
ವಿಜಯಪುರ(ಏ.12): ಅನೈತಿಕ ಸಂಬಂಧ ಶಂಕಿಸಿ ರೌಡಿಶೀಟರ್‌ನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ನಗರ ಹೊರವಲಯದ ಇಟ್ಟಂಗಿಹಾಳ ರಸ್ತೆ ಬಳಿಯ ಜಮೀನಿನಲ್ಲಿ ಭಾನುವಾರ ನಡೆದಿದೆ.
ದಸ್ತಗೀರಸಾಬ ಮಮದಾಪುರ (45) ಕೊಲೆಯಾದ ರೌಡಿಶೀಟರ್. ಅಣ್ಣಪ್ಪಗೌಡ ಬಾಗಾಯತ ಕೊಲೆ ಆರೋಪಿ. ಅಣ್ಣಪ್ಪಗೌಡ ಬಾಗಾಯತ ಎಂಬಾತನ ಪತ್ನಿಯೊಂದಿಗೆ ದಸ್ತಗೀರಸಾಬ್ ಅನೈತಿಕ ಸಂಬಂಧ ಹೊಂದಿದ್ದ ಎಂಬ ಶಂಕೆಯ ಮೇರೆಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.
ತಂದೆಗೆ ಚಾಡಿ ಹೇಳ್ತಾಳೆ ಅಂತ ಮೂರು ವರ್ಷದ ಮಗಳನ್ನೇ ಕೊಂದ ಕಿರಾತಕ ತಾಯಿ..!
ಕಳೆದ ಹದಿನೈದು ದಿನಗಳ ಹಿಂದೆಯೂ ಸಹ ಕೊಲೆಗೆ ಯತ್ನ ನಡೆದಿತ್ತು. ಸದ್ಯ ಆರೋಪಿ ಅಣ್ಣಪ್ಪಗೌಡ ಬಾಗಾಯತನನ್ನು ಬಂಧಿಸಲಾಗಿದೆ. ಘಟನಾ ಸ್ಥಳಕ್ಕೆ ಆದರ್ಶನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿ, ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ