ಗುಪ್ತಾಂಗಕ್ಕೆ ಸಲಾಕೆ ತುರುಕಿ ನಿರ್ಭಯಾ ರೀತಿ ರೇಪ್!

By Kannadaprabha News  |  First Published Jan 29, 2020, 10:11 AM IST

ನಾಗ್ಪುರದಲ್ಲಿ ಯುವತಿ ಮೇಲೆ ನಿರ್ಭಯಾ ಮಾದರಿ ಅತ್ಯಾಚಾರ| ಗುಪ್ತಾಂಗಕ್ಕೆ ಸಲಾಕೆ ತುರುಕಿ ರ್ಕೌರ್ಯ ಮೆರೆದ ಕೀಚಕರು


ನಾಗ್ಪುರ[ಜ.29]: 2012ರಲ್ಲಿ ದೆಹಲಿಯಲ್ಲಿ ನಿರ್ಭಯಾ ಮೇಲೆ ನಡೆದ ಭೀಕರ ಅತ್ಯಾಚಾರವನ್ನೇ ಹೋಲುವ ಘಟನೆಯೊಂದು ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಅದೃಷ್ಟವಶಾತ್‌ ಯುವತಿ ಬದುಕುಳಿದಿದ್ದಾಳೆ.

19 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ದುಷ್ಕರ್ಮಿಯೋರ್ವ, ಬಳಿಕ ಆಕೆಯ ಗುಪ್ತಾಂಗದಲ್ಲಿ ಕಬ್ಬಿಣದ ಸಲಾಕೆ ತುರುಕಿದ್ದಾನೆ. ಈ ದುಷ್ಕೃತ್ಯವೆಸಗಿ ತಲೆ ಮರೆಸಿಕೊಂಡಿದ್ದ ದುರುಳ ಯೋಗಿಲಾಲ್‌ ರಹಾಂಗದಲೆ(52) ಗೊಂಡಿಯಾ ಜಿಲ್ಲೆಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Tap to resize

Latest Videos

ಮದುವೆ ಆಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ 4 ದಿನಗಳಿಂದ ರೇಪ್‌

ಇಲ್ಲಿನ ಪರಧಿ ಎಂಬ ಪ್ರದೇಶದಲ್ಲಿ ತನ್ನ ಅಣ್ಣನ ಜೊತೆಗಿದ್ದ ಸಂತ್ರಸ್ತೆಯು ಗಾರ್ಮೆಂಟ್ಸ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಗಾರ್ಮೆಂಟ್ಸ್‌ನಲ್ಲಿ ಆರೋಪಿ ಸೂಪರ್‌ವೈಸರ್‌ ಆಗಿದ್ದ. ಜ.21ರಂದು ಸಂತ್ರಸ್ತೆಯ ಸೋದರ ಹಾಗೂ ಆಕೆಯ ಸ್ನೇಹಿತೆ ಕೆಲಸದ ಮೇಲೆ ತಮ್ಮ ಗ್ರಾಮಕ್ಕೆ ಹೋಗಿದ್ದರು.

ಈ ವೇಳೆ, ಸಂತ್ರಸ್ತೆಯ ಮನೆಗೆ ಬಂದಿದ್ದ ದುಷ್ಕರ್ಮಿ ಯೋಗಿಲಾಲ್‌, ಯುವತಿ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದು, ಈ ವೇಳೆ ಪ್ರತಿರೋಧ ಒಡ್ಡಿದ ಯುವತಿ ಬಾಯಲ್ಲಿ ಬಟ್ಟೆತುರುಕಿದ್ದಾನೆ. ಕೊನೆಗೆ ಯುವತಿ ಪ್ರಜ್ಞೆ ತಪ್ಪಿದ ಬಳಿಕ ಲೈಂಗಿಕ ದೌರ್ಜನ್ಯವೆಸಗಿ, ಗುಪ್ತಾಂಗದಲ್ಲಿ ಕಬ್ಬಿಣದ ಸಲಾಕೆ ತುರುಕಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ.

ಅತ್ಯಾಚಾರಿಯನ್ನೇ ಸಂತ್ರಸ್ತೆ ಮದುವೆಯಾಗಬೇಕು: ಜನವರಿ ಅಂತ್ಯಕ್ಕೆ ಹೊಸ ಮಸೂದೆ!

click me!