ಕುಡಿದು ಟೈಟಾಗಿದ್ದ ಮಹಿಳೆಯನ್ನು ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರವೆಸಗಿದ ಭಾರತೀಯ ಮೂಲದ ವಿದ್ಯಾರ್ಥಿ

Published : Jun 18, 2023, 05:19 PM IST
ಕುಡಿದು ಟೈಟಾಗಿದ್ದ ಮಹಿಳೆಯನ್ನು ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರವೆಸಗಿದ ಭಾರತೀಯ ಮೂಲದ ವಿದ್ಯಾರ್ಥಿ

ಸಾರಾಂಶ

20ರ ಹರೆಯದ ಪ್ರೀತ್ ವಿಕಲ್ ಎಂಬಾತ ಕಳೆದ ವರ್ಷ ಜೂನ್‌ನಲ್ಲಿ ಅಮಲೇರಿದ ಮಹಿಳೆಯನ್ನು ಯುಕೆಯ ಕಾರ್ಡಿಫ್‌ನಲ್ಲಿರುವ ತನ್ನ ಫ್ಲಾಟ್‌ಗೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದ ಎಂದು ತಿಳಿದುಬಂದಿದೆ.

ಹೊಸದಿಲ್ಲಿ (ಜೂನ್ 18, 2023): ಯುಕೆಯಲ್ಲಿ ಭಾರತೀಯ ವಿದ್ಯಾರ್ಥಿಯ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದೆ. ಕಳೆದ ವರ್ಷ ಕ್ಲಬ್‌ನಲ್ಲಿ ಭೇಟಿಯಾದ ಕುಡಿದು ಟೈಟಾಗಿದ್ದ ಮತ್ತು ಅರೆಪ್ರಜ್ಞವಾಗಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಯುಕೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

20ರ ಹರೆಯದ ಪ್ರೀತ್ ವಿಕಲ್ ಎಂಬಾತ ಕಳೆದ ವರ್ಷ ಜೂನ್‌ನಲ್ಲಿ ಅಮಲೇರಿದ ಮಹಿಳೆಯನ್ನು ಯುಕೆಯ ಕಾರ್ಡಿಫ್‌ನಲ್ಲಿರುವ ತನ್ನ ಫ್ಲಾಟ್‌ಗೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದ ಎಂದು ತಿಳಿದುಬಂದಿದೆ. ಪ್ರೀತ್ ಮತ್ತು ಸಂತ್ರಸ್ತ ಮಹಿಳೆ ಪ್ರತ್ಯೇಕ ಸ್ನೇಹಿತರ ಗುಂಪುಗಳೊಂದಿಗೆ ಕಾರ್ಡಿಫ್‌ನಲ್ಲಿ ರಾತ್ರಿಯ ವಿಹಾರಕ್ಕೆ ಹೋಗಿದ್ದು, ಅಲ್ಲಿ ಅವರು ಪರಸ್ಪರ ಭೇಟಿಯಾದರು.

ಇದನ್ನು ಓದಿ: ಅಪ್ರಾಪ್ತ ಬಾಲಕಿ ರೇಪ್‌ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಾಕಿದ ಗಾಯಕನ ಬಂಧನ

"ಸಂತ್ರಸ್ತ ಮಹಿಳೆ ಮಿತಿಮೀರಿ ಕುಡಿದಿದ್ದರು ಮತ್ತು ರಾತ್ರಿಯ ಅಂತ್ಯದ ವೇಳೆಗೆ ತೀವ್ರವಾಗಿ ಅಮಲೇರಿದ್ದರು. ಕ್ಲಬ್‌ನ ಹೊರಗೆ ಹೆಜ್ಜೆ ಇಟ್ಟಾಗ ಪ್ರೀತ್ ವಿಕಲ್‌ನನ್ನು ಭೇಟಿಯಾದರು. ಇಬ್ಬರೂ ಸಂಭಾಷಣೆಯಲ್ಲಿ ತೊಡಗಿದ್ದರು ಮತ್ತು ಅವರ ಗುಂಪುಗಳಿಂದ ದೂರ ಸರಿದರು" ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ, ಆರೋಪಿ ಪ್ರೀತ್ ವಿಕಲ್ ಮಹಿಳೆಯನ್ನು ತನ್ನ ತೋಳುಗಳಲ್ಲಿ ಮತ್ತು ನಂತರ ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. 20 ವರ್ಷದ ಯುವಕ ಮಹಿಳೆಯನ್ನು ಕಾರ್ಡಿಫ್ ರಸ್ತೆಗಳ ಮೂಲಕ ತನ್ನ ಫ್ಲಾಟ್‌ಗೆ ಕರೆದೊಯ್ಯುತ್ತಿರುವುದನ್ನು ಕಾಣಬಹುದು. ಅವರು ಪಬ್ ಅನ್ನು ಹಾದುಹೋದಾಗ, ಮಹಿಳೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿತು ಆದರೆ ಪ್ರೀತ್ ವಿಕಲ್ ಮೇಲೆ ಹೆಚ್ಚು ವಾಲಿದ್ದರು ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಹಲವು ಬಾರಿ ಗ್ಯಾಂಗ್‌ ರೇಪ್‌: ಕೃತ್ಯ ಸೆರೆ ಹಿಡಿದು ಕಾಮುಕರ ಬ್ಲ್ಯಾಕ್‌ಮೇಲ್‌

"#ಕಾರ್ಡಿಫ್‌ನಲ್ಲಿರುವ ನಿವಾಸದ ಸಭಾಂಗಣದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಒಬ್ಬ ವ್ಯಕ್ತಿಯನ್ನು ಜೈಲಿಗೆ ಹಾಕಲಾಗಿದೆ. ಪ್ರೀತ್ ವಿಕಲ್ ಸಂತ್ರಸ್ತೆಯನ್ನು ತನ್ನ ತೋಳುಗಳಲ್ಲಿ ಮತ್ತು ನಂತರ ತನ್ನ ಭುಜದ ಮೂಲಕ ಸಿಟಿ ಸೆಂಟರ್‌ನಿಂದ ಹೊರಕ್ಕೆ ಸಾಗಿಸುತ್ತಿರುವುದನ್ನು ಸಿಸಿಟಿವಿ ತೋರಿಸಿದೆ" ಎಂದು ಸೌತ್ ವೇಲ್ಸ್ ಪೊಲೀಸ್ ಕಾರ್ಡಿಫ್ ಟ್ವೀಟ್ ಮಾಡಿದೆ.

ಹಾಗೂ, "ಕಾರ್ಡಿಫ್‌ನಲ್ಲಿ ಇಂತಹ ಅಪರಿಚಿತರ ದಾಳಿಗಳು ಅತ್ಯಂತ ಅಸಾಮಾನ್ಯವಾಗಿವೆ.  ಆದರೆ ಪ್ರೀತ್ ವಿಕಾಲ್‌ ಅಪಾಯಕಾರಿ ವ್ಯಕ್ತಿಯಾಗಿದ್ದು, ಅವನು ಸ್ನೇಹಿತರಿಂದ ಬೇರ್ಪಟ್ಟ ಅಮಲೇರಿದ್ದ ಮತ್ತು ದುರ್ಬಲ ಯುವತಿಯ ಲಾಭವನ್ನು ಪಡೆದ" ಎಂದೂ ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಮಹಿಳೆಯನ್ನು ಮನೆಗೆ ಕರೆದೊಯ್ದ ನಂತರ ಪ್ರೀತ್ ವಿಕಲ್‌ ಆಕೆಯ ಫೋಟೋ ತೆಗೆದುಕೊಂಡು ತನ್ನ ಸ್ನೇಹಿತರಿಗೆ ಕಳುಹಿಸಿದ್ದಾನೆ ಎಂದೂ ವರದಿಗಳು ತಿಳಿಸಿವೆ.

ಇದನ್ನೂ ಓದಿ: ಮುಸ್ಲಿಂ ಸೋದರರ ಬಲೆಯಲ್ಲಿ ಬಿದ್ದ ಇಬ್ಬರು ಹಿಂದೂ ಸೋದರಿಯರು: ಪೋಷಕರ ವಿರೋಧಕ್ಕೆ ಬೇಸತ್ತು ಯುವತಿಯರ ಆತ್ಮಹತ್ಯೆ!

ಇನ್ನು, ಸಂತ್ರಸ್ತ ಮಹಿಳೆ ಧೈರ್ಯದಿಂದ ನಡೆದ ಘಟನೆಯ ವಿವರವನ್ನು ಅಧಿಕಾರಿಗಳಿಗೆ ನೀಡಿದರು. ಅವನ ಕೃತ್ಯಗಳ ಪರಿಣಾಮವಾಗಿ, ತಾನು ನಡುತ್ತಿದ್ದು, ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ತಪ್ಪಿತಸ್ಥ ಭಾವನೆಯನ್ನು ಅನುಭವಿಸಿದ್ದೇನೆ ಎಂದೂ ಪೊಲೀಸರು ತಿಳಿಸಿದ್ದಾರೆ. ಭದ್ರತಾ ಕ್ಯಾಮೆರಾದ ದೃಶ್ಯಾವಳಿಗಳು ಮತ್ತು ಮಹಿಳೆಯೊಂದಿಗೆ Instagram ಸಂದೇಶ ವಿನಿಮಯವು ಪೊಲೀಸರಿಗೆ ಪ್ರೀತ್ ವಿಕಲ್ ಅನ್ನು ಗುರುತಿಸಲು ಸಹಾಯ ಮಾಡಿದೆ ಎಂದೂ ವರದಿಯಾಗಿದೆ. 

ಇದನ್ನೂ ಓದಿ: ಸಂಗಾತಿ ಮೃತದೇಹ ತುಂಡು ತುಂಡು ಮಾಡಿ ಬೀದಿ ನಾಯಿಗೆ ಹಾಕ್ದ: ಶ್ರದ್ಧಾ ವಾಕರ್‌ ಹಂತಕನೇ ಇವನಿಗೆ ಸ್ಪೂರ್ತಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru: ಮಹಿಳೆಯರ ಒಳ ಉಡುಪುಗಳನ್ನ ಕದಿಯುತ್ತಿದ್ದ 23ರ ಹರೆಯದ ಕೇರಳ ಯುವಕನ ಬಂಧನ
ಎಲ್ಐಸಿ ಕಚೇರಿಯಲ್ಲಿ ಬೆಂಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಹೋದ್ಯೋಗಿಯಿಂದಲೇ ಎಲ್‌ಐಸಿ ಮಹಿಳಾ ಅಧಿಕಾರಿಯ ಕೊಲೆ