಿತ್ತು.

ಮೂರು ವರ್ಷಗಳ ಹಿಂದೆ ಬಿಟ್‌ ಕಾಯಿನ್ ಹಾಗೂ ಡ್ರಗ್ಸ್ ಪ್ರಕರಣಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ಆತನ ಗೆಳೆಯರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಳಿಕ ಬಿಟ್‌ ಕಾಯಿನ್ ಪ್ರಕರಣದಲ್ಲಿ ದೊಡ್ಡ ಪ್ರಮಾಣ ಹಣದ ಅವ್ಯವಹಾರ ನಡೆದಿದೆ ಎಂದು ಆರೋಪ ಬಂದ ಹಿನ್ನೆಲೆಯಲ್ಲಿ ಸರ್ಕಾರ ಎಸ್‌ಐಟಿ ರಚಿಸಿದೆ. ಹೀಗಾಗಿ ಅಂದು ಬಿಟ್‌ ಕಾಯಿನ್‌ ಪ್ರಕರಣ ನಡೆದಾಗ ಸಿಸಿಬಿಯಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳನ್ನು ಎಸ್‌ಐಟಿ  ವಿಚಾರಣೆ ನಡೆಸಿದೆ. ಅಂತೆಯೇ ಆಗಿನ ಸಿಸಿಬಿ ಡಿಸಿಪಿಗಳಾದ ಕೆ.ಪಿ.ರವಿಕುಮಾರ್, ಬಿ.ಎಸ್‌.ಅಂಗಡಿ, ಎಸಿಪಿ ನಾಗರಾಜ್‌ ಹಾಗೂ ಇನ್ಸ್‌ಪೆಕ್ಟರ್‌ಗಳ ವಿಚಾರಣೆ ಬಳಿಕ ಕೊನೆಗೆ ಐಜಿಪಿ ಸಂದೀಪ್ ಪಾಟೀಲ್ ಅವರನ್ನು ಎಸ್‌ಐಟಿ  ವಿಚಾರಣೆ ನಡೆಸಿತ್ತು. ವಿಚಾರಣೆಯಂತೆ ಈಗ ಒಬ್ಬಬ್ಬೊರಾಗಿ ಬಂಧನವಾಗುತ್ತಿದ್ದಾರೆ.

click me!