ರೇಷ್ಮಾ ಆಂಟಿಗೆ ಪತಿಯಿಂದ ಹಲ್ಲೆ? ಅಪ್ಪನಿಗೂ ಚೂರಿಯಿಂದ ಇರಿತ: ವಿಡಿಯೋ ವೈರಲ್​

Published : Apr 26, 2025, 02:58 PM ISTUpdated : Apr 26, 2025, 03:59 PM IST
ರೇಷ್ಮಾ ಆಂಟಿಗೆ ಪತಿಯಿಂದ ಹಲ್ಲೆ? ಅಪ್ಪನಿಗೂ ಚೂರಿಯಿಂದ ಇರಿತ: ವಿಡಿಯೋ ವೈರಲ್​

ಸಾರಾಂಶ

ರೀಲ್ಸ್‌ ತಾರೆ ರೇಷ್ಮಾ ಆಂಟಿ ಪತಿಯ ಮೇಲೆ ಹಲ್ಲೆ ಆರೋಪ ಮಾಡಿದ್ದಾರೆ. ಕಣ್ಣಿಗೆ ಗಾಯ, ತಂದೆಗೆ ಚೂರಿ ಇರಿಯಲು ಯತ್ನಿಸಿದರು ಎಂದು ವಿಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂದೆ ಇಲ್ಲ ಎಂದರೂ ರೇಷ್ಮಾ ಬೈಯುತ್ತಿರುವುದು ವೈರಲ್ ಆಗಿದೆ. ಇದು ನಿಜವೋ, ತಮಾಷೆಯೋ ಸ್ಪಷ್ಟವಿಲ್ಲ. ರೇಷ್ಮಾ ಇತ್ತೀಚೆಗೆ ನವೀನ್ ಜೊತೆ ಮಾದಕ ರೀಲ್ಸ್ ಮಾಡಿದ್ದರು.

ಸೋಷಿಯಲ್​ ಮೀಡಿಯಾ, ಅದರಲ್ಲಿಯೂ ರೀಲ್ಸ್​ ಎನ್ನುವುದು ಇದೀಗ ಅಶ್ಲೀಲ, ಅಸಭ್ಯತೆಯನ್ನು ಪ್ರದರ್ಶಿಸುವ ದೊಡ್ಡ ತಾಣವಾಗಿ ಬಿಟ್ಟಿದೆ. ಒಳ್ಳೆಯ ವಿಷಯಗಳೇ ಸಿಗುವುದಿಲ್ಲ, ಯಾರೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ವಿಷಯಗಳನ್ನು ಪ್ರಸಾರ ಮಾಡುವುದೇ ಇಲ್ಲ ಎನ್ನುವ ದೊಡ್ಡ ವರ್ಗವೂ ಕೂಡ ಅಂಥ ವಿಷಯಗಳ ಬಗ್ಗೆ ಬರುವ ವಿಡಿಯೋ, ರೀಲ್ಸ್​ಗಳನ್ನು ಕಣ್ಣೆತ್ತಿಯೂ ನೋಡಲ್ಲ ಎನ್ನುವುದಕ್ಕೆ ಅದಕ್ಕೆ ಬರುವ ಲೈಕ್ಸ್​,, ವ್ಯೂವ್ಸ್​, ಕಮೆಂಟ್ಸ್​ಗಳೇ ಸಾಕ್ಷಿಯಾಗಿವೆ. ಆದರೆ ಅಸಭ್ಯ, ಅಶ್ಲೀಲ ಎನ್ನುವಂಥ ರೀಲ್ಸ್​ಗಳು ಹಾಕಿದ್ದೇ ತಡ ಒಂದೇ ನಿಮಿಷದಲ್ಲಿ ಸಹಸ್ರಾರು ಲೈಕ್ಸ್​ ಬಂದ್ರೂ ಬಂದವೇ. ಕೆಟ್ಟ ಕೆಟ್ಟ ಪದಗಳಿಂದ ಕಮೆಂಟ್​ ಮಾಡುವ ಮೂಲಕ ಇಂಥ ರೀಲ್ಸ್​ಗಳನ್ನು ಬಾಯಿ ಚಪ್ಪರಿಸಿಕೊಂಡು ನೋಡುವ ದೊಡ್ಡ ವರ್ಗವೇ ಇದೆ ಎನ್ನುವುದು ಇಂಥ ಕಮೆಂಟ್​, ಶೇರ್​, ಲೈಕ್ಸ್​ಗಳಿಂದಲೇ ತಿಳಿದು ಬರುತ್ತವೆ. 

ಇರಲಿ ಬಿಡಿ, ಈಗ ವಿಷಯಕ್ಕೆ ಬರುವುದಾದರೆ, ರೀಲ್ಸ್ ಮಾಡುತ್ತಾ ಫೇಮಸ್ ಆಗಿರುವ, ಗಿಚ್ಚಿ ಗಿಲಿಗಿಲಿ ವೇದಿಕೆಗೂ ಬಂದಿರುವ ರೇಷ್ಮಾ ಆಂಟಿ  ಈಗ ಒಂದಷ್ಟು ಮಂದಿಗೆ ಸೋಷಿಯಲ್ ಮೀಡಿಯಾ ಸ್ಟಾರ್​ ಆಗಿದ್ದಾರೆ. ತೆಳ್ಳಗೆ, ದೇಹವನ್ನು ಬಳ್ಳಿಯಂತೆ ಬಳುಕಿಸಿದವರ ವಿಡಿಯೋ, ರೀಲ್ಸ್ ವೈರಲ್ ಆಗುತ್ತವೆ ಅನ್ನೋ ಮಾತನ್ನು ರೇಷ್ಮಾ ಸುಳ್ಳು ಮಾಡಿದ್ದಾರೆ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ರೇಷ್ಮಾ ಹೇಳುವ ಹಾಯ್ ಫ್ರೆಂಡ್ಸ್ ವೀಕ್ಷಕರಿಗೆ ಇಷ್ವವಾಗುತ್ತಿದೆ.   ಇವರು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿಭಿನ್ನ ಶೈಲಿಯಿಂದ ಜನಪ್ರಿಯತೆ ಪಡೆದುಕೊಂಡಿದ್ದಾರೆ.  ನವೀನ್ ಎಂಬುವವರ ಜೊತೆ ಜೋಡಿ  ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ವೀಕ್ಷಕರಿಂದ ರೇಷ್ಮಾ ಆಂಟಿ ಅಂತಾನೇ ಕರೆಸಿಕೊಳ್ಳುವ ಇವರು, ಇನ್‌ಸ್ಟಾಗ್ರಾಂನಲ್ಲಿ 1.87 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ.  

ರೊಮಾನ್ಸ್​ ದೃಶ್ಯದಲ್ಲಿ ನಿಯಂತ್ರಣ ಕಳಕೊಂಡು ಮಾಧುರಿಗೆ ಮಾಡಬಾರದ್ದು ಮಾಡಿದ್ದ ವಿನೋದ್​ ಖನ್ನಾ!

ಇಂತಿಪ್ಪ ರೇಷ್ಮಾ ಆಂಟಿ, ಇದೀಗ ಶಾಕಿಂಗ್​ ವಿಡಿಯೋ ಒಂದನ್ನು ಶೇರ್​ ಮಾಡಿದ್ದಾರೆ. ಇದರಲ್ಲಿ ಇವರು ತಮ್ಮ ಪತಿ ಮತ್ತು ಮಗ ಸೇರಿಕೊಂಡು ನನ್ನ ಮತ್ತು ಅಪ್ಪನ ಮೇಲೆ ಹಲ್ಲೆ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲಿಯೇ ಇರುವ ಪತಿಯನ್ನು ತೋರಿಸಿ, ಇವರು ಒಳ್ಳೆಯವರು ಎಂದು ನೀವು ಹೇಳುತ್ತೀರಲ್ಲವೆ, ನೋಡಿ ನನ್ನ ಕಣ್ಣುಗಳಿಗೆ ಗಾಯಮಾಡಿದ್ದಾರೆ. ನನ್ನ ಅಪ್ಪನಿಗೆ ಚೂರಿ ಹಾಕಲು ಬಂದಿದ್ದರು, ಅವರಿಗೆ ರಕ್ತ ಸುರಿಯುತ್ತಿದೆ ಎಂದು ಹೇಳಿದ್ದಾರೆ. ಅಲ್ಲಿಯೇ ಇದ್ದ ಅಪ್ಪ, ಇಲ್ಲ ಇಲ್ಲ ಎನ್ನುವುದನ್ನು ಕೂಡ ಕೇಳಬಹುದು. ಆದರೂ ರೇಷ್ಮಾ ಆಂಟಿ ಆಕ್ರೋಶಭರಿತವಾಗಿ ತಮ್ಮ ಪತಿಯನ್ನು ತೋರಿಸುತ್ತಾ ಬೈಗುಳಗಳ ಸುರಿಮಳೆಗೈದಿದ್ದಾರೆ. ಅದರ ವಿಡಿಯೋ ಈಗ ವೈರಲ್​ ಆಗಿದೆ.

ಇದು ತಮಾಷೆಗಾಗಿ ಮಾಡಿದ್ದೋ, ನಿಜವಾಗಿಯೋ ಸದ್ಯ ತಿಳಿದಿಲ್ಲ. ಆದರೆ ಗಂಡ ಕೂಡ ಸಿಟ್ಟಿನಿಂದ ಇರುವುದನ್ನು ನೋಡಬಹುದು. ಆದರೆ ಅಪ್ಪ ಮಾತ್ರ ಇಲ್ಲ ಇಲ್ಲ ಎನ್ನುತ್ತಿರುವುದನ್ನು ನೋಡಿದರೆ ಸತ್ಯ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ! ಅಷ್ಟಕ್ಕೂ ಈಚೆಗೆ,  ರೇಷ್ಮಾ ಆಂಟಿ ಮತ್ತು ನವೀನ್ ರೀಲ್ಸ್ ನೀರಿನಲ್ಲಿ ಪ್ರೀತಿಯ ಕಿಚ್ಚು ಹಚ್ಚಿದ್ದರು. ಎಂದಿಗಿಂತ ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡಿರುವ ರೇಷ್ಮಾ ಮತ್ತು ನವೀನ್, ಕನ್ನಡದ ಮಲ್ಲ ಸಿನಿಮಾದಲ್ಲಿನ 'ಯಮ್ಮೋ ಯಮ್ಮೋ' ಹಾಡಿಗೆ ಮಾದಕವಾಗಿ ರೀಲ್ಸ್ ಮಾಡಿದ್ದರು.   

Vaishnavi Gowda: ನಿಶ್ಚಿತಾರ್ಥದ ಬೆನ್ನಲ್ಲೇ ವೈಷ್ಣವಿ ಗೌಡ ಬಾಲಿವುಡ್​ಗೆ ಎಂಟ್ರಿ? ಹೃದಯ ಜಾರಿ ಜಾರಿ ಹೋಗ್ತಿದೆ ಎಂದ ನಟಿ...
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ