
ರಾಯ್ ಬರೇಲಿ(ಅ. 17) ಇದೊಂದು ಘೋರ ಘಟನೆ. ಅಂಗಡಿಯೊಂದರ ಸ್ನಾಕ್ಸ್ (consumed puffed rice and 'namkeen') ತಿಂದ ಮೂವರು ಸಹೋದರಿಯರು ಮೃತಪಟ್ಟಿದ್ದಾರೆ. 7, 8 ಮತ್ತು 5 ವರ್ಷದ ಸಹೋದರಿಯರು ನಮ್ ಕೀನ್ (ಮಿಕ್ಷ್ಚರ್) ತಿಂದು ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದ(Uttar Pradesh) ರಾಯ್ ಬರೇಲಿ ಜಿಲ್ಲೆಯ ಮಿರ್ಜಾ ಇನಾಯತುಲ್ಲಾಪುರ ಪಟ್ಟಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಅಂಗಡಿಯವನು ಕೊಟ್ಟ ಪ್ಯಾಕೇಟ್ ನಲ್ಲಿದ್ದ ಮಿಕ್ಷರ್ ತಿಂದ ನಂತರ ಮೂವರು ಬಾಲಕಿಯರು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅದಾಗಲೇ ಒಬ್ಬಳು ಬಾಲಕಿ ಮೃತಪಟ್ಟಿದ್ದಳು. ಇಬ್ಬರು ಬಾಲಕಿಯರಿಗೆ ಹೆಚ್ಚಿನ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ.
ಬೇರೆ ಉಪಾಯ ಇಲ್ಲ..ಜಂಕ್ ಫುಡ್ ಗೆ ಬೈ ಹೇಳಲೇಬೇಕು
ಪೊಲೀಸ್ (Police) ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಬಾಲಕಿಯರು ಸೇವಿಸಿದ ಆಹಾರದ ಸ್ಯಾಂಪಲ್ ಪಡೆದುಕೊಂಡಿದ್ದಾರೆ. ಅಂಗಡಿ ಮಾಲೀಕ ಸೇರಿ ಆತನ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆಯಲಾಗಿದೆ. ಬಾಲಕಿಯರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಜಂಕ್ ಫುಡ್ (Junk food) ಮತ್ತುಇ ಈ ರೀತಿಯ ಕುರ್ ಕುರೆ ತಿಂಡಿ ಪದಾರ್ಥಗಳು ವಿಷವಾಗಿ ಪರಿಣಮಿಸಿದ ಅನೇಕ ಉದಾಹರಣೆಗಳು ಇವೆ. ಖರೀದಿ ಮಾಡುವ ಮುನ್ನ ಏಕ್ಸ್ ಪಾಯಿರಿ ಡೇಟ್ ನೊಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಕೆಲವೊಂದು ತಿಂಡಿ ಪದಾರ್ಥಗಳ ಬಗ್ಗೆ ಆಗಾಗ್ಗೆ ದೂರುಗಳು ಕೇಳಿ ಬರುತ್ತಲೇ ಇರುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ