
ಮಂಡ್ಯ(ಅ.30): ಪುನೀತ್ ರಾಜಕುಮಾರ್ ಅಭಿಮಾನಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ನಿನ್ನೆ(ಶನಿವಾರ) ನಡೆದಿದೆ. ಕಿರಣ್ ಎಂಬಾತನೇ ಆತ್ಮಹತ್ಯೆಗೆ ಶರಣಾದ ಅಪ್ಪು ಅವರ ದೊಡ್ಡ ಅಭಿಮಾನಿಯಾಗಿದ್ದಾನೆ.
ಈ ಬಗ್ಗೆ ಮಾತನಾಡಿದ ಮೃತ ಕಿರಣ್ ಮಾವ ರವಿಚಂದ್ರ ಅವರು, ನನ್ನ ಸೋದರಳಿಯ ಅಪ್ಪು ಅವರ ದೊಡ್ಡ ಅಭಿಮಾನಿಯಾಗಿದ್ದ, ಕಿರಣ್ ಪುನೀತ್ ಅವರ ಪ್ರತಿ ಸಿನಿಮಾ ಶೂಟಿಂಗ್ ಅಟೆಂಡ್ ಮಾಡುತ್ತಿದ್ದ. ನಿನ್ನೆ ಪುನೀತ್ ಪುಣ್ಯ ಸ್ಮರಣೆ ಪ್ರಯುಕ್ತ ಸ್ನೇಹಿತರ ಜೊತೆ ಸೇರಿ ಅನ್ನ ಸಂತರ್ಪಣೆ ಮಾಡಿದ್ದನು. ಎಲ್ಲರ ಜೊತೆ ಸೇರಿ ಗಂಧದಗುಡಿ ಸಿನಿಮಾ ನೋಡಿಕೊಂಡು ಬಂದಿದ್ದ. ಅಪ್ಪು ಇಲ್ಲ ಅನ್ನೋದನ್ನ ಅರಗಿಸಿಕೊಳ್ಳೋಕೆ ಆಗಿಲ್ಲ. ಹಾಗಾಗಿ ಈ ರೀತಿ ಮಾಡಿಕೊಂಡಿರಬಹುದು ಅಂತ ತಿಳಿಸಿದ್ದಾರೆ.
ಅಪ್ಪು ಪುಣ್ಯಸ್ಮರಣೆ: ಅಭಿಮಾನಿಗಳಿಂದ ಬಿರಿಯಾನಿ, ಬಾಡೂಟ ಸೇವೆ
ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಈಗ ವಯಸ್ಸಾದ ತಂದೆ ತಾಯಿಯನ್ನ ನೋಡಿಕೊಳ್ಳುವವರು ಯಾರು?. ಅಭಿಮಾನವೇ ಬೇರೆ, ಮೊದಲು ತಂದೆ ತಾಯಿಗಳನ್ನು ನೋಡಿ. ಪಾರ್ವತಮ್ಮ ರಾಜ್‍ಕುಮಾರ್ ಆಸ್ಪತ್ರೆ ಸೇರಿದ್ದಾಗ ಅಪ್ಪು ಯಾವ ರೀತಿ ನೋಡಿಕೊಂಡ್ರು. ವೈದ್ಯರು ಎಲ್ಲ ಸರಿ ಇದೆ ಅಂದ್ರೂ 15 ದಿನ ವೆಂಟಿಲೇಟರ್‌ನಲ್ಲಿ ಇರಲಿ ಅಂದಿದ್ರು. ಫ್ಯಾನ್ಸ್‌ಗೆ ಕಿಂಚಿತ್ತು ನೋವಾಗದಂತೆ ಅಪ್ಪು ನಡೆದುಕೊಳ್ಳುತ್ತಿದ್ದರು. ಇಂತಹ ಸಾವು ನಮ್ಮ ಮನೆಗೆ ಕೊನೆಯಾಗಲಿ. ಅಭಿಮಾನದಿಂದ ಯಾರೂ ಈ ರೀತಿ ಮಾಡಿಕೊಳ್ಳಬೇಡಿ. ಆ ಮೂಲಕ ತಂದೆ ತಾಯಿಗೆ ನೋವು ಕೊಡಬೇಡಿ ಅಂತ ಅಪ್ಪು ಅಭಿಮಾನಿ ಮೃತ ಕಿರಣ್ ಮಾವ ರವಿಚಂದ್ರ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಸದ್ಯ ಕಿರಣ್ ಮೃತದೇಹವನ್ನ ಮೈಸೂರು ಕೆಆರ್.ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ