Kalaburagi: ಸಿನಿಮಾ ಶೈಲಿಯಲ್ಲಿ ಶಾಲಾ ಬಾಲಕನ ಅಪಹರಣ: ಸಿಂಗಂ ಸ್ಟೈಲ್​​ನಲ್ಲಿ ಪೊಲೀಸರ ಕಾರ್ಯಾಚರಣೆ

By Govindaraj S  |  First Published Jan 5, 2023, 11:58 AM IST

ಸಿನಿಮಾ ಶೈಲಿಯಲ್ಲಿ ಅಪಹರಣಕ್ಕೆ ಒಳಗಾಗಿದ್ದ ಬಾಲಕನನ್ನು ಕಲಬುರಗಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಸಿಪಿಐ ಅರುಣ್ ಮುರಗುಡಿ ತಂಡ ಸಿಂಗಂ ಸ್ಟೈಲ್‌ನಲ್ಲಿ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. 


ಕಲಬುರಗಿ (ಜ.05): ಸಿನಿಮಾ ಶೈಲಿಯಲ್ಲಿ ಅಪಹರಣಕ್ಕೆ ಒಳಗಾಗಿದ್ದ ಬಾಲಕನನ್ನು ಕಲಬುರಗಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಸಿಪಿಐ ಅರುಣ್ ಮುರಗುಡಿ ತಂಡ ಸಿಂಗಂ ಸ್ಟೈಲ್‌ನಲ್ಲಿ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಬುಧವಾರ ಬೆಳಗ್ಗೆ ಬಾಲಕನನ್ನು ಒಂಬತ್ತು ಗಂಟೆ ಸಮಯದಲ್ಲಿ ಅಪಹರಿಸಿ ಆತನ ಪೋಷಕರಿಗೆ 10 ಲಕ್ಷ ರೂಪಾಯಿ ನೀಡುವಂತೆ ಡಿಮ್ಯಾಂಡ್ ಮಾಡಲಾಗಿತ್ತು. ಕಲಬುರಗಿ ನಗರದ ಸಿದ್ದೇಶ್ವರ ಕಾಲೋನಿಯ ನಿವಾಸಿಯಾಗಿರುವ ಶಿಕ್ಷಕ ಗುರುನಾಥ್ ಆರ್. ರಾಥೋಡ್ ಎಂಬವರ 10 ವರ್ಷದ ಸುದರ್ಶನ್ ಅಪಹರಣಕ್ಕೊಳಗಾಗಿದ್ದ ಬಾಲಕ. 

ಎಂದಿನಂತೆ ಶಾಲೆಗೆ ಹೋಗುತ್ತಿದ್ದ ಗುರುನಾಥ್ ರಾಠೋಡ್ ಅನ್ನೋ ಸರ್ಕಾರಿ ಶಾಲಾ ಶಿಕ್ಷಕ ಗುರುನಾಥನ ಪುತ್ರ ಸುದರ್ಶನನನ್ನು ಆಟೋದಲ್ಲಿ ಅಪಹರಣ ಮಾಡಿದ್ದರು. ಅಪಹರಣದ ಕೆಲ ಹೊತ್ತಿನ ನಂತರ ಶಿಕ್ಷಕ ಗುರುನಾಥ್‌ಗೆ ಅಪಹರಣಕಾರರು ಕರೆ ಮಾಡಿದ್ದು,  ನಿಮ್ಮ ಮಗ ಜೀವಂತ ಬೇಕಾದ್ರೆ ಹತ್ತು ಲಕ್ಷ ಹಣ ನೀಡಬೇಕು ಅಂತ ಬೇಡಿಕೆ ಇಟ್ಟಿದ್ದರಲ್ಲದೇ ಪೊಲೀಸರಿಗೆ ಹೇಳಿದ್ರೆ ಮಗನನ್ನು ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದರು. ಆದ್ರೆ ಈ ಬಗ್ಗೆ ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರಿಗೆ ಶಿಕ್ಷಕ ಗುರುನಾಥ್ ಮಾಹಿತಿ ನೀಡಿದ್ದರು. 

Tap to resize

Latest Videos

undefined

ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಸನ್ನಿಹಿತ: ಎಚ್‌.ಡಿ.ದೇವೆಗೌಡ

ವಿಶ್ವವಿದ್ಯಾಲಯ ಠಾಣೆ ಸಿಪಿಐ ಅರುಣ್ ಮುರಗುಡಿ ಮತ್ತು ತಂಡದಿಂದ ಮಗುವಿನ ರಕ್ಷಣೆ ಆರಂಭ ಮಾಡಿದಾಗ ಪೊಲೀಸರು ತಮ್ಮನ್ನು ಫಾಲೋ ಮಾಡ್ತಿರೋ ಬಗ್ಗೆ ಅಪಹರಣಕಾರರು ಸುಳಿವು ಪಡೆದು ನಿನ್ನೆ (ಬುಧುವಾರ) ಸಂಜೆ ನಾಲ್ಕು ಗಂಟೆ ಸಮಯಕ್ಕೆ ಮಗುವನ್ನು ಕಲಬುರಗಿ ತಾಲೂಕಿನ ಪಾಳ ಗ್ರಾಮದ ಹೊರವಲಯದಲ್ಲಿ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸದ್ಯ ಮಗುವನ್ನು ರಕ್ಷಿಸಿ ಹೆತ್ತವರಿಗೆ ನೀಡಿರೋ ಪೊಲೀಸರು, ಇದೀಗ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಫಿಲ್ಮ್‌ ಸ್ಟೈಲಲ್ಲಿ ಬಾಲಕನ ಅಪಹರಿಸಿ ಹಣ ಸುಲಿದ ವಿದ್ಯಾರ್ಥಿ: ಇತ್ತೀಚೆಗೆ ಹಣದಾಸೆಯ ತನ್ನ ಪರಿಚಿತ ಸಾಫ್‌್ಟವೇರ್‌ ಎಂಜಿನಿಯರ್‌ವೊಬ್ಬರ ಮನೆಗೆ ಮುಂಜಾನೆ ನುಗ್ಗಿ ನಿದ್ರೆಯಲ್ಲಿದ್ದ 14 ವರ್ಷದ ಮಗನನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಿ ಬಳಿಕ ಒತ್ತೆಯಾಗಿಟ್ಟು 15 ಲಕ್ಷ ಸುಲಿಗೆ ಮಾಡಿ ತಪ್ಪಿಸಿಕೊಂಡಿದ್ದ ಬಿಕಾಂ ವಿದ್ಯಾರ್ಥಿ ಸೇರಿ ಇಬ್ಬರು ಸಂಪಿಗೆಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಯಲಹಂಕ ನಿವಾಸಿಗಳಾದ ಎಂ.ಸುನೀಲ್‌ ಕುಮಾರ್‌ ಅಲಿಯಾಸ್‌ ಸುನೀಲ್‌ ರಾಜ್‌ ಹಾಗೂ ವೈ.ವಿ.ನಾಗೇಶ್‌ ಬಂಧಿತರು.

ಕಾಂಗ್ರೆಸ್‌ ಬೆಳಗುತ್ತಿದ್ದರೆ, ಬಿಜೆಪಿ ಮುಳುಗುತ್ತಿದೆ: ಡಿ.ಕೆ.ಶಿವಕುಮಾರ್‌

ಆರೋಪಿಗಳಿಂದ 9.69 ಲಕ್ಷ ಸುಲಿಗೆ ಮಾಡಿದ್ದ ಹಣದಲ್ಲಿ ಖರೀದಿಸಿದ್ದ ಎರಡು ಬೈಕ್‌ಗಳು ಹಾಗೂ ಒಂದು ಕಾರು ಜಪ್ತಿ ಮಾಡಲಾಗಿದೆ. ಹಣದಾಸೆಗೆ ಮಾನ್ಯತಾ ಟೆಕ್‌ ಪಾರ್ಕ್ನಲ್ಲಿ ನೆಲೆಸಿರುವ ತನ್ನ ಪರಿಚಿತ ಟೆಕ್ಕಿ ದಂಪತಿಯ ಪುತ್ರನನ್ನು ಗೆಳೆಯನ ಜತೆ ಸೇರಿ ಸುನೀಲ್‌ ಅಪಹರಿಸಿದ್ದ. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್‌ ನಾಗರಾಜ್‌ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಎ.ಶೆಟ್ಟಿ ಹೇಳಿದ್ದಾರೆ.

click me!