ಚಿಕ್ಕಮಗಳೂರು: ಕಾರು ಮರಕ್ಕೆ ಡಿಕ್ಕಿ: ನಿಶ್ಚಿತಾರ್ಥಕ್ಕೆ ಹೊರಟಿದ್ದ ದಂಪತಿ ಸಾವು!

By Kannadaprabha News  |  First Published Apr 22, 2023, 5:37 AM IST

ಕಾರು ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ನಿಶ್ಚಿತಾರ್ಥಕ್ಕೆಂದು ಭದ್ರಾವತಿಗೆ ತೆರಳುತ್ತಿದ್ದ ದಂಪತಿ ಸ್ಥಳದಲ್ಲೆ ಸಾವನ್ನಪ್ಪಿ, ಮಕ್ಕಳಿಬ್ಬರು ಗಾಯಗೊಂಡಿರುವ ದಾರುಣ ಘಟನೆ ತರೀಕೆರೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ತರೀಕೆರೆ (ಏ.22) : ಕಾರು ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ನಿಶ್ಚಿತಾರ್ಥಕ್ಕೆಂದು ಭದ್ರಾವತಿಗೆ ತೆರಳುತ್ತಿದ್ದ ದಂಪತಿ ಸ್ಥಳದಲ್ಲೆ ಸಾವನ್ನಪ್ಪಿ, ಮಕ್ಕಳಿಬ್ಬರು ಗಾಯಗೊಂಡಿರುವ ದಾರುಣ ಘಟನೆ

ತರೀಕೆರೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Tap to resize

Latest Videos

undefined

ಕಾರಿನ ಚಾಲಕ ಶ್ರೀನಿವಾಸ್‌ (45) ಮತ್ತು ಪತ್ನಿ ಶ್ವೇತಾ (40) ಆಪಘಾತದಲ್ಲಿ ಮೃತಪಟ್ಟದಂಪತಿ ಎಂದು ಪೊಲೀಸರು ತಿಳಿಸಿದ್ದಾರೆ.

ಇದೆಂಥಾ ದುರಂತ..! ಹಸುವಿಗೆ ಡಿಕ್ಕಿ ಹೊಡೆದ ವಂದೇ ಭಾರತ್‌, ಹಸು ಬಿದ್ದು ಮೂತ್ರ ವಿಸರ್ಜನೆಗೆ ಹೋದ ವೃದ್ಧ ಪ್ರಾಣಬಿಟ್ಟ!

ಪಟ್ಟಣದ ಸಮೀಪ ಬೆಟ್ಟತಾವರೆ ಕೆರೆ ಬಳಿ ಬರುತ್ತಿದ್ದಾಗ ಇವರು ಪ್ರಯಾಣಿಸುತ್ತಿದ್ದ ಶಿಫ್‌್ಟಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಶ್ರೀನಿವಾಸ್‌ ಮತ್ತು ಶ್ವೇತಾ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರೊಂದಿಗೆ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಗಾಯಗೊಂಡಿದ್ದು ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಬೆಂಗಳೂರಿನಿಂದ ಭದ್ರಾವತಿಗೆ ನಿಶ್ಚಿತಾರ್ಥ ಕಾರ್ಯಕ್ಕೆಂದು ತೆರಳುತ್ತಿದ್ದಾಗ ಈ ಆವಘಡ ಸಂಭವಿಸಿದೆ. ಇವರು ಇನ್ನು ಇಪ್ಪತ್ತು ಕಿಲೋ ಮೀಟರ್‌ನಷ್ಟುದೂರ ಪ್ರಯಾಣಿಸಿದ್ದರೆ ಇವರು ಸೇರಬೇಕಿದ್ದ ಭದ್ರಾವತಿ ತಲುಪುತ್ತಿದ್ದರು. ಅಷ್ಟರಲ್ಲಿ ಈ ಅಪಘಾತ ಸಂಭವಿಸಿದೆ.

ಈ ಸಂಭಂದ ತರೀಕೆರೆ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೀಕರ ರಸ್ತೆ ದುರಂತ- ದಂಪತಿಗಳ ಸಾವು

ಕಲಬುರಗಿ: ಕಲಬುರಗಿ ನಗರದಲ್ಲಿ ರಾಮ ಮಂದಿರ ವೃತ್ತದ ಬಳಿ ಶುಕ್ರವಾರ ರಾತ್ರಿ ಟಿಪ್ಪರ್‌ ಹಾಗೂ ಬೈಕ್‌ ನಡುವೆ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ಶರಣಸಿರಸಗಿ ಮಡ್ಡಿ ಊರಿನ ದಂಪತಿಗಳಿಬ್ಬರು ಟಿಪ್ಪರ್‌ ಅಡಿಯಲ್ಲಿ ಸಿಲುಕಿ ನುಜ್ಜುಗುಜ್ಜಾಗಿದ್ದಾರೆ. ಇವರಿಬ್ಬರೊಂದಿಗೆ ಇದ್ದ ಮೂರು ವರ್ಷದ ಮಗು ಭೀಕರ ದುರಂತದಲ್ಲಿ ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ.

ದುರಂತದಲ್ಲಿ ಮಡಿದ ದಂಪತಿಗಳನ್ನು ರಾಣೋಜಿ ವಾಡಿ (42) ಹಾಗೂ ರೇಣುಕಾ (35) ಎಂದು ಗುರುತಿಸಲಾಗಿದೆ. ಇವರಿಬ್ಬರ 3 ವರ್ಷದ ಪುತ್ರ ಮಲ್ಲಿಕಾರ್ಜುನ ಪ್ರಾಣಾಪಾಯದಿಂದ ಪಾರಾಗಿದ್ದು ಸುರಕ್ಷಿತವಾಗಿದ್ದಾನೆ.

ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ರಕ್ತ ಮಾರ್ತಿದ್ದ ತಂದೆ: ದುಡ್ಡು ಹೊಂದಿಸಲಾಗದೆ ಆತ್ಮಹತ್ಯೆ ಮಾಡ್ಕೊಂಡ್ರು!

ದುರಂತ ಂಸಭವಿಸಿದ್ದು ರಿಂಗ್‌ ರಸ್ತೆಯ ಮೇಲೆ. ಇಲ್ಲಿ ಈಚೆಗಿನ ದಿನಗಳಲ್ಲಿ ಅತಿವೇಗದಲ್ಲಿ ಮರಲು ಟಿಪ್ಪರ್‌ಗಳು ಸಂಚಾರ ಮಾಡುತ್ತಿವೆ. ಹೀಗಾಗಿ ದುರಂತಕ್ಕೆ ಕಾರಣವಾಗುತ್ತಿದೆ. ಇದಲ್ಲದೆ ರಸ್ತೆಯ ವಿಭಜಕಗಳ ಮೇಲೆಯೇ ಮರಗಳು ಬೆಳೆದಿದ್ದರಿಂದ ಅದೂ ಸಹ ದುರಂತಕ್ಕೆ ಕಾರಣವಾಗುತ್ತಿದೆ.

click me!