ಗುಂಡ್ಯ: ಚಿನ್ನದಂಗಡಿ ಶುಭಾರಂಭದ ದಿನವೇ ಮಾಲೀಕ ಶವವಾಗಿ ಪತ್ತೆ!

By Gowthami K  |  First Published Jun 22, 2023, 10:13 PM IST

ದ.ಕ ಜಿಲ್ಲೆಯ ಕಡಬ ತಾಲೂಕಿನ‌ ಗುಂಡ್ಯದ ಬಳಿ ನೂತನ ಚಿನ್ನದ ಅಂಗಡಿ ಉದ್ಘಾಟನೆಯ ದಿನವೇ ಮಾಲೀಕ ಶವ ಪತ್ತೆಯಾಗಿದ್ದು, ಸಾವಿನ ಬಗ್ಗೆ ಭಾರೀ ಅನುಮಾನ ವ್ಯಕ್ತವಾಗಿದೆ. 


ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಜೂ.22): ಚಿನ್ನದ ಅಂಗಡಿ‌ ಮಾಲೀಕನ ಮೃತದೇಹ ಅನುಮಾಸ್ಪದ ರೀತಿಯಲ್ಲಿ ಪತ್ತೆಯಾದ ಘಟನೆ ದ.ಕ ಜಿಲ್ಲೆಯ ಕಡಬ ತಾಲೂಕಿನ‌ ಗುಂಡ್ಯದ ಬಳಿ ನಡೆದಿದೆ. ನೂತನ ಚಿನ್ನದ ಅಂಗಡಿ ಉದ್ಘಾಟನೆಯ ದಿನವೇ ಶವ ಪತ್ತೆಯಾಗಿದ್ದು, ಸಾವಿನ ಬಗ್ಗೆ ಭಾರೀ ಅನುಮಾನ ವ್ಯಕ್ತವಾಗಿದೆ. 

Tap to resize

Latest Videos

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಗುಂಡ್ಯ ಬಳಿ ಮೃತದೇಹ ಪತ್ತೆಯಾಗಿದ್ದು, ಮೃತ ಯುವಕನನ್ನು ಕಡಬ ನಿವಾಸಿ ನಾಗಪ್ರಸಾದ್ ಎಂದು ಗುರುತಿಸಲಾಗಿದೆ. ಮರ್ಧಾಳದ ಮಸೀದಿ ಬಿಲ್ಡಿಂಗ್ ನಲ್ಲಿ ‘ಐಶ್ವರ್ಯ ಗೋಲ್ಡ್’ ಹೆಸರಿನ ನೂತನ ಚಿನ್ನದಂಗಡಿ ಮಾಡಿದ್ದ ಹಿನ್ನೆಲೆಯಲ್ಲಿ ನಿನ್ನೆ ಆಹ್ವಾನ ಪತ್ರ ಕೊಡಲು ಬೆಳ್ತಂಗಡಿ ಕಡೆ ಹೋಗಿದ್ದ. ಸಂಜೆಯಾದರೂ ಮನೆಗೆ ಬಾರದ ಕಾರಣ ಮೊಬೈಲ್ ಗೆ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿರಲಿಲ್ಲ.

Bengaluru: ಕೊಲೆ ಯತ್ನದ ಆರೋಪಿ ಪ್ರೈವೇಟ್ ಜೆಟ್ ನಲ್ಲಿ ಎಸ್ಕೇಪ್, ಪೊಲೀಸರೇ ಶಾಕ್!

ಈ ಮಧ್ಯೆ ಜೂ.22ರಂದು ಬೆಳಿಗ್ಗೆ ಬೈಕೊಂದು ಅಪಘಾತವಾದ ರೀತಿಯಲ್ಲಿ ಗುಂಡ್ಯದಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ಅನುಮಾನಗೊಂಡು ಸುತ್ತಮುತ್ತ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಕಡಬ ಠಾಣೆ ಪೊಲೀಸರು ಮತ್ತು ಸಕಲೇಶಪುರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಸಕಲೇಶಪುರದ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.‌ ಬೈಕ್ ರಸ್ತೆ ಬದಿಯಲ್ಲಿರುವ ಸೇತುವೆಗೆ ಡಿಕ್ಕಿ ಹೊಡೆದಿರುವ ಅನುಮಾನ ಎದ್ದಿದ್ದು, ಸಾವಿನ ಕಾರಣಕ್ಕೆ ಮರಣೋತ್ತರ ಪರೀಕ್ಷೆ ವರದಿಗಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ.

MANGALURU: ನಿರ್ಲಕ್ಷ್ಯದಿಂದ ರಸ್ತೆ ದಾಟಿದ್ದ ಮಹಿಳೆ ವಿರುದ್ಧ, ಹೀರೋ ಆಗಿದ್ದ ಬಸ್ ಚಾಲಕನ ವಿರುದ್ಧವೂ ಕೇಸ್

ಸ್ಥಳದಲ್ಲಿ ಎರಡು ಹೆಲ್ಮೆಟ್: ಹೆಚ್ಚಾದ ಅನುಮಾನ!
ಬೆಳ್ತಂಗಡಿ ಕಡೆ ಹೋಗಿರುವ ನಾಗಪ್ರಸಾದ್ ಗುಂಡ್ಯ ಕಡೆ ಬರಲು ಕಾರಣವೇನು ಎಂಬ ಬಗ್ಗೆ ಮನೆಯವರಲ್ಲಿ ಅನುಮಾನ ಮೂಡಿದೆ. ಅಲ್ಲದೇ ಆತನ ಬಳಿ ಕಾರು ಇದ್ದರೂ ಬೈಕ್ ನಲ್ಲಿ ತೆರಳಿರೋದು ಮತ್ತು ಬೈಕ್ ನ ಬಳಿ ಎರಡು ಹೆಲ್ಮೆಟ್ ಪತ್ತೆಯಾಗಿರೋದು ಮತ್ತಷ್ಟು ಅನುಮಾನ ಮೂಡಿಸಿದೆ. ಗುಂಡ್ಯದಿಂದ ಸಕಲೇಶಪುರಕ್ಕೆ ಹೋಗುವ ರಸ್ತೆಯಲ್ಲಿ ಆತನ ಬೈಕ್ ಮತ್ತು ಮೃತದೇಹ ಪತ್ತೆಯಾಗಿದ್ದು, ಬೈಕ್ ರಸ್ತೆ ಬದಿಯಲ್ಲಿರುವ ಸಣ್ಣ ಸೇತುವೆಗೆ ಡಿಕ್ಕಿ ಹೊಡೆದು ಬಳಿಕ ಆತ ಕಂದಕಕ್ಕೆ ಉರುಳಿರಬಹುದು ಎಂಬ ಅನುಮಾನವೂ ಇದೆ.

ಆತನ ದೇಹದಲ್ಲಿ ಅಪಘಾತ ಸಂಭವಿಸಿದ ರೀತಿ ಗಾಯಗಳು ಮೇಲ್ನೋಟಕ್ಕೆ ಕಂಡುಬಂದಿದೆ. ಬೈಕ್ ಸೇತುವೆಗೆ ಹೊಡೆದು ನಜ್ಜುಗುಜ್ಜಾದ ರೀತಿಯಲ್ಲಿದೆ. ಈ ಕಾರಣ ಪ್ರಾಥಮಿಕ ತನಿಖೆಯಲ್ಲಿ ಅಪಘಾತ ಎಂದು ಕಂಡುಬಂದಿದ್ದು, ಈ ಕುರಿತು ತನಿಖೆ ನಡೆಸಲಾಗುವುದು ಎಂದು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

click me!