Blackmail: ಸೋಮಶೇಖರ್‌ ಪುತ್ರನ ಬ್ಲಾಕ್ ಮೇಲ್ ಕೇಸ್‌ನಲ್ಲಿ ಶಾಸಕರ ಪುತ್ರಿಯ ಹೆಸರು,  ಸಿಮ್ ಕೊಟ್ಟಿದ್ದೆ ತಪ್ಪಾಯ್ತು!

Published : Jan 09, 2022, 05:47 PM IST
Blackmail: ಸೋಮಶೇಖರ್‌ ಪುತ್ರನ ಬ್ಲಾಕ್ ಮೇಲ್ ಕೇಸ್‌ನಲ್ಲಿ ಶಾಸಕರ ಪುತ್ರಿಯ ಹೆಸರು,  ಸಿಮ್ ಕೊಟ್ಟಿದ್ದೆ ತಪ್ಪಾಯ್ತು!

ಸಾರಾಂಶ

* ಸಚಿವ ಎಸ್ ಟಿ ಸೋಮಶೇಖರ್ ಪುತ್ರನಿಗೆ ಬ್ಲಾಕ್ ಮೇಲ್ ಪ್ರಕರಣದಲ್ಲಿ ಟ್ವಿಸ್ಟ್..!  * ಇಂಡಿ ಶಾಸಕ ಯಶವಂತರಾಯಗೌಡರನ್ನ ಸಂಪರ್ಕಿಸಿದ್ದ ಸಿಸಿಬಿ ಅಧಿಕಾರಿಗಳು * ಸಿಮ್ ಕಾರ್ಡ್ ಸಂಬಂದ ಶಾಸಕರಿಂದ ವಿವರಣೆ ಪಡೆದಿರೊ ಸಿಸಿಬಿ * ಶಾಸಕರ ಮಗಳ ವಿಚಾರಣೆಗೆ ಮುಂದಾಗಿದ್ದ ಸಿಸಿಬಿ 

ಬೆಂಗಳೂರು (ಜ. 09): ಸಚಿವ ಎಸ್‌ಟಿ ಸೋಮಶೇಖರ್ (ST Somashekhar) ಪುತ್ರನಿಗೆ ಬ್ಲಾಕ್ ಮೇಲ್ (Blackmail) ಮಾಡಿದ ಆರೋಪದ ಮೇಲೆ ಆರ್ ಟಿನಗರದ ಜ್ಯೋತಿಷಿ ಚಂದ್ರಶೇಖರ್ ಸ್ವಾಮಿಯ ಪುತ್ರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಅಶ್ಲೀಲ ವಿಡಿಯೋ ಇದೆ, ಹಣ ಕೊಡಿ ಇಲ್ಲವಾದರೆ  ಸೋಷಿಯಲ್ (Social Media) ಮೀಡಿಯಾದಲ್ಲಿ ಹರಿಯ ಬಿಡುವುದಾಗಿ ಲ್, ಸಚಿವರ ಪುತ್ರ ನಿಶಾಂತ್‌ಗೆ  ಬ್ಲಾಕ್‌ಮೇಲ್ ಮಾಡುತ್ತಿದ್ದ ಆರೋಪಿಗಳ ಬಂಧನವಾಗಿದೆ. ಸಚಿವರ ಪುತ್ರ ನಿಶಾಂತ್ ದೂರನ್ನು ಆಧರಿಸಿ ಇಬ್ಬರನ್ನು ಬಂಧಿಸಲಾಗಿದ್ದು ಮತ್ತಷ್ಟು ಮಾಹಿತಿಗಳು ಹೊರಕ್ಕೆ ಬಂದಿವೆ.

ಪ್ರರಣದಲ್ಲಿ ಶಾಸಕರ ಪುತ್ರಿಯ ಹೆಸರು ಕೇಳಿ ಬಂದಿದೆ ವೀಡಿಯೊ ಕಳಿಸಿ, ಬ್ಲಾಕ್ ಮೇಲ್ ನಡೆದಿರೊ ಬಗ್ಗೆ ಶಾಸಕರ ಪುತ್ರಿಗೆ ಏನೂ ಗೊತ್ತಿಲ್ಲ ಎಂಬುದು ಮಾಹಿತಿ.   ಇದೆ ವಿಚಾರಕ್ಕೆ ಸಂಬಂಧಿಸಿ ಸಚಿವ ಸೋಮಶೇಖರ್  ಅವರನ್ನು ಇಂಡಿ ಶಾಸಕ ಯಶ್ವಂತರಾಯ ಪಾಟೀಲ್‌  ಭೇಟಿ ಮಾಡಿದ್ದರು.

Blackmail: ಸಚಿವ ಎಸ್‌ ಟಿ ಸೋಮಶೇಖರ್ ಪುತ್ರನಿಗೆ ಬ್ಲಾಕ್‌ಮೇಲ್, ಜ್ಯೋತಿಷಿ ಮಗ ಅರೆಸ್ಟ್

ಪ್ರಕರಣದಲ್ಲಿ ಜ್ಯೋತಿಷಿ ಪುತ್ರ ರಾಹುಲ್ ಭಟ್ ಜತೆ  ರಾಕೇಶ್ ಅಣ್ಣಪ್ಪ ಎಣಂಬಾತನ ಹೆಸರು ಕೇಳಿ ಬಂದಿದೆ. ರಾಕೇಶ್ ಅಣ್ಣಪ್ಪ ಹಾಗು ರಾಹುಲ್ ಭಟ್ ಆಪ್ತ ಸ್ನೇಹಿತರು. ರಾಕೇಶ್ ಅಣ್ಣಪ್ಪನಿಂದ ಮೊಬೈಲ್ ಪಡೆದು  ವಿಡಿಯೋ ಕಳಿಸಿದ್ದಾನೆ ಎನ್ನಲಾಗಿದೆ. ಮೊಬೈಲ್ ಸಿಬ್ ಶಾಸಕರ ಪುತ್ರಿಯ ಹೆಸರಿನಲ್ಲಿತ್ತು ಎನ್ನುವುದು  ಪ್ರಕರಣದ ಬಗ್ಗೆ ಮತ್ತಷ್ಟು ಗೊಂದಲ ಹುಟ್ಟುಹಾಕಿದೆ. 

"

ಶಾಸಕರ ಪುತ್ರಿಗೆ ವಿಚಾರವೇ  ಗೊತ್ತಿಲ್ಲ:  ಪ್ರಕರಣದ ಸಂಬಂಧ  ಶಾಸಕರ ಮಗಳ ವಿಚಾರಣೆಗೆ ಸಿಸಿಬಿ ಮುಂದಾಗಿತ್ತು. ಶಾಸಕರಿಂದಲೇ ವಿವರಣೆ ಪಡೆದುಕೊಳ್ಳುವ ಯತ್ನವನ್ನು ಮಾಡಿತ್ತು.  ಮಗಳ ಜೊತೆ ಮಾತಾನಾಡಿ ಶಾಸಕ ಯಶವಂತರಾಯ ಪಾಟೀಲ್ ಮಾಹಿತಿ ಪಡೆದುಕೊಂಡಿದ್ದರು.

ಅಸಲಿಗೆ ಸದ್ಯ ಆ ಸಿಮ್ ಇಂಡಿ ಶಾಸಕರ ಪುತ್ರಿಯ ಬಳಿ ಇಲ್ಲ. ಸದ್ಯ ಇಂಡಿ ಶಾಸಕರ ಪುತ್ರಿ  ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಮೇರಿಕಾಗೆ ಹೋಗುವ ಮೊದಲು ಸಿಮ್ ಸ್ನೇಹಿತನಿಗೆ ಕೊಟ್ಟು ಹೋಗಿದ್ದರು. ಮೂರು ವರ್ಷದ ಹಿಂದೆಯೇ ಸ್ನೇಹಿತ ರಾಕೇಶ್ ಅಣ್ಣಪ್ಪಗೆ ಕೊಟ್ಟಿದ್ದರು.

ನಮ್ಮ ಬಳಿ ನಿಮ್ಮ ಅಶ್ಲೀಲ ವಿಡಿಯೋ ಇದೆ. ಹಣ ಕೊಡದಿದ್ದರೆ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದ ಸಂಬಂಧ ಸಚಿವ ಎಸ್‌ಟಿ ಸೋಮಶೇಖರ್ ಪುತ್ರ ದೂರು  ನೀಡಿದ್ದರು. 

ಕೆಲ ದಿನಗಳ ಹಿಂದೆ ಅಪರಿಚಿತ ನಂಬರ್ ನಿಂದ ವಾಟ್ಸಾಪ್ ನಲ್ಲಿ ಅಶ್ಲಿಲ ವಿಡಿಯೋ ಸಂದೇಶ ಕಳುಹಿಸಲಾಗಿತ್ತು. ಅದರಲ್ಲಿ ತನ್ನ ಫೋಟೋ ಎಡಿಟ್ ಮಾಡಿ, 1 ಕೋಟಿ ಹಣ ಕಳುಹಿಸಬೇಕೆಂದು ಬೆದರಿಕೆ ಹಾಕಲಾಗಿತ್ತು ಎಂದು ನಿಶಾಂತ್ ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿದ್ದರು. 

ಪ್ರಮುಖ ಆರೋಪಿ  ರಾಹುಲ್ ಭಟ್ ದುಬೈನಿಂದ ವಾಪಸ್ಸಾದ ಬಳಿಕ  ಬಂಧಿಸಲಾಗಿದೆ.  ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರೆ ಮತ್ತೋರ್ವ ಆರೋಪಿಯನ್ನು ಗೋವಾದಲ್ಲಿ ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ