ಹಲ್ಲು ಮುರಿದ ಹಾವಿನಂತಿದ್ದ ISDಗೆ ಜೀವ ಬಂದಿದ್ದು ಹೇಗೆ..?

By Suvarna News  |  First Published Sep 22, 2020, 12:49 PM IST

ಇದೀಗ ಡ್ರಗ್ ಕೇಸ್‌ಗಳಿಗೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತವಾಗಿರುವ ಐಎಸ್‌ಡಿಗೆ ಜೀವ ಕೊಟ್ಟಿದ್ದು ಐಪಿಎಸ್ ಭಾಸ್ಕರ್‌ ರಾವ್.


ಬೆಂಗಳೂರು (ಸೆ.22): ಬೆಂಗಳೂರು ಕಮಿಷನರ್ ಆಗಿದ್ದ ಭಾಸ್ಕರ್ ರಾವ್ ಅವರೇ ಯಾವುದೇ ಪ್ರಕರಣ ದಾಖಲಾಗದೇ ಖಾಲಿಯಾಗಿ ಉಳಿದಿದ್ದ ಐಎಸ್‌ಡಿ(Internal security division) ಗೆ ಜೀವ ಕೊಟ್ಟರು. 

ರಾಜ್ಯ ಸರ್ಕಾರ 2008ರಲ್ಲಿ ಐಎಸ್‌ಡಿ ಸ್ಥಾಪಿಸಿದ್ದು, ಇದರಲ್ಲಿ 6 ವಿಂಗ್‌ಗಳಂತೆ ರಚನೆ ಮಾಡಲಾಗಿತ್ತು. ಆದರೆ ಇದರಲ್ಲಿ ಒಂದೇ ಒಂದು ದೂರು ಸಹ ದಾಖಲಾಗಿರಲಿಲ್ಲ. 

Tap to resize

Latest Videos

ಸಿಸಿಬಿ ನಗರಕ್ಕಷ್ಟೇ ಸೀಮಿತವಾಗಿತ್ತು.ಸಿಸಿಬಿಯ ನಾರ್ಕೋಟಿಕ್ ವಿಂಗ್ ನಗರಕ್ಕೆ ಸೀಮಿತವಾಗಿ ಕೆಲಸ ನಿರ್ವಹಿಸುತಿತ್ತು. ಆದರೆ ರಾಜ್ಯದಲ್ಲಿ ಡ್ರಗ್ ಪ್ರಕರಣಗಳ ಬಗ್ಗೆ ಎಲ್ಲಿ ದೂರು ದಾಖಲು ಮಾಡಬೇಕು ಎನ್ನುವ ಅರಿವಿರಲಿಲ್ಲ.

ಮಾಜಿ ಸಂಸದರ ಪುತ್ರನಿಗೆ ISD ಯಿಂದ ಬುಲಾವ್..! ...

ಆದರೆ ಐಎಸ್‌ಡಿ ಎಡಿಜಿಪಿಯಾಗಿ ಭಾಸ್ಕರ್ ರಾವ್ ಅವರು ಮೊದಲ ಕೇಸ್ ದಾಖಲು ಮಾಡಿದರು. ಕಳೆದ ಆಗಸ್ಟ್ 5 ರಂದು ಭಾಸ್ಕರ್ ರಾವ್ ಎಫ್‌ಐಆರ್ ದಾಖಲು ಮಾಡಿದರು.

2013ರಲ್ಲಿಯೇ ಐಎಸ್‌ಡಿ ಪೊಲೀಸ್‌ ಸ್ಟೇಷನ್ ಆದರೂ ಒಂದೇ ಒಂದು ಎಫ್‌ಐ ಆರ್ ದಾಖಲಾಗಿರಲಿಲ್ಲ. ಇದೀಗ  ಐಎಸ್‌ಡಿ ಇತಿಹಾಸದಲ್ಲೇ 5 ಎಫ್‌ಐಆರ್ ದಾಖಲು ಮಾಡಿಸಿದ್ದಾರೆ.  

click me!