ಮಗನ ತಲೆ ನೆಲಕ್ಕೆ ಚಚ್ಚಿ, ನೀರು ಕೇಳಿದರು ಕೊಡದೇ ಕ್ರೂರವಾಗಿ ಥಳಿಸಿದ ತಾಯಿ: ವೀಡಿಯೋ ವೈರಲ್

By Anusha Kb  |  First Published Jul 17, 2024, 10:30 PM IST

ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತು  ಕಲಿಯುಗದಲ್ಲಿ ಸುಳ್ಳಾಗ್ತಿದ್ಯಾ ಎಂಬ ಅನುಮಾನ ಮೂಡ್ತಿದೆ. ಕೆಲ ತಾಯಂದಿರು ಕೋಪದ ಕೈಗೆ ಬುದ್ದಿ ಕೊಟ್ಟು ತಮ್ಮ ಕರುಳ ಕುಡಿ ಸಣ್ಣ ಮಗು ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ಪುಟ್ಟ ಮಕ್ಕಳಿಗೆ ಹಿಗ್ಗಾಮುಗ್ಗಾ ಥಳಿಸಿ ಕ್ರೌರ್ಯ ಮೆರೆಯುತ್ತಿದ್ದಾರೆ.


ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತು  ಕಲಿಯುಗದಲ್ಲಿ ಸುಳ್ಳಾಗ್ತಿದ್ಯಾ ಎಂಬ ಅನುಮಾನ ಮೂಡ್ತಿದೆ. ಇತ್ತೀಚೆಗೆ ಮಕ್ಕಳೊಂದಿಗೆ ಕೆಲ ತಾಯಂದಿರ ವರ್ತನೆ ಇದಕ್ಕೆ ಕಾರಣ ಆಗ್ತಿದೆ. ಕೆಲ ತಾಯಂದಿರು ಕೋಪದ ಕೈಗೆ ಬುದ್ದಿ ಕೊಟ್ಟು ತಮ್ಮ ಕರುಳ ಕುಡಿ ಸಣ್ಣ ಮಗು ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ಪುಟ್ಟ ಮಕ್ಕಳಿಗೆ ಹಿಗ್ಗಾಮುಗ್ಗಾ ಥಳಿಸಿ ಕ್ರೌರ್ಯ ಮೆರೆಯುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ಕಡೆ ತಾಯಿಯೊಬ್ಬಳು ತನ್ನ ಅಪ್ರಾಪ್ತ ಮಗನನ್ನು ಕ್ರೂರವಾಗಿ ಥಳಿಸಿದ್ದಾಳೆ. ಈ ದೃಶ್ಯವನ್ನು ಯಾರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಈ ವೀಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಕ್ರೂರಿ ಅಮ್ಮನನ್ನು ಬಂಧಿಸಿದ್ದಾರೆ.

ಉತ್ತರಾಖಂಡ್‌ ಹರಿದ್ವಾರದ ರೂರ್ಕಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿ ಆಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಮಹಿಳೆ ತನ್ನ 8 ವರ್ಷದ ಮಗುವನ್ನು ನೆಲಕ್ಕೆ ತಳ್ಳಿ ಆತನ ಮೇಲೆ ಕುಳಿತು ಆತನ ಕೈಗಳನ್ನು ಹಿಡಿದು ಆತನ ಎದೆಭಾಗಕ್ಕೆ ಜೋರಾಗಿ ಕಚ್ಚುತ್ತಾಳೆ. ಈ ವೇಳೆ ಮಗು ನೋವು ತಡೆಯಲಾಗದೇ ಜೋರಾಗಿ ಕೂಗುತ್ತಾನೆ. ಅಲ್ಲದೇ ಯಾರಾದರೂ ಸ್ವಲ್ಪ ನೀರು ಕೊಡಿ ಎಂದು ಅದು ಆರ್ತನಾಗಿ ಕೇಳುವುದನ್ನು ಕಾಣಬಹುದಾಗಿದೆ. ಬರೀ ಇಷ್ಟೇ ಅಲ್ಲದೇ ಬಾಲಕನ ತಲೆಯನ್ನು ಹಿಡಿದು ತಾಯಿ ನೆಲಕ್ಕೆ ಕುಟ್ಟುವುದನ್ನು ಕೂಡ ವೀಡಿಯೋದಲ್ಲಿ ಕಾಣಬಹುದು. ಈ ವೇಳೆ ಜೊತೆಯಲ್ಲೇ ಇನ್ನೊಬ್ಬ ಪುಟ್ಟ ಬಾಲಕನಿದ್ದು, ಆತ ಅಮ್ಮನ ಕೃತ್ಯವನ್ನು ಆತಂಕದಿಂದ ನೋಡುವುದನ್ನು ಕಾಣಬಹುದು. ಬಹುತೇಕ ಈ ವೀಡಿಯೋದಲ್ಲಿ ಕಾಣಿಸುವಂತೆ ಆಕೆ ಬಾಲಕನ್ನು ಕೊಲ್ಲಲು ನೋಡುತ್ತಿರುವಂತೆ ಕಾಣಿಸುತ್ತಿದೆ. ಈ ಭೀಕರ ದೃಶ್ಯವನ್ನು ಸಮೀಪದಲ್ಲೇ ಇದ್ದ ನೋಡುಗರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

Tap to resize

Latest Videos

ಚಡ್ಡಿಯಲ್ಲಿ ಸೂಸು ಮಾಡಿದ ಮಗುವಿಗೆ ಚಾಕುವಿನಿಂದ ಹಲ್ಲೆ

ಅಲ್ಲದೇ ತಾಯಿ ಥಳಿಸುತ್ತಿದ್ದರೆ, ಮಗು ಮಮ್ಮಿ ಪ್ಲೀಸ್ ಮೊದಲಿಗೆ ನನಗೆ ಸ್ವಲ್ಪ ನೀರು ನೀಡು ಎಂದು ಕೇಳುತ್ತಿರುವುದನ್ನು ವೀಡಿಯೋದಲ್ಲಿ ಕೇಳಬಹುದು. ಆದರೆ ತಾಯಿ ಆತನ ಕೆನ್ನೆಗೆ ಹಲವು ಬಾರಿ ಬಾರಿಸುತ್ತಾಳೆ. ನಂತರ ಆತನ ಎರಡು ಎದೆಭಾಗಕ್ಕೂ ಜೋರಾಗಿ ಕಚ್ಚುತ್ತಾಳೆ ಅಲ್ಲದೇ ಆತನ ಕತ್ತನ್ನು ಹಿಸುಕಿ ಉಸಿರುಕಟ್ಟಿಸಲು ಯತ್ನಿಸುತ್ತಾಳೆ. ಈ ವೇಳೆ ಬೇರೊಬ್ಬ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿ ಆತ ಸಾಯುತ್ತಾನೆ ಎಂದು ಕಿರುಚಿದ್ದು, ಈ ವೇಳೆ ಆಕೆ ಮಗನ ಕತ್ತಿನಿಂದ ಕೈ ಹೊರತೆಗೆದಿದ್ದಾಳೆ. ಇದಾದ ನಂತರ ಬಾಲಕ ಮತ್ತೆ ನೀರು ಕೇಳುತ್ತಾನೆ. ಈ ವೇಳೆ ಆಕೆ ಮತ್ತೆ ಹೊಡೆಯಲು ಶುರು ಮಾಡುತ್ತಾಳೆ. ಅಲ್ಲದೇ ಕೈಗಳನ್ನು ಮುಷ್ಠಿ ಮಾಡಿ ಮಗನಿಗೆ ಮತ್ತೆ ಥಳಿಸುತ್ತಾಳೆ. 

ಆದರೆ ನಿಮಿಷಗಳಲ್ಲಿ ಬಾಲಕ ಎದ್ದು ಓಡಲು ಶುರು ಮಾಡಿದ್ದು, ಹೀಗಾಗಿ ಬಾಲಕ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಆದರೆ ವೀಡಿಯೋ ನೋಡಿದ ಜನ ಹೀಗೆ ಮಗುವಿಗೆ ಕ್ರೂರವಾಗಿ ಥಳಿಸಿದ ಮಹಿಳೆಗೆ ಮಾನಸಿಕ ಆಗಿದೆ, ಆಕೆ ಮೆಂಟಲ್ ಆಗಿದ್ದಾಳೆ, ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

Kodagu crimes: ಪಾನಮತ್ತನಾಗಿ ಪತ್ನಿ, ಮಗುವಿನ ಮೇಲೆ ಹಲ್ಲೆ: ಬಂಧನ

ಒಟ್ಟಿನಲ್ಲಿ ಕೆಲಸದ ಒತ್ತಡ, ಇತರ ಚಿಂತೆಗಳಿಂದಾಗಿ ಮಾನಸಿಕ ಒತ್ತಡಕ್ಕೆ ಸಿಲುಕುವ ತಾಯಂದಿರು ಮಕ್ಕಳ ಸಣ್ಣಪುಟ್ಟ ರಗಳೆಗಳಿಂದ ರೊಚ್ಚಿಗೆದ್ದು ಸಿಟ್ಟಿನ ಕೈಗೆ ಬುದ್ಧಿ ಕೊಡುವ ಮೊದಲು ಮಕ್ಕಳಿಗೆ ಸಮಾಧಾನದಿಂದ ತಿಳಿ ಹೇಳುವ ಪ್ರಯತ್ನ ಮಾಡಬೇಕು. ಅಥವಾ ತಾವೇ ಮಾನಸಿಕ ತಜ್ಞರಿಂದ ಸಮಾಲೋಚನೆಗೆ ಒಳಗಾಗಬೇಕು. ಅದು ಬಿಟ್ಟು ಹೀಗೆಲ್ಲಾ ಥಳಿಸಿದರೆ ಮಕ್ಕಳು ಸತ್ತೇ ಹೋಗುತ್ತಾರೆ. ಒಂದು ವೇಳೆ ಬದುಕಿದರೂ ಮುಂದೆ ಅದೇ ಕ್ರೌರ್ಯವನ್ನು ಫಾಲೋ ಮಾಡುತ್ತಾರೆ. 
 

क्या दुनिया में माँ ऐसी भी होती हैं?
रूह कंपा देने वाली वीडियो 😡😡

90 KG की महिला अपने छोटे 25 KG बेटे के ऊपर बैठकर उसे मुक्कों, दांतों सर पटकना गाला दबाना !!
एक मासूम छोटा बच्चा वहीं पर खड़ा देख रहा!
अगर ये सच है तो इसको जल्द गिरफ्तार करे !! pic.twitter.com/NCZzsihfCw

— MANOJ SHARMA LUCKNOW UP🇮🇳🇮🇳🇮🇳 (@ManojSh28986262)

 

click me!