ಪೋರ್ನ್‌ಗೆ ದಾಸನಾಗಿದ್ದ ಪತಿ ಮಾಡ್ತಿದ್ದ ಪಾಪದ ಕೆಲಸ.. ಪತ್ನಿಯ ಗೋಳು!

By Suvarna News  |  First Published Oct 17, 2021, 8:06 PM IST

* ಅಶ್ಲೀಲ ಚಿತ್ರಗಳ ಪ್ರಭಾವಕ್ಕೆ ಒಳಗಾಗಿದ್ದ ಪಾಪಿ ಗಂಡ
* ಅಸಹಜ ಲೈಂಗಿಕ ಕ್ರಿಯೆಗೆ  ಪತ್ನಿಯನ್ನು ಒತ್ತಾಯಿಸುತ್ತಿದ್ದ
* ರಾಜಿ ಮಾಡಿ ಕುಟುಂಬಸ್ಥರಿಗೆ ಸಾಕಾಗಿತ್ತು
* ಅಂತಿಮವಾಗಿ ದೂರು ದಾಖಲಿಸಿದ ಮಹಿಳೆ


ಅಹ ಮದಾಬಾದ್ (ಅ. 17)  ಕೇಂದ್ರ ಸರ್ಕಾರ (Union Govt) ಅನೇಕ ಪೋರ್ನ್(Porn) ಸೈಟ್ ಗಳನ್ನು ಬ್ಯಾನ್ ಮಾಡಿದ್ದರೂ ಅದರಿಂದ ಆಗುತ್ತಿರುವ ಹಾನಿ ಏನು ಕಡಿಮೆ ಆಗಿಲ್ಲ.  45 ವರ್ಷದ ಮಹಿಳೆ (wife) ತನ್ನ 48 ವರ್ಷದ ಗಂಡನ (Husbunad) ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಪೋರ್ನ್ ಸಿನಿಮಾಗಳಿಂದ ಪ್ರಭಾವಿತನಾಗಿ ಅಸಹಜ ಲೈಂಗಿಕ ಕ್ರಿಯೆಗೆ ( unnatural sex )ಒತ್ತಾಯಿಸಿದ್ದಾನೆ. ಮತ್ತು ದೌರ್ಜನ್ಯ ಎಸಗಿದ್ದಾನೆ ಎಂದು ದೂರು ನೀಡಿದ್ದಾಳೆ.  ಅಹಮದಾಬಾದ್ ನ ನವರಂಗಪುರ ನಿವಾಸಿ ಮಹಿಳೆ  ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಪತಿ(IT) ಐಟಿ ಕಂಪನಿ ನಡೆಸುತ್ತಿದ್ದಾರೆ.  ಪೊಲೀಸರಿಗೆ ನೀಡಿದ ದೂರಿನಲ್ಲಿ, ಮದುವೆಯಾದ(Marriage) ತಕ್ಷಣ, ತನ್ನ ಪತಿ ಕ್ಷುಲ್ಲಕ ವಿಚಾರಗಳಿಗಾಗಿ ತನ್ನ ಮೇಲೆ ಹಲ್ಲೆ ಮಾಡಲು ಆರಂಭಿಸಿದ. ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕತೆಯಲ್ಲಿ ತೊಡಗುವಂತೆ ಒತ್ತಾಯಿಸಿದನು. ಒಪ್ಪದಿದ್ದಾಗ ಹಲ್ಲೆ ಮಾಡುತ್ತಲೇ ಇದ್ದನು ಎಂದು ಹೇಳಿದ್ದಾಳೆ.

#Feelfree: ನಾನು ಪೋರ್ನ್ ಫಿಲಂ ಗಂಡಸಿನಂತಿಲ್ಲ, ಸೆಕ್ಸ್ ಎಂಜಾಯ್ ಮಾಡೋಕ್ಕಾಗುತ್ತಾ?

Tap to resize

Latest Videos

undefined

ಕೆಲ ತಿಂಗಳುಗಳ ನಂತರ ಒತ್ತಾಯಪೂರ್ವಕವಾಗಿ ನನ್ನನ್ನು ತವರು ಮನೆಗೆ ಕಳಿಸಿದ್ದಾನೆ. ಅಶ್ಲೀಲ ಚಲನಚಿತ್ರಗಳನ್ನು ನೋಡಿಕೊಂಡು ಇಂಥ ಕೆಲಸ ಮಾಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ.

ಸಣ್ಣಪುಟ್ಟ ವಿಷಯಗಳಿಗೂ ಮನಬಂದಂತೆ ಥಳಿಸುತ್ತಿದ್ದ. ಮಹಿಳೆಯ ಕುಟುಂಬದ ಸದಸ್ಯರು ಮತ್ತು ಗೆಳೆಯರು ಆಕೆ ಮತ್ತು ಆಕೆಯ ಪತಿ ಬೇರ್ಪಟ್ಟಾಗಲೆಲ್ಲಾ ರಾಜಿ ಮಾಡಿಸುವ ಯತ್ನ ಮಾಡುತ್ತಿದ್ದರು.  ಪತಿಯ  ವರ್ತನೆ ಇಷ್ಟು ವರ್ಷ ತಡೆದುಕೊಂಡ ಮಹಿಳೆ ಅಅಂತಿಮವಾಗಿ ದೂರು ನೀಡಿದ್ದಾರೆ ತನ್ನ ಪತಿ ಬಿಸಿನಸ್ ಮ್ಯಾನ್ ಆಗಿರುವುದರಿಂದ ಪ್ರಭಾವ ಬಬಳಸಬಹುದು ಎಂಬ ಆತಂಕವೂ ಆಕೆಗೆ ಇತ್ತು ಎಂದು ಪೊಲೀಸರೇ ಹೇಳಿದ್ದಾರೆ.

ಮಹಿಳೆಯ ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಅಸಹಜ ಲೈಂಗಿಕತೆ) ಮತ್ತು ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಲೈಂಗಿಕ ಕ್ರಿಯೆ ಬಳಿಕ ಯೋನಿಯಲ್ಲಿ ವೀರ್ಯವು ಎಷ್ಟು ಕಾಲವಿರುತ್ತೆ?

ಉತ್ತರ ಪ್ರದೇಶ ಗ್ಯಾಂಗ್ ರೇಪ್: ಉತ್ತರ  ಪ್ರದೇಶದಲ್ಲಿ ಮೂವರು ಯುವಕರು 17 ವರ್ಷದ ಹುಡುಗಿಯನ್ನು ಗನ್ ಪಾಯಿಂಟ್ ನಲ್ಲಿ ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮುಜಾಫರ್  ನಗರ ಜಿಲ್ಲೆಯ ಹಳ್ಳಿಯಿಂದ ಘಟನೆ ವರದಿಯಾಗಿದೆ.  ಹುಡುಗಿಯ ತಂದೆಯ ದೂರಿನ ಮೇರೆಗೆ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಸ ಒಗೆಯಲು ತೆರಳುತ್ತಿದ್ದ ಯುವತಿಯನ್ನು 17 ಮತ್ತು 16 ವರ್ಷ ವಯಸ್ಸಿನ ಇಬ್ಬರು ಸಹೋದರರು ಮೂವರು  ಕಾಮುಕರು ಅಡ್ಡ ಹಾಕಿದ್ದಾರೆ. ಬಂದೂಕು ತೋರಿಸಿ ಅಪಹರಿಸಿಕೊಂಡು ಹೋಗಿ ಅರಣ್ಯ ಪ್ರದೇಶದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

 

click me!