ಚಿಕ್ಕಮಗಳೂರು: ಲವ್ ಜಿಹಾದ್ ಪ್ರಕರಣ, ಡ್ಯಾನ್ಸ್ ಮಾಸ್ಟರ್ ವಿರುದ್ದ ಫೋಕ್ಸೋ ಪ್ರಕರಣ

By Girish Goudar  |  First Published Feb 9, 2024, 10:57 PM IST

ಆಲ್ದೂರಿನ ಸಂತೇ ಮೈದಾನ ನಿವಾಸಿ ರುಮಾನ್ ಲವ್ ಜಿಹಾದ್ ಪ್ರಕರಣದ ಆರೋಪಿಯಾಗಿದ್ದು, ಈತ ತನ್ನ ಬಳಿ ಡ್ಯಾನ್ಸ್ ಕಲಿಯಲು ಬರುತ್ತಿದ್ದ ಆಲ್ದೂರು ಸಮೀಪದ ದೊಡ್ಡಮಾಗರವಳ್ಳಿ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪ್ರೀತಿಯ ಹೆಸರಲ್ಲಿ ಮೋಸದ ಬಲೆಗೆ ಬೀಳಿಸಿದ್ದ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ. 


ಚಿಕ್ಕಮಗಳೂರು(ಫೆ.09):  ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರಿನಲ್ಲಿ ನಡೆದಿರುವ ಲವ್ ಜಿಹಾದ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಡ್ಯಾನ್ಸ್ ಮಾಸ್ಟರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆ ಆತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಜರಂಗ ದಳದ 7 ಕಾರ್ಯಕರ್ತರನ್ನು ಬಂಧಿಸಲಾಗಿದೆ. 

ಆಲ್ದೂರಿನ ಸಂತೇ ಮೈದಾನ ನಿವಾಸಿ ರುಮಾನ್ ಲವ್ ಜಿಹಾದ್ ಪ್ರಕರಣದ ಆರೋಪಿಯಾಗಿದ್ದು, ಈತ ತನ್ನ ಬಳಿ ಡ್ಯಾನ್ಸ್ ಕಲಿಯಲು ಬರುತ್ತಿದ್ದ ಆಲ್ದೂರು ಸಮೀಪದ ದೊಡ್ಡಮಾಗರವಳ್ಳಿ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪ್ರೀತಿಯ ಹೆಸರಲ್ಲಿ ಮೋಸದ ಬಲೆಗೆ ಬೀಳಿಸಿದ್ದ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ. ಅಲ್ಲದೆ ಬಾಲಕಿಯನ್ನು ಪ್ರೀತಿಯ ಹೆಸರಲ್ಲಿ ಪುಸಲಾಯಿಸಿ ಆಕೆಯೊಂದಿಗೆ ಓಡಾಡುತ್ತಿದ್ದ ವೀಡಿಯೋಗಳು ವೈರಲ್ ಆದ ಬೆನ್ನಲ್ಲೆ ನಿನ್ನೆ (ಗುರುವಾರ) ರಾತ್ರಿ ರುಮಾನ್ ಹಿಡಿದು ಥಳಿಸಲಾಗಿದೆ. 

Tap to resize

Latest Videos

ಸಂಬಳ ಕೊಡ್ತೇವೆ ಬಾ ಅಂತಾ ಕರೆಸಿಕೊಂಡು ಕಾರ್ಮಿಕನಿಗೆ ಚಿತ್ರಹಿಂಸೆ; ಐವರು ಆರೋಪಿಗಳು ಅರೆಸ್ಟ್

ಈ ಸಂಬಂಧ ರುಮಾನ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಜರಂಗದಳದ ಜಿಲ್ಲಾ ಸಂಚಾಲಕ ಸಿ.ಡಿ. ಶಿವಕುಮಾರ ಚಿಕ್ಕಮಾಗರವಳ್ಳಿ ಸೇರಿದಂತೆ ಮಧು ಚಿಕ್ಕಮಾಗರವಳ್ಳಿ , ಪ್ರಜ್ವಲ್ ಆಲ್ದೂರು, ಪರೀಕ್ಷಿತ್ ಗಾಳಿಗಂಡಿ, ರಂಜಿತ್ ಅರೇನಹಳ್ಳಿ, ಸ್ವರೂಪ ಕಬ್ಬಿಣ ಸೇತುವೆ, ಆದರ್ಶ್ ಅರೇನಹಳ್ಳಿ ಹಾಗೂ ಕಾರ್ತಿಕ್ ಅರೇನಹಳ್ಳಿ  ಎಂಬುವವರನ್ನು ಬಂಧಿಸಿದ್ದಾರೆ.

ಪೋಷಕರ ದೂರು

ಇದೇ ವೇಳೆ ಅಪ್ರಾಪ್ತ ಬಾಲಕಿಯ ತಂದೆ ರುಮಾನ್ ವಿರುದ್ಧ ದೂರು ನೀಡಿ, ತನ್ನ ಮಗಳನ್ನು ಪ್ರೀತಿಯ ಹೆಸರಲ್ಲಿ ಪುಸಲಾಯಿಸಿ ದಾರಿತಪ್ಪಿಸಿದ್ದಾನೆ. ಆಕೆಯ ಅಪಹರಣಕ್ಕೆ ಯತ್ನಿಸಿ, ವಂಚಿಸಿದ್ದಾನೆ ಎಂದು ತಿಳಿಸಿದ್ದಾರೆ.ತನ್ನ ಹಿರಿಯ ಮಗಳು ರುಮಾನ್ ಬಳಿ 3 ವರ್ಷಗಳಿಂದ ಡ್ಯಾನ್ಸ್ ಕ್ಲಾಸಿಗೆ ಹೋಗುತ್ತಿದ್ದಳು, ಮುರುಡೇಶ್ವರ, ಬೇಲೂರು, ಮಂಗಳೂರಿಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ನಂತರ ವಿಡಿಯೋ ಮಾಡಿ ಅವಳನ್ನು ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ದೂರಿನಲ್ಲಿ  ತಿಳಿಸಲಾಗಿದೆ.ಮನೆಯಲ್ಲಿ ಹೇಳಿದರೆ ನಿನ್ನ ವಿಡಿಯೋ, ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಬೆದರಿಸಿದ್ದಾನೆ. ಮಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೋರಿದ್ದಾರೆ.

ಬೆಂಗಳೂರಿಗರು ನಮ್ಮ ತೆರಿಗೆ ನಮ್ಮ ಹಕ್ಕು ಅಂದ್ರೆ ಏನ್ಮಾಡ್ತೀರಾ?: ಸಿ.ಟಿ. ರವಿ

ಪೋಕ್ಸೋ ಅಡಿ ಬಂಧನ

ಬಾಲಕಿ ಪೋಷಕರ ದೂರನ್ನಾಧರಿಸಿ ರುಮಾನ್ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

ಆಲ್ದೂರು ಉದ್ವಿಗ್ನ

ಘಟನೆಯಿಂದ ಆಲ್ದೂರು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆಲ್ದೂರು ಪಟ್ಟಣದಲ್ಲಿ ಕೆಎಸ್ಆರ್ಪಿ ನಿಯೋಜನೆ ಮಾಡಲಾಗಿದೆ.

click me!