Karnataka AIMIM ಪಕ್ಷದ ರಾಜ್ಯಾಧ್ಯಕ್ಷ ವಿವಾದಾತ್ಮಕ ಹೇಳಿಕೆ, ಕೇಸ್ ಬುಕ್

By Suvarna News  |  First Published Jan 14, 2022, 9:27 PM IST

* AIMIM ಪಕ್ಷದ ರಾಜ್ಯಾಧ್ಯಕ್ಷನ ವಿವಾದಾತ್ಮಕ ಹೇಳಿಕೆ
* ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
* ಭಾರತ ಮಾತೆ ತಾಯಿ ಎನ್ನುವ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ
* ವಿಡಿಯೋ ವೈರಲ್ ಬೆನ್ನಲ್ಲೆ ಎಫ್ಐಆರ್ ದಾಖಲು


ಬಾಗಲಕೋಟೆ, (ಜ.14): ಕರ್ನಾಟಕ ಎಐಎಂಐಎಂ(All India Majlis-e-Ittehadul Muslimeen) ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನಗಣಿ ಹುಮ್ನಾಬಾದ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇತ್ತೀಚೆಗೆ ಬಾಗಲಕೋಟೆ(Bagalkot) ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ನಡೆದಿದ್ದ ಡಾ.ಎಪಿಜೆ ಅಬ್ದುಲ್ ಕಲಾಂ ವೃತ್ತ ಉದ್ಘಾಟನೆ ಕಾರ್ಯಕ್ರದಲ್ಲಿ ಉಸ್ಮಾನಗಣಿ ಹುಮನಾಬಾದ್ Usmangani Humnabad), ಭಾರತ ಮಾತೆ ತಾಯಿ ಎನ್ನುವ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

Tap to resize

Latest Videos

Women Marriage Age: '18ನೇ ವಯಸ್ಸಿಗೆ ಪ್ರಧಾನಿ ಆಯ್ಕೆ ಮಾಡಬಹುದು, ಆದರೆ ಮದುವೆಯಾಗಬಾರದು'

 ಅದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ. ಇದನ್ನು ಗಮನಿಸಿದ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಲಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಬೆನ್ನಲ್ಲೆ ಉಸ್ಮಾನಗಣಿ ಹುಮ್ನಾಬಾದ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಉಸ್ಮಾನಗಣಿ ಕ್ಷಮೆ ಯಾಚಿಸುವಂತೆ ಆಗ್ರಹ ವ್ಯಕ್ತವಾಗುತ್ತಿದೆ.

ಹೇಳಿದ್ದೇನು?
ಬೋಲೋ ಭಾರತ ಮಾತಾ ಕೀ ಜೈ ಅನ್ನೋದು ಅನ್ ಸೈಂಟಿಪಿಕ್ ವರ್ಡ್ (ಅವೈಜ್ಞಾನಿಕ‌ ಪದ) ಎಂದು ಭಾಷಣದಲ್ಲಿ ಹೇಳಿದ್ದರು. ಬೇರೆಯವರು ಇದನ್ನೆಲ್ಲ  ಬರೀ ಮಾತಿಗೆ ಹೇಳ್ತಾರೆ. ನಾನು ಎಂಐಎಂ ರಾಜ್ಯಾಧ್ಯಕ್ಷನಾಗಿ ಹೇಳ್ತೇನೆ. ಒಂದು ಮಗುವಿಗೆ ಜನ್ಮ ಕೊಡಲು ತಾಯಿಗಳು ಎಷ್ಟು ಬೇಕು...?  ಒಬ್ಬ ತಾಯಿ ಸಾಕಲ್ವಾ? ಮತ್ತೆ ಈ ಭಾರತ್ ಮಾತಾ, ಗಂಗಾ ಮಾತಾ, ಗಾಯ್ ಮಾತಾ ಎಲ್ಲಿ ಬರ್ತಾಳೆ. ಕಂಡ ಕಂಡವರಿಗೆ ತಾಯಿ ಅನ್ನುತ್ತಾ ಹೋದರೆ ಮುಂದೆ ದೇಶದ ಗತಿ ಏನು...? ಇವು ಅನ್ ಸೈಂಟಿಪಿಕ್ ವರ್ಡ್ ಎಂದು ಭಾರತ‌ಮಾತೆಗೆ ಅವಮಾನಿಸುವಂತ ಹೇಳಿಕೆ ನೀಡಿದ್ದರು.

ಮೂರ್ನಾಲ್ಕು ದಿನಗಳ ಹಿಂದೆ ನಡೆದಿದ್ದ ನೀಡಿದ್ದ ಜನರ ಭಾವನೆ ಕೆರಳಿಸಿದ ಉಸ್ಮಾನಗಣಿ ಹುಮನಾಬಾದ್ ವಿವಾದಾತ್ಮಕ ಹೇಳಿಕೆ ಈಗ ಎಲ್ಲಡೆ  ವೈರಲ್ ಆಗುತ್ತಿದೆ.

 '18ನೇ ವಯಸ್ಸಿಗೆ ಪ್ರಧಾನಿ ಆಯ್ಕೆ ಮಾಡಬಹುದು, ಆದರೆ ಮದುವೆಯಾಗಬಾರದು'
ಮಹಿಳೆಯರ ಕನಿಷ್ಠ ವಿವಾಹ ವಯೋಮಿತಿಯನ್ನು 18 ರಿಂದ 21 ವರ್ಷಕ್ಕೆ ಏರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಮತ್ತು ಲೋಕಸಭೆ ಸಂಸದ ಅಸಾದುದ್ದೀನ್ ಓವೈಸಿ ಶುಕ್ರವಾರ ಟೀಕಿಸಿದ್ದಾರೆ, ಅಲ್ಲದೇ ಇದೊಂದು ಹಾಸ್ಯಾಸ್ಪದವೆಂದು ಕರೆದಿದ್ದಾರೆ. ಇತರ ಎಲ್ಲಾ ಉದ್ದೇಶಗಳಿಗಾಗಿ ಕಾನೂನಿನಿಂದ  18 ವರ್ಷವಾದವರನ್ನು ವಯಸ್ಕರೆಂದು ಗುರುತಿಸಲ್ಪಡಲಾಗುತ್ತದೆ. ಆದರೆ ಪುರುಷ ಮತ್ತು ಮಹಿಳೆ ಇಬ್ಬರೂ 18 ನೇ ವಯಸ್ಸಿನಲ್ಲಿ ಮದುವೆಯಾಗಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದು ಬದಲಾಗಬೇಕು ಎಂದು ಓವೈಸಿ ಟ್ವಿಟರ್‌ನಲ್ಲಿ ಹೇಳಿದ್ದರು.

"ಮೋದಿ ಸರ್ಕಾರವು ಮಹಿಳೆಯರ ಮದುವೆಯ ವಯಸ್ಸನ್ನು 21 ಕ್ಕೆ ಏರಿಸಲು ನಿರ್ಧರಿಸಿದೆ. ಇದು ಪಿತೃಪ್ರಭುತ್ವವಾಗಿದೆ, ನಾವು ಸರ್ಕಾರದಿಂದ ಇಷ್ಟೇ ನಿರೀಕ್ಷಿಸಲು ಸಾಧ್ಯ. 18 ವರ್ಷ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಒಪ್ಪಂದಗಳಿಗೆ ಸಹಿ ಮಾಡಬಹುದು, ವ್ಯವಹಾರವನ್ನು ಪ್ರಾರಂಭಿಸಬಹುದು, ಪ್ರಧಾನಿಯನ್ನು ಆಯ್ಕೆ ಮಾಡಬಹುದು ಮತ್ತು ಸಂಸದರು ಮತ್ತು ಶಾಸಕರನ್ನು ಆಯ್ಕೆ ಮಾಡಬಹುದು, ಆದರೆ ಮದುವೆಯಾಗಲು ಸಾಧ್ಯವಿಲ್ಲವೇ? ಅವರು ಲೈಂಗಿಕ ಸಂಬಂಧಗಳು ಮತ್ತು ಲಿವ್-ಇನ್ ಸಂಬಂಧಗಳಿಗೆ ತಮ್ಮ ಒಪ್ಪಿಗೆಯನ್ನು ನೀಡಬಹುದು, ಆದರೆ ಅವರ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಸಾಧ್ಯವಿಲ್ಲವೇ? ಇದು ಹಾಸ್ಯಾಸ್ಪದ' ಎಂದಿದ್ದರು.

click me!