ಬಾಲಕನ ಮೇಲೆ ಪೊಲೀಸಪ್ಪನ ದರ್ಪ, ಥಳಿಸಿದ್ದಕ್ಕೆ ಈಗ ಶುರುವಾಗಿದೆ ನಡುಕ!

By Suvarna NewsFirst Published Aug 25, 2020, 5:45 PM IST
Highlights

ಮಧ್ಯ ದಾರಿಯಲ್ಲಿ ಬಾಲಕನ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸ್/ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದ ಆಧಾರದಲ್ಲಿ ತನಿಖೆ/ ದೆಹಲಿ ಪೊಲೀಸ್ ಅಧಿಕಾರಿಯ ಕೃತ್ಯ

ನವದೆಹಲಿ (ಆ. 25) ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬರು ಮಧ್ಯ ರಸ್ತೆಯಲ್ಲೇ ಬಾಲಕನೊಬ್ಬನನ್ನು ಹಿಗ್ಗಾ ಮುಗ್ಗಾ ಥಳಿಸುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ಪೊಲೀಸ್ ಅಧಿಕಾರಿಯ ಮೇಲೆ ತನಿಖೆಗೆ ದೆಹಲಿ ಪೊಲೀಸ್ ಈಗ ಮುಂದಾಗಿದೆ.

ನೈರುತ್ಯ ದೆಹಲಿಯ ಆರ್‌ಕೆ ಪುರಂ ಪ್ರದೇಶದಲ್ಲಿ ಘಟನೆ ನಡೆದಿತ್ತು. ನೈರುತ್ಯ ವಿಭಾಗದ ಹೆಚ್ಚುವರಿ ಡಿಸಿಪಿ ಇಂಗಿತ್ ಸಿಂಗ್, ಘಟನೆ ನಮ್ಮ ಗಮನಕ್ಕೆ ಬಂದ ನಂತರ ಡಿಪಾರ್ಟ್ ಮೆಂಟಲ್ ತನಿಖೆಗೆ ಆದೇಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ನೂರು ರೂ. ಲಂಚ ಕೊಡದ ಬಾಲಕನ ಮೊಟ್ಟೆ ಗಾಡಿ ಪುಡಿ ಪುಡಿ

ಆಗಸ್ಟ್ 22   ರಂದು ಈ ಘಟನೆ ನಡೆದಿದೆ.  ಹುಡುಗರ ಗುಂಪೋದು ಮಧ್ಯರಾತ್ರಿ ರಸ್ತೆ ಮಧ್ಯೆ ಮಲಗಿತ್ತು. ಡ್ಯೂಟಿಯಲ್ಲಿದ್ದ ಕಾನ್ಸ್ಟೇಬಲ್ ಹುಡುಗರಿಗೆ ಮನೆಗೆ ಹೋಗುವಂತೆ ಹೇಳಿದ್ದಾರೆ. ಅರ್ಧ ಗಂಟೆ ನಂತರ ಮತ್ತೆ ಅದೆ ಜಾಗಕ್ಕೆ ಹೋದಾಗ ಹುಡುಗರು ರಸ್ತೆ ಮಧ್ಯೆಯೇ ಇದ್ದರು. ಕೋಪಗೊಂಡ ಅಧಿಕಾರಿ ಹುಡುಗನನ್ನು ಥಳಿಸಿದ್ದಾರೆ.

ಆದರೆ ಇದು ಹಳೆ ವಿಡಿಯೋ ಎಂದು ಆರ್ ಕೆ ಪುರ ಪೊಲೀಸರು ಹೇಳುವ ಯತ್ನ ಮಾಡಿದ್ದಾರೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ತನಿಖೆ ವರೆಗೆ ತಂದು ನಿಲ್ಲಿಸಿದೆ. 

 

: A policeman seen assaulting a young boy, in a video that surfaced from RK Puram. The boy was allegedly wandering on the streets late at night in search of food. He is seen pleading . pic.twitter.com/RqCEPE8tpP

— Mojo Story (@themojo_in)
click me!