ಹನುಮ ಜಯಂತಿ ಮೆರವಣಿಗೆಯಲ್ಲಿ ಪುನೀತ್ ರಾಜ್ ಕುಮಾರ್ ಪೋಟೊ ತೆಗೆಸಿದ್ದೆ ಮೈಸೂರಿನಲ್ಲಿ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಮೈಸೂರು (ಜು.10): ಹನುಮ ಜಯಂತಿ ಮೆರವಣಿಗೆಯಲ್ಲಿ ಪುನೀತ್ ರಾಜ್ ಕುಮಾರ್ ಪೋಟೊ ತೆಗೆಸಿದ್ದೆ ಮೈಸೂರಿನಲ್ಲಿ ಯುವಬ್ರಿಗೇಡ್ ಕಾರ್ಯಕರ್ತವೇಣುಗೋಪಾಲ್ ನಾಯಕ್ (32) ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ಜುಲೈ 8 ರಂದು ಟಿ.ನರಸೀಪುರದಲ್ಲಿ ನಡೆದಿದ್ದ ಹನುಮ ಜಯಂತಿ. ಈ ವೇಳೆ ವ್ಯಾನ್ ನಲ್ಲಿ ಭಾರತ ಮಾತೇ ಪೋಟೊ ಮುಂದೆ ಪುನೀತ್ ರಾಜ್ ಕುಮಾರ್ ಪೋಟೋ ಹಾಕಿದ್ದರು. ಈ ವೇಳೆ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ರು. ಈ ವಿಚಾರವಾಗಿ ಇಲ್ಲಿ ಯಾವ ವ್ಯಕ್ತಿಯ ಪೋಟೋ ಹಾಕೋದು ಬೇಡ ಎಂದು ಕೊಲೆಯಾದ ವೇಣುಗೋಪಾಲ್ ತೆಗೆಸಿದ್ದ ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ಅವರ ಗುಂಪಿನಲ್ಲೆ ಗಲಾಟೆಯಾಗಿತ್ತು. ನಂತರ ಭಾನುವಾರ ಮಧ್ಯಾಹ್ನ ಕೂಡ ಜಗಳವಾಗಿತ್ತು. ಬಳಿಕ ರಾತ್ರಿ ರಾಜಿ ಪಂಚಾಯಿತಿ ನೆಪದಲ್ಲಿ ಕರೆಸಿಕೊಂಡು ವೇಣುಗೋಪಾಲ್ ನನ್ನು ಕೊಲೆ ಮಾಡಲಾಗಿದೆ ಎಂದು ಮೃತನ ಪತ್ನಿ ಪೂರ್ಣಿಮ ಹೇಳಿದ್ದಾರೆ.
ಹನುಮಜಯಂತಿ ವೇಳೆ ಪುನೀತ್ ರಾಜ್ ಕುಮಾರ್ ಪ್ಲೆಕ್ ಹಾಕಲಾಗಿತ್ತಂತೆ. ಈ ವೇಳೆ ವೇಣುಗೋಪಾಲ್ ನಾವು ಮಾಡ್ತಾ ಇರೋದು ಹನುಮ ಜಯಂತಿ ದೇವರ ಕಾರ್ಯದಲ್ಲಿ ಪುನೀತ್ ಅವರ ಪ್ಲೆಕ್ಸ್ ಬೇಡ ಅಂತಾ ಹೇಳಿ ಭಾವಚಿತ್ರ ತೆರವು ಮಾಡಿದ್ದಾನೆ. ಈ ವೇಳೆ ಹಲವರು ವಿರೋಧ ವ್ಯಕ್ತಪಡಿಸಿ ಗುಂಪು ಗಲಾಟೆಯಾಗಿದೆ. ಇದಷ್ಟೇ ಅಲ್ಲದೆ ಬೈಕ್ ನಿಲ್ಲಿಸೋ ವಿಚಾರದಲ್ಲಿ ಮಣಿಕಂಠ ಹಾಗೂ ವೇಣುಗೋಪಾಲ್ ನಡುವೆ ಕಿರಿಕ್ ಆಗಿದೆ ಎಂದು ಹೇಳಲಾಗಿದೆ. ಈ ವಿಚಾರವನ್ನು ಮಾತುಕತೆ ಮಾಡಿ ಸರಿ ಮಾಡಿಕೊಳ್ಳೋಣ ಎಂದು ಕರೆದು ವೇಣುಗೋಪಾಲ್ ಗೆ ಮಣಿಕಂಠ, ಸಂದೇಶ್, ಅನಿಲ್, ಹ್ಯಾರಿಸ್, ಶಂಕರ್, ಸುನಿಲ್, ಮಂಜು ಸೇರಿದಂತೆ ಆರು ಮಂದಿ ತಂಡ ಹಿಂಬದಿಯಿಂದ ತಲೆಗೆ ಬಾಟಲಿಯಿಂದ ಹೊಡೆದು ಡ್ರ್ಯಾಗನ್ ನಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಅನ್ನೋ ಆರೋಪ ಇದೆ.
ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ: ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ
ಬೈಕ್ ನಿಲ್ಲಿಸುವ ವಿಚಾರಕ್ಕೆ ಹಾಗೂ ಪುನೀತ್ ರಾಜ್ ಕುಮಾರ್ ಫೋಟೊ ಅಳವಡಿಕೆ ವಿಚಾರದಲ್ಲಿ ಜಗಳ ನಡೆದು ಕೊಲೆಯಾಗಿದೆ. ಉಳಿದ ಆರೋಪಿಗಳ ಸೆರೆಗೆ ತಂಡ ರಚಿಸಲಾಗಿದೆ. ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿ ಕೈವಾಡ ಇಲ್ಲ. ಘಟನಾ ಸ್ಥಳದಲ್ಲಿ ಹ್ಯಾರಿಸ್ ಸರ್ವಿಸ್ ಸೆಂಟರ್ ಇತ್ತು. ಸಹಜವಾಗಿ ಘಟನೆ ನಡೆದಾಗ ಆತನು ಕೂಡ ಸ್ಥಳದಲ್ಲಿದ್ದ. ಘಟನೆಗೆ ಯಾವುದೇ ಕೋಮು ಸಂಬಂಧ ಇಲ್ಲ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೀಮಾ ಲಾಟ್ಕರ್ ಹೇಳಿಕೆ ನೀಡಿದ್ದಾರೆ.
ಟಿ.ನರಸೀಪುರದಲ್ಲಿ ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ ಸಂಬಂರ್ಧ ಅಂಗಡಿ ಮುಂಗಟ್ಟು ಬಂದ್ ಮಾಡಿ ಸ್ವಯಂ ಪ್ರೇರಿತರಾಗಿ ಬಂದ್ ಗೆ ಕರೆ ನೀಡಿದ್ದಾರೆ. ಹಿಂದೂ ಪರ ಸಂಘಟನೆಗಳ ಕರೆ ಮೇರೆಗೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ. ಸದ್ಯ ಟಿ.ನರಸೀಪುರ ಪಟ್ಟಣದಲ್ಲಿ ಪ್ರಕ್ಷುದ್ಧ ವಾತಾವರಣ ಇದ್ದು, ಅಹಿತಕರ ಘಟನೆ ಜರುಗದಂತೆ ಪೋಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮೃತ ವ್ಯಕ್ತಿ ವೇಣುಗೋಪಾಲ್ ಮನೆ ಮುಂಭಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನಂಜನಗೂಡು ದೇವನೂರು ಮಠದ ಸ್ವಾಮೀಜಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ
ತಿ.ನರಸೀಪುರದಲ್ಲಿ ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ. ಕೊಲೆಯ ಪ್ರಮುಖ ಮೂರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಇನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿ ಮೃತ ಸದಸ್ಯ ವೇಣುಗೋಪಾಲ್ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.