ಆರೋಪಿ ಬಂಧಿಸಿ ಕರೆತರುವಾಗ ಕಳಚಿದ ಜೀಪಿನ ಚಕ್ರ; ಅದೃಷ್ಟವಶಾತ್‌ ಪೊಲೀಸರು ಪಾರು!

By Kannadaprabha News  |  First Published Oct 30, 2022, 12:50 PM IST

ಅಕ್ರಮ ಮದ್ಯ ಮಾರಾಟದ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮಾಲು ಸಹಿತ ಪೊಲೀಸ್‌ ಠಾಣೆಗೆ ಕರೆ ತರುವ ವೇಳೆ ಠಾಣೆಯ ಮುಂಭಾಗದಲ್ಲೇ ಜೀಪಿನ ಚಕ್ರ ಕಳಚಿದ ಘಟನೆ ಶುಕ್ರವಾರ ಉಪ್ಪಿನಂಗಡಿಯಲ್ಲಿ ನಡೆದಿದೆ


ಉಪ್ಪಿನಂಗಡಿ (ಅ.30): ಅಕ್ರಮ ಮದ್ಯ ಮಾರಾಟದ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮಾಲು ಸಹಿತ ಪೊಲೀಸ್‌ ಠಾಣೆಗೆ ಕರೆ ತರುವ ವೇಳೆ ಠಾಣೆಯ ಮುಂಭಾಗದಲ್ಲೇ ಜೀಪಿನ ಚಕ್ರ ಕಳಚಿದ ಘಟನೆ ಶುಕ್ರವಾರ ಉಪ್ಪಿನಂಗಡಿಯಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ನೆಲ್ಯಾಡಿ ಹೊರಠಾಣಾ ವ್ಯಾಪ್ತಿಯ ಉದನೆ ಎಂಬಲ್ಲಿ ವ್ಯಕ್ತಿಯೊಬ್ಬ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಆರೋಪಿಯ ವಶದಲ್ಲಿದ್ದ ತಲಾ 180 ಮಿ.ಲೀ.ನ 5 ಬಾಟಲಿಗಳನ್ನು ಪತ್ತೆ ಹಚ್ಚಿ ಆರೋಪಿಯನ್ನು ಜೀಪಿನಲ್ಲಿ ಕೂರಿಸಿಕೊಂಡು ಉಪ್ಪಿನಂಗಡಿ ಠಾಣೆಗೆ ಕರೆ ತರುತ್ತಿದ್ದರು. ಇನ್ನೇನು ಠಾಣೆಗೆ ತಲುಪಬೇಕೆನ್ನುವಷ್ಟರಲ್ಲಿ ಜೀಪ್‌ನ ಮುಂಭಾಗದ ಚಕ್ರ ಕಳಚಿ ಬಿದ್ದಿದ್ದು, ಅದೃಷ್ಟವಶಾತ್‌ ಯಾರಿಗೂ ಅಪಾಯವಾಗಿಲ್ಲ.

ಅಪಘಾತದಲ್ಲಿ ಸಾಕು ಪ್ರಾಣಿ ಸಾವು ಐಪಿಸಿ ಅಪರಾಧವಲ್ಲ: ಹೈಕೋರ್ಟ್‌

Tap to resize

Latest Videos

undefined

ಬೈಕ್‌ ಅಪಘಾತ: ದೈಹಿಕ ಶಿಕ್ಷಣ ಶಿಕ್ಷಕ ಸಾವು

ಬೈಕ್‌ ಅಪಘಾತಕ್ಕೀಡಾಗಿ ದೇರಳಕಟ್ಟೆಪಬ್ಲಿಕ್‌ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದೇರಳಕಟ್ಟೆಮಸೀದಿ ಬಳಿ ಶನಿವಾರ ಸಂಜೆ ವೇಳೆ ಸಂಭವಿಸಿದೆ. ದೇರಳಕಟ್ಟೆನಿವಾಸಿ ಇಸ್ಮಾಯಿಲ್‌ (55) ಮೃತರು. ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಮನೆ ಕಡೆಗೆ ತೆರಳಲು ರಸ್ತೆ ದಾಟುವ ಸಂದರ್ಭ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಬುಲೆಟ್‌ ಬೈಕ್‌ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಭೀರ ಗಾಯಗೊಂಡ ಇಸ್ಮಾಯಿಲ್‌ ಅವರು ಆಸ್ಪತ್ರೆಗೆ ದಾಖಲಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬೈಕ್‌ ಸವಾರರಿಬ್ಬರು ಗಾಯಗೊಂಡಿದ್ದಾರೆ. ಮೃತರು ಉತ್ತಮ ನಾಟಕ ಕಲಾವಿದ, ಖೋ ಖೋ ಪಂದ್ಯದಲ್ಲಿ ರಾಜ್ಯಮಟ್ಟದ ತೀರ್ಪುಗಾರರಾಗಿ, ಉಳ್ಳಾಲ ತಾಲೂಕು ವಾಲಿಬಾಲ್‌ ಅಸೋಸಿಯೇಷನ್‌ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ನದಿಗೆ ಹಾರಿದ ವ್ಯಕ್ತಿ ನಾಪತ್ತೆ!

ಮಂಗಳೂರು: ವ್ಯಕ್ತಿಯೊಬ್ಬರು ಗುರುಪುರ ಸೇತುವೆ ಮೇಲೆ ದ್ವಿಚಕ್ರ ವಾಹನ ನಿಲ್ಲಿಸಿ ನದಿಗೆ ಹಾರಿದ ಘಟನೆ ಗುರುವಾರ ರಾತ್ರಿ ನಡೆದಿದೆ. ವ್ಯಕ್ತಿಯಲ್ಲಿ ಪೇಂಟರ್‌ ಆಗಿರುವ ವಾಮಂಜೂರು ಮೂಡುಶೆಡ್ಡೆ ನಿವಾಸಿ ಅರುಣ್‌ ಪೂಜಾರಿ(38) ನದಿಗೆ ಹಾರಿದ ವ್ಯಕ್ತಿ. ಇವರು ನದಿಗೆ ಹಾರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಕೂಡಲೇ ಮಾಹಿತಿ ತಿಳಿಸಿದ್ದಾರೆ. ಬಜಪೆ ಪೊಲೀಸರು ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸಿದ್ದಾರೆ. ಶುಕ್ರವಾರ ಕೂಡಾ ಹುಡುಕಾಟ ಮುಂದುವರಿದಿದೆ.

ಶಸ್ತ್ರಚಿಕಿತ್ಸೆಗೆ ಹೆದರಿ ಮಹಿಳೆ ಆತ್ಮಹತ್ಯೆ

ಬೆನ್ನು ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಶಸ್ತ್ರಚಿಕಿತ್ಸೆಗೆ ಹೆದರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ನಾಯ್ಡುನಗರದ ನಿವಾಸಿ ಕವಿತಾ(48) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಇವರು ಹಲವು ವರ್ಷಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದರು. ಪತಿ ಶಿವಲಿಂಗೇಗೌಡ ಕೊರೋನಾದಿಂದ ಮೃತಪಟ್ಟಿದ್ದರು. ಇವರ ಮಗ ಕುಶಾಲ್‌ ಕಬ್ಬಿಣದ ವ್ಯಾಪಾರ ಮಾಡುತ್ತಿದ್ದರು. ಇದರಲ್ಲಿ ನಷ್ಟವೂ ಆಗಿ, ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು.

ಉತ್ತರ ಪ್ರದೇಶದಲ್ಲಿ ಭೀಕರ ಘಟನೆ, ಟೈಲರ್‌ನ ಮರ್ಮಾಂಗವನ್ನೇ ಕತ್ತರಿಸಿದ ತೃತೀಯ ಲಿಂಗಿಗಳು!

ಈ ಎಲ್ಲಾ ಕಾರಣದಿಂದ ಮನನೊಂದಿದ್ದ ಕವಿತಾ ಅವರಿಗೆ ಭಾನುವಾರ ಬೆನ್ನು ನೋವಿಗೆ ಸಂಬಂಧಪಟ್ಟಂತೆ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಇದಕ್ಕೆ ಹೆದರಿದ ಕವಿತಾ ಅವರು ಶುಕ್ರವಾರ ರಾತ್ರಿ ಮನೆಯಲ್ಲಿ ಮಕ್ಕಳು ಮಲಗಿದ ನಂತರ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಶನಿವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

click me!