ಅಂತರ್ಜಾತಿ ವಿವಾಹ ಆಗಿದ್ದ ಯುವತಿ ನೇಣಿಗೆ ಶರಣು: ಕುಟುಂಬಸ್ಥರಿಂದ ಭಾರೀ ಕಿರುಕುಳ

By Sathish Kumar KH  |  First Published Feb 27, 2023, 5:05 PM IST

ಅಂತರ್ಜಾತಿ ಮದುವೆ ಆಗಿದ್ದ ಯುವತಿ ನೇಣಿಗೆ ಶರಣು
ಪ್ರೀತಿಸಿ ಮದುವೆ ಆಗಿ ಮೂರು ವರ್ಷದಲ್ಲೇ ಸಾವು
ಮದುವೆಯಾದರೂ ನಿಲ್ಲದ ಕುಟುಂಬ ಸದಸ್ಯರ ಕಿರುಕುಳ


ತುಮಕೂರು (ಫೆ.27): ಕಳೆದ ಮೂರು ವರ್ಷಗಳ ಹಿಂದೆ ತುಮಕೂರು ಮೂಲದ ಯುವಕ ಅಭಿರಾಮ್ ಎಂಬಾತನನ್ನ ಪ್ರೀತಿಸಿ ವಿವಾಹವಾಗಿದ್ದ ಮೋನಿಕಾ ಕುಟುಂಬ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತುಮಕೂರು ನಗರದ ಹನುಮಂತಪುರದಲ್ಲಿ ನಡೆದಿದೆ.

ಜೀವನದಲ್ಲಿ ಪ್ರೀತಿ ಮಾಡುವುದು ಸರ್ವೇ ಸಾಮಾನ್ಯವಾದ ವಿಚಾರವಾಗಿದೆ. ಇನ್ನು ಮುಂದುವರೆದು ಪ್ರೀತಿ ಮಾಡಿದವರನ್ನೇ ಮನೆಯವರನ್ನು ಒಪ್ಪಿಸಿ ಮದುವೆ ಆಗುವುದು ಅದೃಷ್ಟ ಎಂದು ಹೇಳುತ್ತಾರೆ. ಆದರೆ, ಮದುವೆ ಸಂದರ್ಭದಲ್ಲಿ ಇಬ್ಬರ ಮನೆಯವರ ವಿರೋಧ ವ್ಯಕ್ತವಾದರೆ ಅವರ ಜೀವನ ಗೋಳು ಎನ್ನುವುದು ಈ ಪ್ರಕರಣದಲ್ಲಿಯೂ ಸಾಬೀತಾಗಿದೆ. ಇನ್ನು ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸುಂದರ ಜೋಡಿಯೊಂದು ಕುಟುಂಬಸ್ಥರ ವಿರೋಧದ ನಡುವೆಯೂ ಬೇರೆಡೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿತ್ತು. ಆದರೆ, ಅಲ್ಲಿಯೂ ಕಿರುಕುಳ ನೀಡಲಾರಂಭಿಸಿದ್ದರಿಂದ ಮನನೊಂದು ಮದುವೆಯಾಗಿದ್ದ ಯುವತಿ ಸಾವಿಗೆ ಶರಣಾಗಿದ್ದಾಳೆ.

Tap to resize

Latest Videos

Bengaluru Crime: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ: ಪೊಲೀಸ್‌ ಠಾಣೆ ಶವವಿಟ್ಟು ಪ್ರತಿಭಟನೆ

ಅಂತರ್ಜಾತಿ ವಿವಾಹಕ್ಕೆ ಮನೆಯವರ ವಿರೋಧ: ಮೊನಿಕಾ (21) ಕೌಟಂಭಿಕ‌ ಕಲಹಕ್ಕೆ ಮನನೊಂದು, ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತುಮಕೂರು ನಗರದ ಹನುಮಂತಪುರ 4 ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ. ಗುಬ್ಬಿ ತಾಲೂಕಿನ ಮದನಘಟ್ಟ ಗ್ರಾಮದ ನಿವಾಸಿಯಾಗಿದ್ದ ಮೊನಿಕಾ, ಕಳೆದ ಮೂರು ವರ್ಷಗಳ ಹಿಂದೆ ತುಮಕೂರು ಮೂಲದ ಯುವಕ ಅಭಿರಾಮ್ ಎಂಬಾತನನ್ನ ಪ್ರೀತಿಸಿದ್ದಳು. ಇನ್ನು ಪ್ರೀತಿಸಿದ ಜೋಡಿ ಅಂತರ್ಜಾತಿ ಆಗಿದ್ದರಿಂದ ಮನೆಯವರ ವಿರೋಧ ವ್ಯಕ್ತವಾಗಿತ್ತು. ಅದನ್ನು ಲೆಕ್ಕಿಸದೇ ಬೇರೆಡೆ ಹೋಗಿ ಮದುವೆ ಮಾಡಿಕೊಂಡು ಜೀವನ ಮಾಡುತ್ತಿದ್ದರು.

ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಇನ್ನು ತುಮಕೂರು ನಗರದಲ್ಲಿ ಗಂಡ ಅಭಿರಾಮ್‌ ಜೊತೆಗೆ ಹನುಮಂತಪುರದ 4ನೇ ಕ್ರಾಸ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇನ್ನು ಗಂಡ ಕೆಲಸ ಮಾಡುತ್ತಾ ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂಬ ಬಯಕೆಯಿಂದ ಹೆಂಡತಿ ಮೋನಿಕಾಳನ್ನು ಕಾಲೇಜಿಗೆ ಕಳುಹಿಸಿ ಓದಿಸುತ್ತಿದ್ದನು. ತುಮಕೂರಿನ ಖಾಸಗಿ ಕಾಲೇಜಿನಲ್ಲಿ ಮೋನಿಕಾ ಬಿಸಿಎ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದರೆ, ನಿನ್ನೆ ತಡರಾತ್ರಿ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಅಪ್ಪಿ, ತಪ್ಪಿಯೂ ನಿಮ್ಮ ಸಂಗಾತಿ ಜೊತೆ ಇಂಥಾ ತಮಾಷೆ ಮಾತುಗಳನ್ನಾಡಬೇಡಿ…

ಗಂಡನ ವಿರುದ್ಧ ಮೋನಿಕಾ ಪೋಷಕರ ಆರೋಪ:  ಮೋನಿಕಾಳ ಗಂಡ ಅಭಿರಾಮ್‌ ನೀಡುತ್ತಿದ್ದ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮೊನಿಕಾ ಪೋಷಕರು ಆರೋಪ ಮಾಡಿದ್ದಾರೆ. ಸ್ಥಳಕ್ಕೆ ತುಮಕೂರು ನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೊನಿಕಾ ಗಂಡ ಅಭಿರಾಮ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಕುರಿತು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಈ ಘಟನೆ ಕುರಿತಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ತುಮಕೂರು : ತಾಯಿಯೊಬ್ಬರು ಮಗಳಿಗೆ ಗಂಡನೆ ಮನೆಗೆ ಹೋಗು ಎಂದು ಹೇಳಿದ್ದಕ್ಕೆ ಮನನೊಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನ ಉಪ್ಪಾರ ಬೀದಿ (Uppar Street)ಯಲ್ಲಿ ನಡೆದಿತ್ತು. ಅಮ್ಮನ ಬುದ್ಧಿವಾದದ (wisdom)ಮಾತನ್ನು ಕೇಳದೇ ಐಶ್ವರ್ಯ  (20) ಆತ್ಮಹತ್ಯೆ ಮಾಡಿಕೊಂಡಿದ್ದಳು. ಐಶ್ವರ್ಯಳನ್ನು ಕುಣಿಗಲ್  ತಾಲೂಕಿನ ಅಮೃತೂರಿನ (Amruthur) ಅನಿಲ್‌ಕುಮಾರ್‌ನೊಂದಿಗೆ ಕೆಲ ವರ್ಷಗಳ ಹಿಂದೆ ಮದುವೆಯಾಗಿತ್ತು. 2021 ರಲ್ಲಿ ಐಶ್ವರ್ಯ ಗರ್ಭಿಣಿಯಾಗಿದ್ದಳು. ಈ ವೇಳೆ ಅವಳ ಮೈದುನ ಹಾಗೂ ನಾದಿನಿಗೆ ಕೊರೊನಾ  (Covid-19) ಸೊಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಪತಿ ಅನಿಲ್‌ಕುಮಾರ್ ಪತ್ನಿ ಐಶ್ವರ್ಯಯಳನ್ನು ಕುಣಿಗಲ್ ನ ಉಪ್ಪಾರಬೀದಿಯಲ್ಲಿರುವ ತವರು ಮನೆಗೆ  ಬಿಟ್ಟು ಹೋಗಿದ್ದರು.

click me!