ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣ ರದ್ದುಗೊಳಿಸುವಂತೆ ಸಹಪಾಲುದಾರರಿಂದ ಕೋರ್ಟ್‌ಗೆ ಮೊರೆ

By Gowthami KFirst Published Jul 24, 2024, 7:26 PM IST
Highlights

ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣ ರದ್ದು ಕೋರಿ  ಕಂಪನಿಯ ಸಹ ಪಾಲುದಾರಿಂದ ಹೈಕೋರ್ಟ್ ಗೆ ಮನವಿ 

ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣ ರದ್ದು ಕೋರಿ ವಿ.ಎಸ್. ಸುರೇಶ್, ಎಸ್.ಪಿ.ಹೊಂಬಣ್ಣ, ಎಸ್. ಸುಧೀಂದ್ರ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.  ಆತ್ಮಹತ್ಯೆ ಮಾಡಿಕೊಂಡ ತಿಂಗಳ‌ ಬಳಿಕ ಸಿಕ್ಕ  ಪತ್ರ ಆಧರಿಸಿ ಕೇಸ್  ದಾಖಲಾಗಿತ್ತು. 

ಈ ಹಿನ್ನೆಲೆಯಲ್ಲಿ ಪ್ರಚೋದನೆ ಆರೋಪ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿರುವ ಮೂವರು ಆಪ್ತರು ಆತ್ಮಹತ್ಯೆ ಪತ್ರದಲ್ಲಿ ಪ್ರಚೋದನೆ ಬಗ್ಗೆ ಆರೋಪವಿಲ್ಲ. ಹೀಗಾಗಿ ಕೇಸ್ ರದ್ದು ಪಡಿಸಿ ಎಂದು ನ್ಯಾಯಾಲಯದಲ್ಲಿ ತಮ್ಮ ಪರವಾದ ವಕೀಲರ ಮೂಲಕ ಮನವಿ ಮಾಡಿದ್ದಾರೆ.

Latest Videos

ಶಂಕಿತ ಡೆಂಗ್ಯೂ ಜ್ವರಕ್ಕೆ ರಾಜ್ಯದಲ್ಲಿ ಮೆಗ್ಗಾನ್ ಆಸ್ಪತ್ರೆ ನರ್ಸ್ ಬಲಿ!

ಸೌಂದರ್ಯ ಜಗದೀಶ್ ಬ್ಲಾಕ್ ಮೇಲ್ ಗೆ ಒಳಗಾಗಿದ್ದರೆಂಬ ಆರೋಪವಿದೆ. ಜಗದೀಶ್ ಪವಿತ್ರಾಗೌಡಗೆ ಹಣ ವರ್ಗಾವಣೆ ಮಾಡಿದ್ದಾರೆಂದು ಆರೋಪಿ ಹೇಳಿದ್ದರು. ಹಲವು ಅಂಶಗಳನ್ನು ಬಹಿರಂಗಪಡಿಸುವುದಾಗಿ ಆರೋಪಿ ಸುರೇಶ್ ಹೇಳಿದ್ದರು. ಸೌಂದರ್ಯ ಜಗದೀಶ್  ಬ್ಲಾಕ್ ಮೇಲ್ ಗೆ ಒಳಗಾಗಿರುವ ಸಾಧ್ಯತೆಯಿದೆ. ಪ್ರಕರಣದ ತನಿಖೆಗೆ ತಡೆ ನೀಡಬಾರದೆಂದು ಪತ್ನಿ ಶಶಿರೇಖಾ ಪರ ವಕೀಲರ ಮನವಿ ಮಾಡಿದ್ದಾರೆ. ವಿಚಾರಣೆ ಪೂರ್ಣಗೊಳಿಸಿ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.

ಆತ್ಮಹತ್ಯೆಗೆ ಶರಣಾದ ನಿರ್ಮಾಪಕ ಪವಿತ್ರಾಗೆ ₹2 ಕೋಟಿ ನೀಡಿದ್ದರೇ?:
ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ಚಿತ್ರ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್‌ ಮತ್ತು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಆಪ್ತೆ ಪವಿತ್ರಾ ಗೌಡ ನಡುವೆ ಹಣಕಾಸಿನ ವ್ಯವಹಾರ ನಡೆದಿದೆ ಎನ್ನಲಾಗಿದೆ. ಸೌಂದರ್ಯ ಜಗದೀಶ್‌ ಅವರು ರಾಜಾಜಿನಗರದ ಬ್ಯಾಂಕ್‌ವೊಂದರ ಖಾತೆಯಿಂದ 2017ರ ನ.13ರಂದು 1 ಕೋಟಿ ರು. ಮತ್ತು 2018ರ ಜ.23ರಂದು ಒಂದು ಕೋಟಿ ರು. ಸೇರಿದಂತೆ ಒಟ್ಟು 2 ಕೋಟಿ ರು.ಗಳನ್ನು ಪವಿತ್ರಾ ಪಿ. ಹೆಸರಿನ ಖಾತೆಗೆ ವರ್ಗಾಯಿಸಿದ್ದಾರೆ. ಈ ಪವಿತ್ರಾ ಪಿ. ಎಂದರೆ, ದರ್ಶನ್‌ ಆಪ್ತೆ ಪವಿತ್ರಾ ಗೌಡ ಎನ್ನಲಾಗಿದೆ. ಸೌಂದರ್ಯ ಜಗದೀಶ್‌ ಆತ್ಮಹತ್ಯೆಗೆ ಈ ಹಣಕಾಸು ವ್ಯವಹಾರವೂ ಕಾರಣ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

ಅವನು ರೀಲ್​ ಹೀರೋ ರಿಯಲ್​ ವಿಲನ್ ಪೊಲೀಸರಿಗೆ ಹೆದರಿ ರಾತ್ರೋ ರಾತ್ರಿ ಮದುವೆ 2 ತಿಂಗಳಿಗೆ ಮತ್ತೊಬ್ಬಳ ನಂಟು!

ದರ್ಶನ್‌ ಆಪ್ತೆ ಪವಿತ್ರಾ ಗೌಡ 2018ರಲ್ಲಿ ರಾಜರಾಜೇಶ್ವರಿನಗರದ ಕೆಂಚೇನಹಳ್ಳಿಯಲ್ಲಿ 1.75 ಕೋಟಿ ರು. ಮೌಲ್ಯದ ಮನೆ ಖರೀದಿಸಿದ್ದಾರೆ. ಈ ಮನೆ ಖರೀದಿಗೆ ಸೌಂದರ್ಯ ಜಗದೀಶ್‌ ನೀಡಿದ್ದಾರೆ ಎನ್ನಲಾದ ಹಣವನ್ನೇ ಬಳಸಿದ್ದಾರೆ ಎನ್ನಲಾಗಿದೆ. ಪವಿತ್ರಾ ಪಿ. ಹೆಸರಿನ ಮನೆ ಖರೀದಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಜಗದೀಶ್ ಗೆ 60 ಕೋಟಿ ರು. ವಂಚನೆ ಆರೋಪ:
ಕಳೆದ ಏ.14ರಂದು ಸೌಂದರ್ಯ ಜಗದೀಶ್‌ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಮೇ 24ರಂದು ಮೃತ ಸೌಂದರ್ಯ ಜಗದೀಶ್‌ ಅವರ ಪತ್ನಿ ಶಶಿರೇಖಾ ಅವರು ದೂರು ನೀಡಿದ್ದರು. ಪತಿ ಸೌಂದರ್ಯ ಜಗದೀಶ್ ಅವರು ಸೌಂದರ್ಯ ಕನ್‌ಸ್ಟ್ರಕ್ಷನ್ ಕಂಪನಿ ನಡೆಸುತ್ತಿದ್ದರು. ವಿ.ಎಸ್.ಸುರೇಶ್, ಎಸ್.ಪಿ. ಹೊಂಬಣ್ಣ ಹಾಗೂ ಸುಧೀಂದ್ರ ಅವರು ಕಂಪನಿಯ ಸಹ ಪಾಲುದಾರರಾಗಿದ್ದರು. ಪತಿ ಸೌಂದರ್ಯ ಜಗದೀಶ್‌ ಅವರು ತಮ್ಮ ಕೆಲ ಆಸ್ತಿಗಳನ್ನು ಬ್ಯಾಂಕ್‌ನಲ್ಲಿ ಅಡಮಾನವಿರಿಸಿ 60 ಕೋಟಿ ರು. ಸಾಲ ಪಡೆದು ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು.

ಆದರೆ, ಸಹಪಾಲುದಾರರು ಕಂಪನಿ ನಷ್ಟದಲ್ಲಿರುವುದಾಗಿ ಹೇಳಿ 60 ಕೋಟಿ ರು. ವಂಚಿಸಿದ್ದರು. ಅಂತೆಯೆ ಪತಿ ಸೌಂದರ್ಯ ಜಗದೀಶ್ ಅವರಿಂದ ಹಲವು ದಾಖಲೆಗಳಿಗೆ ಸಹಿ ಮಾಡಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಸಹ ಪಾಲುದಾರರು ಪತಿಗೆ ಜೀವ ಬೆದರಿಕೆ ಹಾಕಿದ್ದರು. ಈ ಸಹ ಪಾಲುದಾರರ ಕಿರುಕುಳದಿಂದ ಪತಿ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಶಶಿರೇಖಾ ದೂರಿನಲ್ಲಿ ಆರೋಪಿಸಿದ್ದರು. ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಬಳಿಕ ಅವರ ಬಟ್ಟೆಯಲ್ಲಿ ಮರಣಪತ್ರವೊಂದು ಸಿಕ್ಕಿತ್ತು. ಈ ಮರಣಪತ್ರ ಆಧರಿಸಿ ಪತ್ನಿ ಶಶಿರೇಖಾ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದೆ.

click me!