ಚಿಕ್ಕಮಗಳೂರು: ಯುವಕನ ಕೈಕಾಲು ಕಟ್ಟಿ ಥಳಿತ: ಐವರಿಗೆ ನ್ಯಾಯಾಂಗ ಬಂಧನ

By Kannadaprabha News  |  First Published Feb 10, 2024, 2:00 AM IST

ಕೊಪ್ಪ ಸಮೀಪದ ಕರ್ಕೆಶ್ವರ ಗ್ರಾಮದ ಸತೀಶ್ ದುಡಿದ ಹಣ ಕೇಳಿದ್ದಕ್ಕೆ ಈ ಮೇಲಿನ ಐದು ಜನರ ತಂಡ ಸೋಮ್ಲಾಪುರ ಪ್ಲಾಂಟೇಶನ್‌ನಲ್ಲಿ ಹಗ್ಗದಿಂದ ಕೈಕಾಲು ಕಟ್ಟಿ ಯುವಕನನ್ನು ಮರಕ್ಕೆ ಕಟ್ಟಿ ಯುವಕನ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ ಘಟನೆ ವೀಡಿಯೋ ರೆಕಾರ್ಡ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಸತೀಶ್ ಕೊಪ್ಪ ಠಾಣೆಗೆ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿತ್ತು.

ಕೊಪ್ಪ(ಫೆ.10):  ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೋರ್ವನನ್ನು ಮರಕ್ಕೆ ಕಟ್ಟಿಹಾಕಿ ಐದು ಜನರ ತಂಡ ಹಲ್ಲೆ ನಡೆಸಿ ಪೊಲೀಸರಿಂದ ತಲೆ ಮರೆಸಿಕೊಂಡಿದ್ದ ಮಹೇಶ್, ವಿಠಲ್, ಸಿರಿಲ್, ಸುನೀಲ್, ಮಂಜು ಎನ್ನುವವರನ್ನು ಕೊಪ್ಪ ಪೊಲೀಸರು ಬುಧವಾರ ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಈ ಐವರಿಗೂ ನ್ಯಾಯಾಂಗ ಬಂಧನ ವಿಧಿಸಿದೆ.

ಘಟನೆಯ ವಿವರ:

Latest Videos

undefined

ಕೊಪ್ಪ ಸಮೀಪದ ಕರ್ಕೆಶ್ವರ ಗ್ರಾಮದ ಸತೀಶ್ ದುಡಿದ ಹಣ ಕೇಳಿದ್ದಕ್ಕೆ ಈ ಮೇಲಿನ ಐದು ಜನರ ತಂಡ ಸೋಮ್ಲಾಪುರ ಪ್ಲಾಂಟೇಶನ್‌ನಲ್ಲಿ ಹಗ್ಗದಿಂದ ಕೈಕಾಲು ಕಟ್ಟಿ ಯುವಕನನ್ನು ಮರಕ್ಕೆ ಕಟ್ಟಿ ಯುವಕನ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ ಘಟನೆ ವೀಡಿಯೋ ರೆಕಾರ್ಡ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಸತೀಶ್ ಕೊಪ್ಪ ಠಾಣೆಗೆ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿತ್ತು.

ಲವ್ ಜಿಹಾದ್ ಆರೋಪಿಸಿ ನೈತಿಕ ಪೊಲೀಸ್ ಗಿರಿ: ಹಿಂದೂಪರ ಸಂಘಟನೆಯ 7 ಮಂದಿ ಬಂಧನ, ರುಮಾನ್ ವಿರುದ್ಧವೂ ಪ್ರತಿದೂರು

ಪೊಲೀಸರಿಂದ ತಲೆಮರೆಸಿಕೊಂಡಿದ್ದ ಐವರ ತಂಡವನ್ನು ಬಂಧಿಸುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ (ಐಪಿಎಸ್) ರವರು ಕೊಪ್ಪ ಪಿಎಸ್‌ಐ ಬಸವರಾಜ್ ಮತ್ತು ಸಿಬ್ಬಂದಿಳ ತಂಡ ರಚಿಸಿದ್ದರು. ವರಿಷ್ಠಾಧಿಕಾರಿಯವರ ಆದೇಶದನ್ವಯ ಕೊಪ್ಪ ಪೊಲೀಸರ ತಂಡ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

click me!