ಗಾಂಜಾ ಮತ್ತಲ್ಲಿ ಬೆಂಗಳೂರು 'ಬುಲೆಟ್ ಬಸ್ಯರು' ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ!

By Suvarna News  |  First Published Aug 30, 2020, 10:53 PM IST

ವೀಲಿಂಗ್ ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಕಾನ್ಸ್ಟೇಬಲ್ ಗೆ ಥಳಿತ/ ಮೂವರು ಯುವಕರಿಂದ ಕಾನ್ಸ್ಟೇಬಲ್ ಮೇಲೆ ಹಲ್ಲೆ ವಿಜಯನಗರ ಮುಖ್ಯ ರಸ್ತೆಯ ಮಾರುತಿ ಮಂದಿರ ಬಳಿ ಘಟನೆ/ ಅಡ್ಡಾದಿಡ್ಡಿ ಬೈಕ್ ನಲ್ಲಿ‌ ಸಂಚರಿಸುತ್ತಿದ್ದ ಯುವಕರು/ ಯುವಕರನ್ನ ಪ್ರಶ್ನಿಸಿದ್ದ ವಿಜಯನಗರ ಸಂಚಾರ ಠಾಣೆ ಕಾನ್ಸ್ಟೇಬಲ್ ವಿದ್ಯಾಧರ್


ಬೆಂಗಳೂರು(ಆ.  30)  ಸ್ಯಾಂಡಲ್ ವುಡ್ ಗೆ ನಶೆ ದೊಡ್ಡ ಚರ್ಚೆ ನಡೆಯುತ್ತಿರುವಾಗಲೇ ಬೆಂಗಳೂರು ಪೊಲೀಸರಿಗೆ  'ಬುಲೆಟ್' ಮಹಾಶಯರು ಸಿಕ್ಕಿಬಿದ್ದಿದ್ದಾರೆ.

ವೀಲಿಂಗ್ ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಕಾನ್ಸ್ಟೇಬಲ್  ಮೇಲೆ ಹಲ್ಲೆಗೆ ಮುಂದಾಗಿದ್ದವರು ಆತಿಥ್ಯ ಪಡೆದುಕೊಳ್ಳುತ್ತಿದ್ದಾರೆ. ವಿಜಯನಗರ ಮುಖ್ಯ ರಸ್ತೆಯ ಮಾರುತಿ ಮಂದಿರ ಬಳಿ ಘಟನೆ ನಡೆದಿದೆ.  ಅಡ್ಡಾದಿಡ್ಡಿ ಬೈಕ್ ನಲ್ಲಿ‌ ಸಂಚರಿಸುತ್ತಿದ್ದ ಯುವಕರನ್ನು ವಿಜಯನಗರ ಸಂಚಾರ ಠಾಣೆ ಕಾನ್ಸ್ಟೇಬಲ್ ವಿದ್ಯಾಧರ್ ಪ್ರಶ್ನೆ ಮಾಡಿದ್ದಾರೆ.

Tap to resize

Latest Videos

ಇಂದ್ರಜಿತ್ ಆರೋಪಕ್ಕೆ ಮೇಘನಾ ಕೊಟ್ಟ ರಿಯಾಕ್ಷನ್

ಈ ವೇಳೆ ಪೊಲೀಸ್ ಅಧಿಕಾರಿಗೆ ಥಳಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಸ್ಥಳಿಯರ ನೆರವಿನಿಂದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಗಾಂಜಾ ನಶೆ: ಹೆಲ್ಮೆಟ್ ಇಲ್ಲದೆ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುತ್ತಿದ್ದ ಪುಂಡರು ಗಾಂಜಾ ನಶೆಯಲ್ಲಿದ್ದರು ಎಂಬುದು ಶಾಕಿಂಗ್ ಸಂಗತಿ . ಅಪ್ರಾಪ್ತ ಬಾಲಕ‌ ಸೇರಿ‌ ಮೂವರು ಪೊಲೀಸರ ವಶಕ್ಕೆ ಪಡೆಯಲಾಗಿದೆ. ಅಮರ್ ಖುರೇಷಿ, ಸೈಯದ್ ಸಾಧಿಕ್ ಅಹಮದ್, ಹಾಗೂ ಮತ್ತೋರ್ವ ಅಪ್ರಾಪ್ತ ಬಾಲಕನ ಬಂಧಿಸಲಾಗಿದ್ದು ಬಂಧಿತರ ಪೈಕಿ‌ ಓರ್ವನ ಜೇಬಿನಲ್ಲಿ ಗಾಂಜಾ ಪ್ಯಾಕೆಟ್ ಸಹ ಪತ್ತೆಯಾಗಿದೆ. 

click me!