
ಉಳ್ಳಾಲ (ಮೇ.20): ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಕಟ್ಟಿದ ನ್ಯೂಪಡ್ಪು ಶಾಲೆಯ ಕಾಂಪೌಂಡ್ ಗೋಡೆ ಕುಸಿದು ವಿದ್ಯಾರ್ಥಿನಿ ದಾರುಣವಾಗಿ ಸಾವನಪ್ಪಿದದ ಘಟನೆ ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ನ್ಯೂಪಡ್ಪು ಶಾಲೆಯಲ್ಲಿ ನಡೆದಿದೆ. ನ್ಯೂಪಡ್ಪು ನಿವಾಸಿ ಸಿದ್ದೀಖ್ ಜಮೀಲಾ ಪುತ್ರಿ ಶಾಜಿಯಾ (7) ಮೃತ ಬಾಲಕಿ. ಹಾಜಬ್ಬರ ಶಾಲೆಯಲ್ಲಿ 3 ನೇ ತರಗತಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಶಾಜಿಯಾ ಶಾಲೆಯಲ್ಲಿ ನಡೆಯುತ್ತಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗಿಯಾಗಿದ್ದರು. ಗೇಟಿನಲ್ಲಿ ಆಟವಾಡುತ್ತಿರುವ ಸಂದರ್ಭ ಕಾಂಪೌಂಡ್ ಬಾಲಕಿ ಮೇಲೆ ಕುಸಿದು ಬಿದ್ದಿದೆ. ಮೊದಲ ಮಳೆಗೆ ಈ ದುರ್ಘಟನೆ ಸಂಭವಿಸಿದೆ.
ಆಟೋ ಬೈಕ್‌ಗೆ ಡಿಕ್ಕಿಯಾಗಿ ಪ್ರಯಾಣಿಕ ಸಾವು: ಮದ್ಯಪಾನ ಮಾಡಿ ಪ್ಲೈ ಓವರ್ ಮೇಲೆ ವಿರುದ್ಧ ಧಿಕ್ಕಿನಲ್ಲಿ ಆಟೋ ಚಾಲನೆ ಮಾಡುತ್ತಿದ್ದಾಗ ಬೈಕ್‌ಗೆ ಡಿಕ್ಕಿಯಾಗಿ ಆಟೋದಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ರೂಪೇನ ಅಗ್ರಹಾರ - ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಶುಕ್ರವಾರ ರಾತ್ರಿ ನಡೆದಿದೆ. ಅಪಘಾತ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಆಟೋ ಪ್ರಯಾಣಿಕ ದಸ್ತಗೀರ (70) ಮೃತಪಟ್ಟವರು. ಘಟನೆಯಲ್ಲಿ ಬೈಕ್ ಸವಾರರಾದ ಮಂಜು ಮತ್ತು ತ್ಯಾಗರಾಜ್ ಅವರು ಗಾಯಗೊಂಡಿದ್ದಾರೆ.
ರೂಪೇನ ಅಗ್ರಹಾರ ಬಳಿ ಟೋಲ್ ಸೇತುವೆ ಏರಿದ ಆಟೋ ಚಾಲಕ ಶಾಹೀದ್ ಸುಮಾರು ಒಂದು ಕಿಲೋ ಮೀಟರ್ ದೂರ ಬಂದಾಗ ಟೋಲ್ ಶುಲ್ಕ ಪಾವತಿ ಮಾಡಬೇಕೆಂದು ಯೋಚಿಸಿ ಬಂದ ದಾರಿಯಲ್ಲೇ ವಾಪಸ್ ಹೊರಟಿದ್ದಾನೆ. ಕುಡಿದ ಅಮಲಿನಲ್ಲಿದ್ದ ಚಾಲಕ ಅತಿ ವೇಗವಾಗಿ ಚಲಿಸುತ್ತಾ ಬಂದು ಸಂಚಾರ ನಿಯಮ ಪಾಲಿಸದೇ ಎದುರಿಗೆ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಆಟೋ ಹಿಂಬದಿ ಕುಳಿತಿದ್ದ ವ್ಯಕ್ತಿ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಇತ್ತ ದ್ವಿಚಕ್ರ ವಾಹನ ಸವಾರ ಮಂಜುನಾಥ್ ಮತ್ತು ಇನ್ನೊಬ್ಬರಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇರಳದಲ್ಲಿ ವೆಸ್ಟ್‌ನೈಲ್ ಜ್ವರ ಹೆಚ್ಚಳ: ಚಾಮರಾಜನಗರ ಚೆಕ್ ಪೋಸ್ಟ್‌ನಲ್ಲಿ ಹೈ ಅಲರ್ಟ್!
ಸಂಪೂರ್ಣ ಪಾನಮತ್ತನಾಗಿ ಬೇಜವಾಬ್ದಾರಿಯಿಂದ ಆಟೋ ಚಲಾಯಿಸಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.ಅಪಘಾತದಿಂದ ಫ್ಲೈಓವರ್‌ನಲ್ಲಿ ತಾಸುಗಟ್ಟಲೇ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಿಇಟಿಎಲ್ ಅಧಿಕಾರಿಗಳು ಜಾಗೃತೆವಹಿಸಿದ್ದರೆ ಈ ಅವಘಡ ತಪ್ಪಿಸಬಹುದಿತ್ತು ಎಂದು ಘಂಟೆಗಟ್ಟಲೆ ನಿಂತಿದ್ದ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು. ಫ್ಲೈ ಓವರ್ ಮೇಲೆ ಆಗಾಗ ಅಪಘಾತಗಳು ನಡೆಯುತ್ತಿದ್ದು, ಆ್ಯಂಬುಲೆನ್ಸ್‌ಗಳ ಸಂಖ್ಯೆ ಹೆಚ್ಚಿಸುವುದಕ್ಕಿಂತ ಗಸ್ತು ಹೆಚ್ಚಿಸಿ ಅಪಘಾತ ತಡೆಯಬೇಕೆಂದು ಜನತೆ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ