ಶಾಸಕರ ಪುತ್ರನ ಕಾರು ಅಡ್ಡಗಟ್ಟಿ ಅವಾಜ್, ಮೂವರು ಅರೆಸ್ಟ್..!

Published : Jan 04, 2021, 04:14 PM ISTUpdated : Jan 04, 2021, 04:25 PM IST
ಶಾಸಕರ ಪುತ್ರನ ಕಾರು ಅಡ್ಡಗಟ್ಟಿ ಅವಾಜ್, ಮೂವರು ಅರೆಸ್ಟ್..!

ಸಾರಾಂಶ

ಬಿಜೆಪಿ ಶಾಸಕರೊಬ್ಬರ ಪುತ್ರನ ಕಾರು ದುಷ್ಕರ್ಮಿಗಳು ಅಡ್ಡಹಾಕಿ ಅವಾಜ್ ಹಾಕಿದ್ದಾರೆ. ಕಾರಿನ ಗ್ಲಾಸ್ ಒಡೆದು ಗಲಾಟೆ ಮಾಡಿರುವ ಘಟನೆ ನಡೆದಿದೆ.

ಧಾರವಾಡ, (ಜ.04): ಕಲಘಟಗಿ ಶಾಸಕ ಸಿ. ಎಮ್. ನಿಂಬಣ್ಣವರ ಪುತ್ರನ ಕಾರು ಅಡ್ಡಗಟ್ಟಿ ಜೀವ ಬೆದರಿಕಿ ಹಾಕಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಲಘಟಗಿಯ ಸಂಗೆದೇವರಕೊಪ್ಪ‌ ಗ್ರಾಮದಲ್ಲಿ ಇಂದು (ಸೋಮವಾರ) ಈ ಘಟನೆ ನಡೆದಿದ್ದು, ಜಮೀನು ವಿವಾದದ ವಿಚಾರವಾಗಿ ನಡೆದಿರುವ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ.

ಉತ್ತರಪ್ರದೇಶದಿಂದ ಕಾರಲ್ಲಿ ಬಂದ ಕಳ್ಳರು: ಬೆಂಗ್ಳೂರು ಮನೆಗಳಲ್ಲಿ ಕಳ್ಳತನ

 ಶಾಸಕರ ಪುತ್ರ  ಶಶಿಧರ ನಿಂಬಣ್ಣವರ್‌ ಅವರು ಸಂಗೆದೇವರಕೊಪ್ಪದ ಹೊಲಕ್ಕೆ ಹೋಗಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ದುಷ್ಕರ್ಮಿಗಳು ಕಾರು ಅಡ್ಡಹಾಕಿದ್ದಾರೆ. ಅಲ್ಲದೇ ಕಾರಿನ ಮೇಲೆ ಕಲ್ಲು ಹಾಕಿ, ಗಾಜು ಒಡೆದು ಗಲಾಟೆ ಮಾಡಿದ್ದಾರೆ. ಸಾಲದಕ್ಕೆ  ಜೀವ ಬೆದರಿಕೆ ಹಾಕಿದ್ದಾರೆ.

ಈ ಹಿನ್ನೆಲೆಯಲ್ಲಿ ಶಾಸಕರ ಪುತ್ರ  ಶಶಿಧರ  ಅವರು  ಶಂಕ್ರಪ್ಪ, ಮಹಾಂತೇಶ, ಸಂಗಮೇಶ್ ನಿಂಬಣ್ಣವರ ಎನ್ನುವವರ ವಿರುದ್ಧ ದೂರು ನೀಡಿದ್ದು, ಈ ಪೈಕಿ ಕಲಘಟಗಿ ಪೊಲೀಸರು ಮೂವರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?