\- ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಅ.17) : ಮಂಡ್ಯ ಜಿಲ್ಲೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಇತ್ತ ವಿಜಯಪುರ ಜಿಲ್ಲೆಯಲ್ಲಿ ಅತ್ಯಾಚಾರ, ಪೋಕ್ಸೋ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದೆ. ಜಿಲ್ಲೆಯಲ್ಲಿರುವ ಓಬವ್ವ ಪಡೆಯ ಮೂಲಕ ಪೊಲೀಸ್ ಇಲಾಖೆ ವಿಶೇಷ ಜಾಗೃತಿ ಮೂಡಿಸುತ್ತಿದೆ.
undefined
Mandya Rape and Murder; ಮೃತ ಬಾಲಕಿ ಮನೆಗೆ ಸಂಸದೆ ಸುಮಲತಾ ಭೇಟಿ
ಜಾಗೃತಿ ಮೂಡಿಸುತ್ತಿರುವ ಪೊಲೀಸ್ ಇಲಾಖೆ:
ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಜನರಲ್ಲಿ ಆಕ್ರೋಶ ಮೂಡಿಸಿವೆ. ಮೊನ್ನೆಯಷ್ಟೆ ಮಂಡ್ಯದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ ಎಲ್ಲೆಡೆ ತಲ್ಲಣ ಸೃಷ್ಟಿ ಮಾಡಿದೆ. ಅತ್ಯಾಚಾರಿಗಳ ವಿರುದ್ಧ ಉಗ್ರಕ್ರಮದ ಆಗ್ರಹ ಕೇಳಿ ಬರ್ತಿದೆ. ಈ ನಡುವೆ ವಿಜಯಪುರ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಪೋಕ್ಸೋ, ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರಗಳ ತಡೆ ಹಾಗೂ ಜಾಗೃತಿಗಾಗಿ ವಿಶೇಷ ತಂಡವನ್ನ ರಚನೆ ಮಾಡಿದೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಹಿಳಾ ಪೊಲೀಸರ ಈ ತಂಡ ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಮಹಿಳೆಯರು, ಪಿಜಿಗಳಲ್ಲಿರುವ ಯುವತಿಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದೆ.
ಗುಮ್ಮಟನಗರಿಯಲ್ಲಿ ಓಬವ್ವ ಪಡೆ ಸದ್ದು:
ವಿಜಯಪುರ ಪೊಲೀಸ್ ಇಲಾಖೆ ಕಳೆದ 4 ವರ್ಷಗಳ ಹಿಂದೆಯೆ ಈ ಓಬವ್ವ ಪಡೆಯನ್ನ ಕಟ್ಟಿದೆ. ವಿಜಯಪುರ ಉಪವಿಭಾಗದ ಡಿಎಸ್ಪಿ ಅಡಿಯಲ್ಲಿ ನಾಲ್ಕರಿಂದ 5 ಮಹಿಳಾ ಪೊಲೀಸ್ ತಂಡಕ್ಕೆ ವಿಶೇಷ ತರಬೇತಿ ನೀಡಿ ರೆಡಿ ಮಾಡಲಾಗಿದೆ. ಬೈಕ್ ಚಾಲನೆ, ಹಲ್ಲೆಕೋರರು-ಕ್ರಿಮಿನಲ್ಸ್ ವಿರುದ್ಧ ಹೋರಾಡಬಲ್ಲ ಕಸರತ್ತುಗಳನ್ನ ಹೇಳಿಕೊಡಲಾಗಿದೆ. ಅತ್ಯಾಚಾರಿಗಳಿಗೆ ಹೇಗೆ ಪ್ರತಿರೋಧ ಒಡ್ಡಬೇಕು, ತಮ್ಮನ್ನ ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಎಂಬುದನ್ನ ಈ ತಂಡಕ್ಕೆ ಪೊಲೀಸ್ ಇಲಾಖೆಯ ನುರಿತರಿಂದ ತರಬೇತಿ ನೀಡಲಾಗಿದೆ.
40 ಸಾವಿರ ವಿದ್ಯಾರ್ಥಿನಿಯರಿಗೆ ಕಾರ್ಯಾಗಾರ:
ಈ ಓಬವ್ವ ಪಡೆಯಲ್ಲಿರುವ ಮಹಿಳಾ ಪೊಲೀಸರು ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ವರೆಗೆ 170ಕ್ಕೂ ಅಧಿಕ ಶಾಲೆ-ಕಾಲೇಜುಗಳಲ್ಲಿ ಕಾರ್ಯಾಗಾರ ನಡೆಸಿ, 40 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು, ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ, ಬಿಎಲ್ಡಿ ಶಿಕ್ಷಣ ಸಂಸ್ಥೆ, ಮಹಿಳಾ ಹಾಸ್ಟೆಲ್, ಪಿಜಿ, ಮೆಟ್ರಿಕ್ ಪೂರ್ವ, ಮೆಟ್ರಿಕ್, ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್ ಗಳಲ್ಲೂ ಈ ಓಬವ್ವ ಪಡೆ ಜಾಗೃತಿ ಮೂಡಿಸುತ್ತಿದೆ. ಇದರಿಂದ ಅತ್ಯಾಚಾರ ಪ್ರಕರಣಗಳನ್ನ ತಪ್ಪಿಸುವಲ್ಲಿ ವಿಜಯಪುರ ಜಿಲ್ಲೆಯಲ್ಲಿ ಓಬವ್ವ ಪಡೆ ಕಾರ್ಯನಿರ್ವಹಿಸುತ್ತಿದೆ.
ಓಬವ್ವ ಪಡೆಗೆ ಇನ್ನಷ್ಟು ಬಲ ನೀಡಲಿದ್ದೇವೆ - ಎಸ್‌ಪಿ
ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ asianetsuvarnanews.com ಜೊತೆಗೆ ಮಾತನಾಡಿದ ವಿಜಯಪುರ ಎಸ್ಪಿ ಆನಂದಕುಮಾರ್, ಓಬವ್ವ ಪಡೆಯ ಬಗ್ಗೆ ಹಮ್ಮೆ ವ್ಯಕ್ತಪಡೆಸಿದ್ದಾರೆ. ಈ ಪಡೆಯನ್ನ ಇನ್ನಷ್ಟು ಬಲಗೊಳಿಸುವುದಾಗಿ ತಿಳಿಸಿದ್ದಾರೆ. ಓಬವ್ವ ಪಡೆಯಲ್ಲಿ ಈಗ ಇರುವ ಮಹಿಳಾ ಸಿಬ್ಬಂದಿಯನ್ನು ಹೆಚ್ಚುಸುತ್ತೇವೆ. ಅತ್ಯಾಚಾರ, ಪೋಕ್ಸೋ ವಿಚಾರವಾಗಿ ಜಾಗೃತಿ ಮೂಡಿಸಲು ಶಾಲಾ ಕಾಲೇಜುಗಳಿಗೆ ಅಡ್ಡಾಡುವ ಹಾಗೂ ಹೆಚ್ಚಾಗಿ ಮಹಿಳಾ ಸುರಕ್ಷತಾ ದೃಷ್ಟಿಯಿಂದ ರಕ್ಷಣೆಗಾಗಿ ದಾವಿಸುವ ತಂಡದ ಸಿಬ್ಬಂದಿಯ ಸುರಕ್ಷತೆಗಾಗಿ ಇಲಾಖೆಯಿಂದ ಗನ್ ನೀಡಲಿದ್ದೇವೆ ಎಂದಿದ್ದಾರೆ.
ವಾಪಾಸ್ ಠಾಣೆಗೆ ತೆರಳಿರುವ ಓಬವ್ವ ಪಡೆ ಸಿಬ್ಬಂದಿ:
ಇನ್ನು ಜಿಲ್ಲೆಯಲ್ಲೂ ಪೋಕ್ಸೋ ಕೇಸ್‌ಗಳು ಹೆಚ್ಚುತ್ತಿರುವ ಸಮಯದಲ್ಲಿ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಜಾಗೃತಿಯ ಅವಶ್ಯಕತೆ ಇರುವಾಗ ಓಬವ್ವ ಪಡೆ ಸಿಬ್ಬಂದಿಗಳನ್ನ ವಾಪಾಸ್ ಆಯಾ ಠಾಣೆಗಳಿಗೆ ಕರೆಯಿಸಿಕೊಳ್ಳಲಾಗಿದೆಯಂತೆ. ಗಣೇಶ ಉತ್ಸವ ಸಂದರ್ಭದಲ್ಲಿ ಆಯಾ ಠಾಣೆಗಳಿಗೆ ಹೋಗಿರುವ ಓಬವ್ವ ಪಡೆ ಸಿಬ್ಬಂದಿಯನ್ನು ವಾಪಾಸ್ ಕರೆಯಿಸಿಕೊಂಡಿದೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ. ಈ ನಿಟ್ಟಿನಲ್ಲಿ ಎಸ್‌ಪಿಯವರು ಗಮನ ಹರಿಸಬೇಕಿದೆ
ವಿಜಯಪುರ ಜಿಲ್ಲೆಯಲ್ಲು ಪೋಕ್ಸೋ ಕೇಸ್‌ಗಳು:
ವಿಜಯಪುರ ಜಿಲ್ಲೆಯಲ್ಲಿ ಕಳೆದ 2 ವರ್ಷದಲ್ಲಿ ದಾಖಲಾದ ಪೋಕ್ಸೋ ಪ್ರಕರಣಗಳು ಎಷ್ಟು ಅನ್ನೋದನ್ನ ನೋಡೊದಾದ್ರೆ ಕಳೆದ 2021 ಹಾಗೂ 2022 ರಲ್ಲಿ ಒಟ್ಟು 77 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. 2021 ರಲ್ಲಿ ಜಿಲ್ಲೆಯಾದ್ಯಂತ 40 ಪೋಕ್ಸೋ ಪ್ರಕರಣ ದಾಖಲಾಗಿವೆ. ೨೦೨೨ ರಲ್ಲಿ ಈವರೆಗೆ ೩೭ ಪೋಕ್ಸೋ ಪ್ರಕರಣಗಳು ದಾಖಲಾಗಿವೆ.
ಅತ್ಯಾಚಾರಕ್ಕೆ ಯತ್ನ ಆರೋಪ, ಬಿಜೆಪಿ ಮುಖಂಡನ ವಿರುದ್ಧ ದೂರು
ಠಾಣಾ ವ್ಯಾಪ್ತಿಗಳಲ್ಲಿ ಈ ವರ್ಷ ದಾಖಲಾಗಿರುವ ಪ್ರಕರಣಗಳು
ಜಾಗೃತರಾಗಿರುವಂತೆ ಎಸ್ಪಿ ಹೆಚ್ಡಿ ಆನಂದಕುಮಾರ್ ಸಲಹೆ:
2022 ರಲ್ಲಿ ಒಟ್ಟು 37 ಪೋಕ್ಸೋ ಕೇಸ್‌ಗಳು ದಾಖಲಾಗಿವೆ. ಇನ್ನು ವಿದ್ಯಾರ್ಥಿನಿಯರು, ಮಹಿಳೆಯರು ಹೇಗೆ ಜಾಗೃತರಾಗಿರಬೇಕು ಎನ್ನುವ ಬಗ್ಗೆ ವಿಜಯಪುರ ಎಸ್ಪಿ ಹೆಚ್ ಡಿ ಆನಂದಕುಮಾರ್ ಹೆಣ್ಣು ಮಕ್ಕಳು, ಪೋಷಕರು ಜಾಗೃತರಾಗಿ ಇರುವಂತೆ ತಿಳಿಸಿದ್ದಾರೆ. ಅಲ್ಲದೆ ತುರ್ತು ಪರಿಸ್ಥಿತಿಯಲ್ಲಿ 122ಗೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.