Mangaluru: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೇಶ್ಯಾವಾಟಿಕೆಯಲ್ಲಿ ಅರೆಸ್ಟ್..!

By Girish Goudar  |  First Published Mar 22, 2022, 12:47 PM IST

*  ಅಬ್ದುಲ್ ರಾಝೀಕ್ ಉಳ್ಳಾಲ ಬಂಧಿತ ಆರೋಪಿ 
*  ಸಮಾಜ ಸೇವಕ ರಾಝಿಕ್ ಉಳ್ಳಾಲ್
*  ಹಲವಾರು ‌ಸಾಮಾಜಿಕ ಕಳಕಳಿಯ ಕಾರ್ಯ ಮಾಡಿರುವ ಬಂಧಿತ ರಾಝಿಕ್ 


ಮಂಗಳೂರು(ಮಾ.22): ಕಾಲೇಜು ವಿದ್ಯಾರ್ಥಿಗಳನ್ನ ಬಳಸಿ ವೇಶ್ಯಾವಾಟಿಕೆ(Prostitution) ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು(Mangaluru Police) ಆರೋಪಿಗಳ ಪತ್ತೆ ಮುಂದುವರೆಸಿದ್ದು, ಇದೀಗ ಮತ್ತೊಬ್ಬ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿ ಈ ಬಾರಿಯ ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ(Kannada Rajyotsava Award) ವಿಜೇತ ಎನ್ನುವುದು ವಿಶೇಷ.

ಅಬ್ದುಲ್ ರಾಝೀಕ್ ಉಳ್ಳಾಲ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ನಗರದ ನಂದಿಗುಡ್ಡೆಯ ಫ್ಲಾಟ್‌ವೊಂದರಲ್ಲಿ ಪಿಯು ಕಾಲೇಜಿನ ಅಪ್ರಾಪ್ತ ವಿದ್ಯಾರ್ಥಿನಿಯರನ್ನು(Student) ಬ್ಲ್ಯಾಕ್‌ಮೇಲ್‌(Blackmail) ಮಾಡಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ(Arrest). ಇದೀಗ 16ನೇ ಆರೋಪಿಯಾಗಿ ಅಬ್ದುಲ್ ರಾಝೀಕ್ ಉಳ್ಳಾಲ ಬಂಧನವಾಗಿದೆ. ಮಂಗಳೂರು ಸಿಸಿಬಿ ಪೊಲೀಸರು(CCB Police) ಈ ಕೇಸ್‌ನ ತನಿಖೆ ಕೈಗೊಂಡಿದ್ದು, ಇಬ್ಬರು ಬಾಲಕಿಯರು ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಒಟ್ಟು 10 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಅದರಂತೆ ಮಾರ್ಚ್ 18 ರಂದು ಉಳ್ಳಾಲದ ಅಬ್ದುಲ್ ರಾಝೀಕ್ ಉಳ್ಳಾಲ್ ಅಲಿಯಾಸ್ ರಫೀಕ್ ಉಳ್ಳಾಲನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 16 ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳೆಲ್ಲರೂ ನ್ಯಾಯಾಂಗ ಬಂಧನದಲ್ಲಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Tap to resize

Latest Videos

Shivamogga: ಶಾಲೆಯಲ್ಲೇ ನಮಾಜ್‌ಗೆ ಪರ್ಮಿಷನ್‌: ಮುಖ್ಯಶಿಕ್ಷಕಿ ಸಸ್ಪೆಂಡ್‌

ಸಮಾಜ ಸೇವಕ ರಾಝಿಕ್ ಉಳ್ಳಾಲ್

ರಾಝೀಕ್ ಉಳ್ಳಾಲ್ ಉತ್ತಮ ಸಮಾಜ ಸೇವಕನಾಗಿದ್ದು(Social Worker), ಟ್ರಸ್ಟ್ ಮೂಲಕ ದ.ಕ ಜಿಲ್ಲೆಯಲ್ಲಿ ಸಮಾಜ ಸೇವಾ ಕಾರ್ಯ‌ ಮಾಡಿಕೊಂಡಿದ್ದ. ಹೀಗಾಗಿ ಸಮಾಜ ಸೇವೆ ವಿಭಾಗದಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ನೀಡಲಾಗಿತ್ತು. ಹೆಲ್ಪ್ ಇಂಡಿಯಾ ಫೌಂಡೇಶನ್(Help India Foundation) ಮೂಲಕ ರಾಝಿಕ್ ಹಲವಾರು ‌ಸಾಮಾಜಿಕ ಕಳಕಳಿಯ ಕಾರ್ಯ ಮಾಡಿದ್ದಾನೆ. ಕೊರೋನಾ ಸೇರಿ ಹಲವಾರು ಸಂಧರ್ಭದಲ್ಲಿ ನೊಂದವರ ಬಗ್ಗೆ ಕಾಳಜಿ ವಹಿಸಿದ್ದು, ಸ್ಥಳೀಯವಾಗಿ ಉತ್ತಮ ಹೆಸರು ಗಳಿಸಿಕೊಂಡಿದ್ದ. ಆದರೆ ಅಪ್ರಾಪ್ತರ ವೇಶ್ಯಾವಾಟಿಕೆ ಪ್ರಕರಣದಲ್ಲಿ ಈತ ಭಾಗಿಯಾಗಿದ್ದು, ಪ್ರಕರಣ ದಾಖಲಾದ ಹಲವು ದಿನಗಳ ಬಳಿಕ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತೆಯ ಪ್ರಜ್ಞೆ ತಪ್ಪಿಸಿ ವೇಶ್ಯಾವಾಟಿಕೆ ದಂಧೆ: ಮಹಿಳೆಯರಿಂದಲೇ ಹೇಯ ಕೃತ್ಯ..!

ಬೆಂಗಳೂರು: ಟೈಲರಿಂಗ್‌ ಕಲಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು(Minor Girl) ವೇಶ್ಯಾವಾಟಿಕೆ(Prostitution) ದಂಧೆಗೆ ತಳ್ಳಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಕಿಡಿಗೇಡಿಗಳು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರ(Police) ಬಲೆಗೆ ಬಿದ್ದ ಘಟನೆ ಮಾ.10 ರಂದು ನಡೆದಿತ್ತು. 

Hassan: ದಂತಕ್ಕಾಗಿ ಕಾಡಾನೆ ಹತ್ಯೆ: ಮೂವರ ಬಂಧನ

ಬಂಡೇಪಾಳ್ಯ ಸಮೀಪದ ರಾಜೇಶ್ವರಿ, ಕಲಾವತಿ, ತಮಿಳುನಾಡು(Tamil Nadu) ಹೊಸೂರಿನ ಕೇಶವಮೂರ್ತಿ, ಕೋರಮಂಗಲದ ಸತ್ಯರಾಜ್‌, ಯಲಹಂಕದ ಶರತ್‌ ಹಾಗೂ ಬೇಗೂರಿನ ರಫೀಕ್‌ ಬಂಧಿತರು(Arrest). ತಮ್ಮ ಮನೆಗೆ ಟೈಲರಿಂಗ್‌ ಕಲಿಯಲು ಬರುತ್ತಿದ್ದ 16 ವರ್ಷದ ಅಪ್ರಾಪ್ತ ಬಾಲಕಿಗೆ ಕಲಾವತಿ ಹಾಗೂ ರಾಜೇಶ್ವರಿ ಬೆದರಿಸಿ ವೇಶ್ಯಾವಾಟಿಕೆ ದಂಧೆಗೆ ತಳ್ಳಿದ್ದರು. ಈ ಕಾಟ ಸಹಿಸಲಾರದೆ ಸಂತ್ರಸ್ತೆ, ಎಚ್‌ಎಸ್‌ಆರ್‌ ಲೇಔಟ್‌ ಠಾಣೆಗೆ ತನ್ನ ಪೋಷಕರ ಜತೆ ಭಾನುವಾರ ತೆರಳಿ ದೂರು(Complaint) ಸಲ್ಲಿಸಿದ್ದಳು. ದೂರಿನ ಅನ್ವಯ ಪೊಲೀಸರು, ಕೃತ್ಯ ಬೆಳಕಿಗೆ ಬಂದ 36 ತಾಸಿನೊಳಗೆ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು. 

ಟೈಲರಿಂಗ್‌ ನೆಪದಲ್ಲಿ ವೇಶ್ಯಾವಾಟಿಕೆ

ಬಂಡೇಪಾಳ್ಯ ಸಮೀಪ ನೆಲೆಸಿದ್ದ ರಾಜೇಶ್ವರಿ ಹಾಗೂ ಕಲಾವತಿ, ಹಲವು ವರ್ಷಗಳಿಂದ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು. ಆದರೆ ತಮ್ಮ ವ್ಯವಹಾರ ಜನರಿಗೆ ಗೊತ್ತಾದಂತೆ ಮನೆಯಲ್ಲಿ ಟೈಲರಿಂಗ್‌ ಕೆಲಸ ಮಾಡುತ್ತಿದ್ದರು. ಕೊರೋನಾ ಸೋಂಕಿನ ಕಾಲದಲ್ಲಿ ಜನರಿಗೆ ಪಿಪಿಇ ಕಿಟ್‌ಗಳು ಹಾಗೂ ಮಾಸ್ಕ್‌ಗಳನ್ನು ಕೂಡಾ ಹೊಲಿದು ಕೊಟ್ಟು ಒಳ್ಳೆಯ ಅಭಿಪ್ರಾಯವನ್ನು ಮೂಡಿಸಿದ್ದರು. ಇದರಿಂದ ನೆರೆಹೊರೆಯ ಮಹಿಳೆಯರೊಂದಿಗೆ(Women) ಉತ್ತಮ ಸ್ನೇಹ ಬೆಳೆದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳ ಮನೆಗೆ ಕೆಲ ದಿನಗಳ ಹಿಂದೆ ಟೈಲರಿಂಗ್‌ ಕಲಿಯಲು ತಮ್ಮ ಮಗಳನ್ನು ಆಕೆಯ ಪೋಷಕರು ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. 
 

click me!