ಪಿತ್ರಾರ್ಜಿತ ಆಸ್ತಿಗಾಗಿ ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು ಅಟ್ಟಾಡಿಸಿ ಹಲ್ಲೆ!

By Gowthami KFirst Published May 24, 2023, 6:47 PM IST
Highlights

ಪಿತ್ರಾರ್ಜಿತ ಆಸ್ತಿಗಾಗಿ ಸಹೋದರ ಕುಟುಂಬಸ್ಥರ ನಡುವೆ  ಗಲಾಟೆ ನಡೆದು, ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಹಾಸನ (ಮೇ.24): ಪಿತ್ರಾರ್ಜಿತ ಆಸ್ತಿಗಾಗಿ ಸಹೋದರ ಕುಟುಂಬಸ್ಥರ ನಡುವೆ ಮಾರಾಮಾರಿ ನಡೆದಿರುವ ಘಟನೆ ಹಾಸನ ಜಿಲ್ಲೆ ಬೇಲೂರು, ತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಡೆದಿದೆ. ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಗ್ರಾಮದ ಮಲ್ಲೇಶಗೌಡ, ಶಶಿಕುಮಾರ್, ಗೌರೀಶ್ ಹಾಗೂ ಮಲ್ಲೇಶಗೌಡರ ಸೊಸೆ ತೀರ್ಥ ಎಂಬುವವರಿಗೆ ಗಾಯವಾಗಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

ಮಚ್ಚು ಹಿಡಿದು ನಾಲ್ವರನ್ನು ಅಟ್ಟಾಡಿಸಿ ಹಲ್ಲೆ ಮಾಡಿರುವ ದೃಶ್ಯ ಗ್ರಾಮಸ್ಥರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮಲ್ಲೇಶ್‌ಗೌಡ ಎಂಬುವವರಿಗೆ ತಮ್ಮ ತಾಯಿಯಿಂದ ಬಂದಿದ್ದ ಸರ್ವೆ 211/1 ರಲ್ಲಿ 14 ಗುಂಟೆ ಪಿತ್ರಾರ್ಜಿತ ಆಸ್ತಿ ಇದ್ದು, ಸುಮಾರು ಮೂವತ್ತು ವರ್ಷಗಳಿಂದ  ಮಲ್ಲೇಶ್‌ಗೌಡ ಕುಟುಂಬ ಉಳುಮೆ ಮಾಡುತ್ತಿದೆ. ಮಳೆ ಬಿದ್ದಿದ್ದ ಕಾರಣ ತಮ್ಮ ಮಕ್ಕಳಾದ ಶಶಿಕುಮಾರ್, ಗೌರೀಶ್ ಹಾಗೂ ಸೊಸೆ ತೀರ್ಥ ಜೊತೆ ಮಲ್ಲೇಶ್‌ಗೌಡ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು.

Bus Accident: ರಾಮದುರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ, 7 ಜನ ಆಸ್ಪತ್ರೆಗೆ ದಾಖಲು

ಈ ವೇಳೆ ಸ್ಥಳಕ್ಕೆ ಬಂದ ಮಲ್ಲೇಶ್‌ಗೌಡನ ಸಹೋದರನ ಮಕ್ಕಳಾದ ಮಧುಕುಮಾರ್, ಚಂದ್ರೇಗೌಡ, ಕುಮಾರ್, ಜವರೇಗೌಡ, ರುದ್ರೇಶ್ ಹಾಗೂ ಲೊಕೇಶ್ ಈ ಜಾಗ ನಮಗೆ ಸೇರಿದ್ದು ಎಂದು ಹೇಳಿ ಏಕಾಏಕಿ ಅವಾಚ್ಯ ಪದಗಳಿಂದ ನಿಂದಿಸಿ ಅಟ್ಟಾಡಿಸಿ ಮಚ್ಚಿನಿಂದ ಹಲ್ಲೆ  ಮಾಡಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಮಧುಕುಮಾರ್, ಚಂದ್ರೇಗೌಡ, ಕುಮಾರ್, ಗೌರೇಗೌಡ, ಲೊಕೇಶ್, ರುದ್ರೇಶ್ ಎಂಬುವವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಂಗಳೂರು: ಭಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ದಾಳಿ!


ಶಿಕ್ಷಕನಿಂದ ಪತ್ನಿಯ ಕೊಲೆ
ಚಿಕ್ಕಬಳ್ಳಾಪುರ/ಗೌರಿಬಿದನೂರು: ಶಿಕ್ಷಕನೊಬ್ಬ ಪತ್ನಿಯ ಮೇಲಿನ ದ್ವೇಷದ ಹಿನ್ನೆಲೆಯಲ್ಲಿ ಮನೆಯಲ್ಲಿ ಮಕ್ಕಳು ಇಲ್ಲದ ಸಮಯದಲ್ಲಿ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆನಡೆಸಿ ಪತಿಯೇ ಕೊಲೆ ಮಾಡಿರುವ ಘಟನೆ ಗೌರಿಬಿದನೂರು ನಗರದ ಗಂಗಾನಗರದಲ್ಲಿ ನಡೆದಿದೆ. ಮೃತಳನ್ನು ಲಕ್ಷ್ಮೀದೇವಿ(40) ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆಯೇ ಪತಿ ಕೃಷ್ಣಪ್ಪ ತನ್ನ ಪತ್ನಿ ಲಕ್ಷ್ಮೀದೇವಿಯ ಜೊತೆ ಜಗಳವಾಡಿ ಕೊಲೆ ಮಾಡಿ ಆಕೆಯ ಶವವನ್ನು ಮನೆಯಲ್ಲಿಯೇ ಇರಿಸಿ ಬೀಗ ಹಾಕಿ ಪರಾರಿಯಾಗಿದ್ದಾನೆ. ಶವ ಕೊಳೆತು ವಾಸನೆ ಬರುತ್ತಿದ್ದುದ್ದನ್ನು ಸೋಮವಾರ ಗಮನಿಸಿದ ಅಕ್ಕಪಕ್ಕದ ಮನೆಯವರು ಪೋಲಿಸರಿಗೆ ತಿಳಿಸಿದ್ದಾರೆ. ಮೃತಳ ಮಗಳು ಲಿಖಿತ ಎಂಬುವರನ್ನು ಕರೆಸಿ ಬೀಗ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತಳ ಮಗಳು ಲಿಖಿತ ನೀಡಿದ ದೂರಿನನ್ವಯ ಗೌರಿಬಿದನೂರು ನಗರ ಠಾಣೆ ಪೋಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮೊದಲ ಮಗಳು ಲಿಖಿತಳಿಗೆ ಮದುವೆ ಸಹಾ ಮಾಡಿದ್ದರು. ಎರಡನೇ ಮಗಳು ಇನ್ನು ವಿಧ್ಯಾಬ್ಯಾಸ ಮಾಡುತ್ತಿದ್ದಾಳೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ್‌ ಭೇಟಿ ನೀಡಿದ್ದರು.

click me!