ದೇಶದ ಗಡಿ ಕಾಯೋ ಸೈನಿಕನ ಪತ್ನಿ ಮನೆಯಲ್ಲಿ ಸಹೋದರ ಮತ್ತು ನಾದಿನಿ ಕಿರುಕುಳ ನೀಡುತ್ತಿದ್ದಾರೆಂದು ಮನನೊಂದು ಮಗಳೊಂದಿಗೆ ನೇಣಿಗೆ ಶರಣಾಗಿದ್ದಾಳೆ.
ಬೆಳಗಾವಿ (ಜು.10): ದೇಶದ ಗಡಿಯಲ್ಲಿ ಶತ್ರು ದೇಶಗಳ ಸೈನಿಕರು ಒಳನುಸುಳದಂತೆ ರಕ್ಷಣೆ ನೀಡುವಾಗ ಪ್ರಾಣ ತ್ಯಾಗ ಮಾಡಿದ ಯೋಧನ ಪತ್ನಿಗೆ ಮನೆಯಲ್ಲಿಯೇ ರಕ್ಷಣೆ ಸಿಗಲಿಲ್ಲ. ಮನೆಯಲ್ಲಿ ನೆಮ್ಮದಿಯಾಗಿ ಜೀವನ ಮಾಡಲಿಕ್ಕೆ ಸಹೋದರ ಮತ್ತು ನಾದಿನಿ ಬಿಡಲಿಲ್ಲವೆಂದು ಹೆತ್ತ ಮಗಳೊಂದಿಗೆ ಒಂದೇ ಹಗ್ಗದಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಒಂದೇ ಹಗ್ಗಕ್ಕೆ ಪುತ್ರಿಯ ಜೊತೆಗೆ ನೇಣುಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮಹಾದೇವಿ ಇಂಚಲ (34) ಯೋಧನ ಪತ್ನಿ ಹಾಗೂ ಚಾಂದನಿ ಇಂಚಲ (7) ಯೋಧನ ಮಗಳು ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿಗಳು ಆಗಿದ್ದಾರೆ. ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ಯೋಧನ ಜೊತೆಗೆ ಮಹಾದೇವಿ ವಿವಾಹವಾಗಿದ್ದಳು. ಆದರೆ, ಮದುವೆಯಾಗಿ ಎರಡು ವರ್ಷಕ್ಕೆ ಗಂಡ ಸೈನಿಕನಾಗಿ ಸೇವೆ ಸಲ್ಲಿಸುವಾಗಲೇ ಪ್ರಾಣತ್ಯಾಗ ಮಾಡಿದ್ದಾರೆ.
ರಾಹುಲ್ ಗಾಂಧಿಯಿಂದ ಮತ್ತೊಂದು ಭಾರತ್ ಜೋಡೋ ಯಾತ್ರೆ: ಈಸ್ಟ್ ಟು ವೆಸ್ಟ್ ಶೀಘ್ರ ಆರಂಭ
ಪ್ರತ್ಯೇಕವಾಗಿ ಜೀವನ ಮಾಡಲು ಬಿಡದೇ ಕಿರುಕುಳ: ಇನ್ನು ಪತಿಯನ್ನು ಕಳೆದುಕೊಂಡ ನಂತರ ದಿಂಡಲಕೊಪ್ಪದಲ್ಲಿರುವ ತವರು ಮನೆಯಲ್ಲಿ ಪುತ್ರಿಯೊಂದಿಗೆ ಮಹಿಳೆ ವಾಸವಾಗಿದ್ದಳು. ಗಂಡ ಮೃತಪಟ್ಟು 7 ವರ್ಷಗಳಾದರೂ ಮನೆಯನ್ನು ಬಿಟ್ಟು ಬೇರೆಡೆ ಹೋಗಿ ಜೀವನ ಮಾಡಲು ಬಿಡದೇ ಯೋಧನ ಪತ್ನಿಗೆ ತವರು ಮನೆಯವರು ನಿರ್ಬಂಧ ವಿಧಿಸಿದ್ದಾರೆ. ಮನೆಯಲ್ಲಿ ಸಹೋದರ ಹಾಗೂ ನಾದಿನಿಯ ಕಿರುಕುಳಕ್ಕೆ ಬೇಸತ್ತು ಸೋಮವಾರ ಮಧ್ಯಾಹ್ನದ ವೇಳೆ ಪುತ್ರಿಯ ಜೊತೆಗೆ ಮಹಾದೇವಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಬೆಳಗಾವಿಯ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಮಗಳಿಗೆ ಉತ್ತಮ ಭವಿಷ್ಯ ಕೊಡಲಾಗಿಲ್ಲವೆಂಬ ಕೊರಗು: ಯೋಧನ ಪತ್ನಿ ಮಹಾದೇವಿ ಅವರು ಗಂಡ ತೀರಿಕೊಂಡ ನಂತರ ಪ್ರತ್ಯೇಕವಾಗಿ ದುಡಿದು ವಾಸ ಮಾಡುತ್ತೇನೆ. ಮಗಳನ್ನು ಚೆನ್ನಾಗಿ ಓದಿಸಿ ನೌಕರಿ ಕೊಡಿಸುತ್ತೇನೆ ಎಂದು ಎಷ್ಟು ಬೇಡಿಕೊಂಡರೂ ಪ್ರತ್ಯೇಕವಾಗಿ ವಾಸ ಮಾಡಲು ಸ್ವತಃ ಸಹೋದರ ಮತ್ತು ಗಂಡನ ತಂಗಿ ನಾದಿನಿ ವಿರೋಧ ಮಾಡಿದ್ದಾರೆ. ಇದರಿಂದ ನೆಮ್ಮದಿಯಾಗಿ ಜೀವನ ಮಾಡಲು ಬಿಡದೇ, ಮಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಡಲು ಇವರು ಅಡ್ಡಿಯಾಗುತ್ತಿದ್ದಾರೆ ಎಂದು ಭಾವಿಸಿ, ಮೆನಯವರ ಕಿರುಕುಳಕ್ಕೆ ಬೇಸತ್ತು ಮಗಳೊಂದಿಗೆ ನೇಣು ಬಿಗಿದುಕೊಂಡಿದ್ದಾಳೆ. ಪತಿ ಯೋಧನಾಗಿ ದೇಶಕ್ಕಾಗಿ ಪ್ರಾಣ ಬಿಟ್ಟರೆ, ಆತನ ಪತ್ನಿ- ಮಗಳಿಗೆ ಮನೆಯಲ್ಲಿಯೇ ರಕ್ಷಣೆ ಸಿಗದೇ ಸಾವನ್ನಪ್ಪಿದ್ದಾಳೆ.
ಮದ್ಯ ಸೇವನೆ ಬೇಡವೆಂದರೂ ಮಾತು ಕೇಳದ ಮಗನನ್ನು ಹೊಡೆದು ಕೊಂದ ತಂದೆ: ವಿಜಯಪುರ (ಜು.10): ಪ್ರತಿನಿತ್ಯ ಮದ್ಯ ಸೇವನೆ ಮಾಡಿ ಮನೆ ಮಂದಿಗೆಲ್ಲಾ ಕಿರುಕುಳ ನೀಡುತ್ತಿದ್ದ ಮಗನಿಗೆ ನೀನು ಎಣ್ಣೆ ಹೊಡಿಬೇಡ ಎಂದು ಬುದ್ಧಿವಾದ ಹೇಳಿದರೂ ಕೇಳದ ಹಿನ್ನೆಲೆಯಲ್ಲಿ ತಂದೆಯನ್ನೇ ಹೊಡೆದು ಕೊಲೆ ಮಾಡಿರುವ ದುರ್ಘಟನೆ ನಡದಿದೆ. ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದಲ್ಲಿ ಘಟನೆನಡೆದಿದೆ.
ಎಣ್ಣೆ ಹೊಡಿಬೇಡವೆಂದರೂ ಮಾತು ಕೇಳದ ಮಗನನ್ನು ಹೊಡೆದು ಕೊಂದ ತಂದೆ
ಮೃತ ದುರ್ದೈವಿಯನ್ನು ಮುತ್ತಪ್ಪ ಮಸಳಿ (38) ಹತ್ಯೆಯಾಗಿರುವ ದುರ್ದೈವಿ ಆಗಿದ್ದಾನೆ. ಕೊಲೆ ಮಾಡಿದ ಆರೋಪಿಯನ್ನು ಯುವಕನ ತಂದೆ ಬಸಪ್ಪ ಮಸಳಿ ಎಂದು ಗುರುತಿಸಲಾಗಿದೆ. ಹೊಲಕ್ಕೆ ಹೋಗಿ ಕೆಲಸ ಮಾಡೋಣೆ ಎಂದು ಕರೆದುಕೊಂಡು ಹೋಗಿ, ಹೊಲದಲ್ಲಿ ನೀರುಣಿಸಲು ಇಟ್ಟಿದ್ದ ಸಲಿಕೆಯಿಂದ ತಲೆಗೆ ಹೊಡೆದಿದ್ದಾರೆ. ಇದಾದ ನಂತರ, ಮಗನ ಕಿವಿ ಹಾಗೂ ಬಾಯಿಯಲ್ಲಿ ರಕ್ತಸ್ರಾವ ಉಂಟಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.