ಮ್ಯಾಟ್ರಿಮೊನಿ ಸೈಟ್‌ನಲ್ಲಿ ನಾನು ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿ ಎಂದು 25 ವರ್ಷದ ಯುವಕನ ಫೋಟೋ ಹಾಕಿ ನಕಲಿ ಖಾತೆಯನ್ನು ತೆರೆದ ಅಂಕಲ್ ಬರೋಬ್ಬರಿ 250 ಮಹಿಳೆಯರಿಗೆ ವಂಚನೆ ಮಾಡಿದ್ದಾನೆ.
ಬೆಂಗಳೂರು (ಫೆ.28): ದೇಶದಲ್ಲಿ ಲಕ್ಷಾಂತರ ಯುವಕ ಯುವತಿಯರು ತಮ್ಮ ಬಾಳ ಸಂಗಾತಿಗಾಗಿ ಮ್ಯಾಟ್ರಿಮೊನಿ ವೆಬ್‌ಸೈಟ್‌ಗೆ ಲಾಗಿನ್ ಆಗಿ ತಮ್ಮ ಸಂಗಾತಿ ಹುಡುಕುತ್ತಾರೆ. ಆದರೆ, ಇಲ್ಲೊಬ್ಬ ಅಂಕಲ್ ಮ್ಯಾಟ್ರಿಮೊನಿ ಸೈಟ್‌ನಲ್ಲಿ ತನ್ನ 25 ವರ್ಷದ ಫೋಟೋವನ್ನು ಹಾಕಿ ಮ್ಯಾಟ್ರಿಮೊನಿ ಸೈಟ್‌ನಲ್ಲಿ ನಕಲಿ ಖಾತೆಯನ್ನು ತೆರೆದು ಬರೋಬ್ಬರಿ 250 ಮಹಿಳೆಯರು ಹಾಗೂ ಯುವತಿಯರಿಗೆ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ನಾವು ಕಣ್ಣಾರೆ ನೋಡಿದ ಹುಡುಗ- ಹುಡುಗಿಯರನ್ನೇ ನಂಬುವುದಕ್ಕೆ ಸಾಧ್ಯವಿಲ್ಲದಂಥಾ ಕಾಲದಲ್ಲಿ ಮ್ಯಾಟ್ರಿಮೊನಿ ಸೈಟ್‌ನಲ್ಲಿ ನೋಡಿದ ಹುಡುಗ ಅಥವಾ ಹುಡುಗಿಯನ್ನು ಮದುವೆ ಆಗುವ ಮುನ್ನ ನೂರಾರು ಬಾರಿ ಆಲೋಚನೆ ಮಾಡಿ, ಅವರ ಬಗ್ಗೆ ಸತ್ಯಾಸತ್ಯತೆ ತಿಳಿದುಕೊಂಡು ಮುಂದುವರೆಯಬೇಕು. ಇಲ್ಲವಾದಲ್ಲಿ ಕೈಯಲ್ಲಿರುವ ಹಣ, ಶೀಲವನ್ನು ಕಳೆದುಕೊಂಡು ಮೋಸ ಹೋಗಬೇಕಾಗುತ್ತದೆ. ಇನ್ನು ಮ್ಯಾಟ್ರಿಮೊನಿಯಲ್ ವೆಬ್‌ಸೈಟ್ ಒಳ್ಳೆಯ ಉದ್ದೇಶಕ್ಕೆ ಆರಂಭಿಸಿದ್ದರೂ, ಅದನ್ನು ದುರುಪಯೋಗ ಮಾಡಿಕೊಳ್ಳುವ ಕ್ರಿಮಿಗಳೂ ಅದರಲ್ಲಿದ್ದು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
undefined
ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರು ತಾಯಿ ಗಂ**ರು-ಯತ್ನಾಳ್; ಸೂ**ಮಗ, ಬೋ** ಮಗ- ರಾಯರೆಡ್ಡಿ
ಬೆಂಗಳೂರು ಸಿಟಿ ರೈಲ್ವೆ ಪೊಲೀಸರ ಕಾರ್ಯಚರಣೆಯಿಂದ 250 ಮಹಿಳೆಯರಿಗೆ, ಯುವತಿಯರಿಗೆ ಮದುವೆಯಾಗುವುದಾಗಿ ವಂಚನೆ ಮಾಡುತ್ತಿದ್ದ ಆರೋಪಿ ಬಂಧನವಾಗಿದೆ. ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಗಳಲ್ಲಿ ನಕಲಿ ಖಾತೆ ಸೃಷ್ಟಿಸಿಕೊಂಡು ವಂಚನೆ ಮಾಡುತ್ತಿದ್ದನು. ಅದರಲ್ಲಿಯೂ ವಿಧವೆಯರು ಹಾಗೂ ವಿಚ್ವೇದಿತ ಮಹಿಳೆಯರಿಗೆ ವಂಚನೆ ಮಾಡುವುದು ಈತನ ಖಯಾಲಿಯಾಗಿತ್ತು. ಏರ್ ಪೋರ್ಟ್ ಕಸ್ಟಮ್ಸ್ ಅಧಿಕಾರಿ ಎಂದು ಮಹಿಳೆಯರಿಗೆ ವಂಚನೆ ಮಾಡುತ್ತಿದ್ದ ನರೇಶ್ ಪುರಿ ಗೋಸ್ವಾಮಿ ಆರೋಪಿಯಾಗಿದ್ದಾನೆ.
ಕೊಯಮತ್ತೂರು ಮೂಲದ ಮಹಿಳೆಯೊಬ್ಬರನ್ನ ಮದುವೆ ಮಾತುಕತೆಗೆ ಬೆಂಗಳೂರಿಗೆ ಕರೆಸಿಕೊಳ್ಳುತ್ತಿದ್ದನು. ಬಳಿಕ ಟಿಕೆಟ್ ರಿಸರ್ವೇಷನ್ ಮಾಡಿಸಬೇಕಿರುವುದರಿಂದ ಪರ್ಸ್ ಮನೆಯಲ್ಲಿಯೇ ಬಿಟ್ಟು ಬಂದಿದ್ದಾಗಿ ತಿಳಿಸಿ ಹಣ ಪಡೆಯುತ್ತಿದ್ದನು. ಆರೋಪಿ ಎರಡು ಸಿಮ್ ಕಾರ್ಡ್ ಗಳನ್ನ ಬ್ಲಾಕ್ ನಲ್ಲಿ ಬಳಸುತ್ತಿದ್ದನು. ಹಿಂದಿ ಪತ್ರಿಕೆಯಲ್ಲಿ ಜಾಹಿರಾತಿನಲ್ಲಿ ಬರುವ ವಧು -ವರ ಮೊಬೈಲ್ ಪೋನ್ ಮಾಡುತ್ತಿದ್ದನು. ಅಗರ್ ಸೇನಾಜಿ ವೈವಾಹಿಕ ಮಂಚ್ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಸೇರ್ಪಡೆಕೊಳ್ಳುತ್ತಿದ್ದನು.
ಮಂಡ್ಯ: ರೈಲ್ವೆ ಪೊಲೀಸ್ ಪೇದೆಗೆ ಚಾಕುವಿನಿಂದ ಇರಿತ, ದುಷ್ಕರ್ಮಿಗಳಿಂದ ಕೊಲೆಗೆ ಯತ್ನ
ಮಹಿಳೆಯರನ್ನು ಗುರುತಿಸಿ ಅವರನ್ನ ಪೋನ್ ಮೂಲಕ ಮಾತನಾಡಿ ಅವರೊಂದಿಗೆ ಸಲುಗೆ ಬೆಳಸಿ ಮದುವೆ ಆಗುವುದಾಗಿ ನಂಬಿಸುತ್ತಿದ್ದನು. ರಾಜಸ್ಥಾನದ 56, ಉತ್ತರ ಪ್ರದೇಶದ 32, ದೆಹಲಿಯ 32, ಕರ್ನಾಟಕದ 17, ಮಧ್ಯಪ್ರದೇಶದ 16, ಮಹಾರಾಷ್ರ ದ 13, ಗುಜರಾತ್ 11 ಮಹಿಳೆಯರಿಗೆ ವಂಚನೆ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಇದೇ ರೀತಿ ಹಲವು ಮಹಿಳೆಯರಿಗೆ ವಂಚನೆ ಮಾಡಿದ ಪ್ರಕರಣಗಳು ಬಯಲಿಗೆ ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.