ಕಲಬುರಗಿ ಪಾಲಿಕೆ ಆಯುಕ್ತ ಶಂಕ್ರಣ್ಣ ವಣಕ್ಯಾಳ 4 ದಿನ ನ್ಯಾಯಾಂಗ ವಶಕ್ಕೆ!

By Govindaraj SFirst Published Jun 2, 2022, 9:44 PM IST
Highlights

ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಲಬುರಗಿ ಮಹಾನಗರಪಾಲಿಕೆ ಆಯುಕ್ತ ಶಂಕ್ರಣ್ಣ ವಣಕ್ಯಾಳನನ್ನು ಜೂನ್ 6ನೇ ತಾರೀಖಿನವರೆಗೂ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಕಲಬುರಗಿ (ಜೂ.02): ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಲಬುರಗಿ ಮಹಾನಗರಪಾಲಿಕೆ ಆಯುಕ್ತ ಶಂಕ್ರಣ್ಣ ವಣಕ್ಯಾಳನನ್ನು ಜೂನ್ 6ನೇ ತಾರೀಖಿನವರೆಗೂ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ಪಾಲಿಕೆಯಿಂದ ಆರಂಭಿಸಲಾಗಿದ್ದ ಹೆಲ್ಪ್‌ಲೈನ್‌ನ ಬಿಲ್ ಪಾವತಿಸಲು 2 ಪರ್ಸೆಂಟೇಜ್ ಬೇಡಿಕೆ ಇಡಲಾಗಿತ್ತು. ಇದರ ಮೊತ್ತ 15 ಸಾವಿರ  ರೂಪಾಯಿ ಮಹಾನಗರಪಾಲಿಕೆಯ ಅಕೌಂಟೆಂಟ್ ಚೆನ್ನಪ್ಪ ಎನ್ನುವಾತ ಪಡೆಯುವಾಗ ಎಸಿಬಿ ಬಲೆಗೆ ರೆಡ್‌ ಹ್ಯಾಂಡಾಗಿ ಸಿಕ್ಕುಬಿದ್ದಿದ್ದ. 

ಈ ಹಣವನ್ನು ಚನ್ನಪ್ಪ ನೇರವಾಗಿ ಪಾಲಿಕೆ ಆಯುಕ್ತ ಶಂಕ್ರಣ್ಣ ಅವರ ಮನೆಗೆ ಹೋಗಿ ಕೊಟ್ಟ‌ ಸಂದರ್ಭದಲ್ಲಿ ಆಯುಕ್ತರನ್ನು ಎಸಿಬಿ ಟ್ರ್ಯಾಪ್ ಮಾಡಿತ್ತು. ಈ ಸಂಬಂಧ ಕಲಬುರಗಿ ಎಸಿಬಿ ಅಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತ ಶಂಕರಣ್ಣ ವಣಕ್ಯಾಳ್, ಅಕೌಂಟೆಂಟ್ ಚೆನ್ನಪ್ಪನನ್ನ ವಶಕ್ಕೆ ಪಡೆದುಕೊಂಡಿದ್ದರು. ಪಾಲಿಕೆ ಆಯುಕ್ತ ಶಂಕ್ರಣ್ಣ ವಣಿಕ್ಯಾಳನನ್ನ ಇಂದು‌ ಎಸಿಬಿ ಅಧಿಕಾರಿಗಳು ನ್ಯಾಯಧಿಶರ ಮುಂದೆ ಹಾಜರುಪಡಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮುಖಾಂತರ ಕಲಬುರಗಿಯ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಶಂಕ್ರಣ್ಣ ವಣಿಕ್ಯಾಳರನ್ನ ನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 

PSI ನೇಮಕಾತಿ ಅಕ್ರಮದ ಕಿಂಗ್‌ಪಿನ್ ಆರ್.ಡಿ ಪಾಟೀಲನ ಮತ್ತಿಬ್ಬರು ಆಪ್ತರ ಬಂಧನ!

ಇತ್ತ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಾನಗರ ಪಾಲಿಕೆ ಆಯುಕ್ತ ಶಂಕ್ರಣ್ಣ ವಣಿಕ್ಯಾಳ ಅಮಾನತ್ತಿಗಾಗಿ ಎಸಿಬಿ ಸರಕಾರಕ್ಕೆ ಪತ್ರ ಬರೆದಿದೆ. ಕಳೆದ ಮೂರು ತಿಂಗಳ ಹಿಂದಷ್ಟೇ ಕಲಬುರಗಿ ಮಹಾನಗರಪಾಲಿಕೆಯ ಆಯುಕ್ತರಾಗಿ, ಶಂಕರಣ್ಣ ವಣಕ್ಯಾಳ ಅಧಿಕಾರ ಸ್ವೀಕರಿಸಿದ್ದರು. ವಣಕ್ಯಾಣ ಅಧಿಕಾರ ಸ್ವೀಕರಿಸಿದ ದಿನದಿಂದ ಪಾಲಿಕೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎನ್ನುವ ಆರೋಪಗಳು ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿ ಬರುವಂತಾಗಿತ್ತು. ಅಂತಿಮವಾಗಿ ಪಾಲಿಕೆಯ ಆಯುಕ್ತರೇ ಎಸಿಬಿ ಬಲೆಗೆ ಬಿದ್ದು ಜೈಲು ಸೇರಿರುವುದು ಭ್ರಷ್ಟರಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಕೊಪ್ಪ ಸಹಕಾರ ಸಾರಿಗೆ ಅಧ್ಯಕ್ಷ ಧರ್ಮಪ್ಪ ಜೈಲು ಪಾಲು: ಆರ್ಥಿಕ ನಷ್ಟ, ಸರ್ಕಾರದ ಅಸಹಕಾರದಿಂದ ಕಾರ್ಮಿಕರೇ ಮಾಲೀಕರಾಗಿದ್ದ, ಏಷ್ಯಾ ಖಂಡದ ಬೆಸ್ಟ್ ಸಹಕಾರ ಸಾರಿಗೆ ಸಂಸ್ಥೆ ಬೀಗ ಹಾಕಿ ಮೂರು ವರ್ಷಗಳೇ ಕಳೆದಿದೆ. ಸಂಸ್ಥೆಯನ್ನು ಮಾರಾಟಕ್ಕೆ ಇಟ್ಟಿದ್ದರೂ ತೆಗೆದುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಇದರಿಂದ ಕಾರ್ಮಿಕರ ಸ್ಥಿತಿ ದಿನದಿಂದ ದಿನಕ್ಕೆ ಶೋಚನಿಯವಾಗುತ್ತಿದೆ. ಇದರ ನಡುವೆ ಕಂಪನಿಯಿಂದ ಕಾರ್ಮಿಕರಿಗೆ ಬರಬೇಕಾಗಿರುವ ಪಿಎಫ್ ಸೇರಿದಂತೆ ಆರ್ಥಿಕ ನಷ್ಟ, ಕಾರ್ಮಿಕರ ಬಾಕಿ ವೇತನ ಬಾಕಿ ಬಗ್ಗೆ ನ್ಯಾಯಾಲದಲ್ಲಿ ವಿಚಾರಣೆ ನಡೆಯುತ್ತಿದೆ. 

ರಾಜಕೀಯ ಲಾಭಕ್ಕಾಗಿ ದಲಿತರ ಮೇಲೆ ಬಿಜೆಪಿಗೆ ಪ್ರೀತಿ: ಪ್ರಿಯಾಂಕ್‌ ಖರ್ಗೆ

ಕೊಪ್ಪ ಸಹಕಾರ ಸಾರಿಗೆ ಅಧ್ಯಕ್ಷ ಧರ್ಮಪ್ಪ ಜೈಲು ಪಾಲು: ಮಲೆನಾಡಿನ ಪ್ರತಿಷ್ಠಿತ ಸಹಕಾರ ಸಾರಿಗೆಯ ಅಧ್ಯಕ್ಷರಾಗಿದ್ದ ಎಸ್ ಧರ್ಮಪ್ಪರಿಗೆ ನ್ಯಾಯಾಂಗ ಬಂಧನ ವಿಧಿಸಿ ಕೊಪ್ಪದ ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆಯೂ ಕಳೆದ ಮೂರು ವರ್ಷದ ಹಿಂದೆ ನಷ್ಟದ ನೆಪವೊಡ್ಡಿ ತನ್ನೆಲ್ಲ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಈ ವೇಳೆ ಕಾರ್ಮಿಕರಿಗೆ ಪಿಎಫ್ ಹಣ ಹಾಗೂ ಸಂಬಳವನ್ನು ನೀಡಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿತ್ತು. ಈ ಸಂಬಂಧ ಕಾರ್ಮಿಕ ಸಂಘಟನೆಯೂ ಕೋರ್ಟ್‌ನಲ್ಲಿ ದಾವೆಯನ್ನು ಹೂಡಿದ್ದರು.ಸೋಮವಾರ ಬೆಳಿಗ್ಗೆ ಕೊಪ್ಪ ಪೊಲೀಸರು ಭಂಡಿಗಡಿಯಲ್ಲಿ ಧರ್ಮಪ್ಪ ರವರನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದರು. ಧರ್ಮಪ್ಪರವರ ಮೇಲಿರುವ ಆರೋಪಗಳನ್ನು ಪರಿಶೀಲಿಸಿರುವ ಕೋರ್ಟ್ ಜೂನ್ 10ರ ವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

click me!