ಫುಲ್ ಸಖೆ ಅಂದ್ಕೊಂಡು ಸೌತೇಕಾಯಿ ತಿನ್ನೋಕೆ ಹೋದ್ರೆ ಹಣ ಕೊಟ್ಟು ಬನ್ನಿ, ಸಾಲ ಅಂತೇನಾದ್ರೂ ಹೇಳಿದ್ರೆ ನಿಮಗೂ ಈ ಗತಿ ಆಗಬಹುದು. ಉತ್ತರ ಪ್ರದೇಶದ ಫಿಲಿಬಿಟ್‌ನಲ್ಲಿ ಸೌತೇಕಾಯಿ ತಿಂದು ಸಾಲ ಬರೆದುಕೊಳ್ಳಿ ಎಂದು ಗ್ರಾಹಕ ಹೇಳಿದ್ದಕ್ಕೆ, ವ್ಯಾಪಾರಿ ಆತನ ಕಿವಿಯನ್ನೇ ಹಲ್ಲಿನಿಂದ ಕಚ್ಚಿ ಕತ್ತರಿಸಿದ ಹಾಕಿದ ಘಟನೆ ನಡೆದಿದೆ.
ನವದೆಹಲಿ (ಏ.28): ಜೋರು ಸಖೆ, ತಂಪಾಗಿರುವ ಸೌತೇಕಾಯಿಯಾದ್ರೂ ತಿನ್ನೋಣ ಎಂದು ಹೋದ್ರೆ, ವ್ಯಾಪಾರಿಗೆ ಅದರ ಹಣವನ್ನು ನೀಡಿ. ಹಾಗೇನಾದ್ರೂ ಸೌತೇಕಾಯಿ ತಿಂದು ಸಾಲ ಬರೆದುಕೊಳ್ಳಿ ಅಂತೇನಾದ್ರೂ ಅಂದ್ರೋ ನಿಮ್ಮ ಕಥೆ ಕೂಡ ಇವನ ರೀತಿಯೇ ಆಗಬಹುದು. ಉತ್ತರ ಪ್ರದೇಶದ ಫಿಲಿಬಿಟ್‌ನಲ್ಲಿ ಸೌತೇಕಾಯಿ ತಿಂದ ಗ್ರಾಹ ಅದನ್ನು ಸಾಲದಲ್ಲಿ ಬರೆದುಕೊಳ್ಳುವಂತೆ ಹೋಗಿದ್ದಾನೆ. ಆದರೆ, ಸಿಟ್ಟಿಗೆದ್ದ ವ್ಯಾಪಾರಿ ಆತನನ್ನು ಮನೆಯವರೆಗೂ ಹಿಂಬಾಲಿಸಿಕೊಂಡು ಹೋಗಿದ್ದಲ್ಲದೆ, ಮನೆಗೆ ನುಗ್ಗಿ ಆತನ ಕಿವಿಯನ್ನು ಕಚ್ಚಿ ಕತ್ತರಿಸಿ ಹಾಕಿದ ಘಟನೆ ನಡೆದಿದೆ. ಪ್ರಕರಣ ಕುರಿತಂತೆ, ವ್ಯಾಪಾರಿಯಾಗಿರುವ ಮಹೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಂದಷ್ಟು ಸೌತೇಕಾಯಿಯನ್ನು ಸಾಲದಲ್ಲಿ ಬರೆದುಕೊಳ್ಳುವಂತೆ ಹೇಳಿದ ವ್ಯಕ್ತಿ, ಇದರ ಹಣವನ್ನು ಆಮೇಲೆ ನೀಡುತ್ತೇನೆ ಎಂದಿದ್ದಾನೆ. ಇದರ ಬೆನ್ನಲ್ಲಿಯೇ ಇಬ್ಬರ ನಡುವೆ ವಾದ ವಿವಾದಗಳು ನಡೆದಿದ್ದವು. ಕಿವಿ ಕಳೆದುಕೊಂಡ ವ್ಯಕ್ತಿಯ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಮಹೇಶ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಕಿವಿ ಕಳೆದುಕೊಂಡ ವ್ಯಕ್ತಿಯನ್ನು ಉಮಾಕಾಂತ್ ಎಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದಾನೆ. ಏಪ್ರಿಲ್ 25 ರಂದು ಈ ಘಟನೆ ನಡೆದಿದ್ದು, ರಾತ್ರಿ ಮನೆಗೆ ಹಿಂತಿರುಗುವ ವೇಳೆ ಈ ಘಟನೆ ನಡೆದಿದೆ. ಸಂತ್ರಸ್ತೆಯ ಪತ್ನಿ ಸೋನಿ ದೇವಿ ನೀಡಿದ ಮಾಹಿತಿಯ ಪ್ರಕಾರ, ಏಪ್ರಿಲ್ 25 ರಂದು ಮನೆಗೆ ಹಿಂದಿರುಗುವಾಗ ಪತಿ, ಮಹೇಶ್ ಅವರನ್ನು ಭೇಟಿಯಾದರು. "ನನ್ನ ಪತಿ ಸೌತೆಕಾಯಿಗಳನ್ನು ಖರೀದಿಸಿ ಹಣವನ್ನು ನಂತರ ಕೊಡುವುದಾಗಿ ಹೇಳಿದ್ದರು. ಆದರೆ, ಸಾಲ ನೀಡಲು ನಿರಾಕರಿಸಿದ ಮಹೇಶ್ ಜಗಳವಾಡಲು ಪ್ರಾರಂಭಿಸಿದರು' ಎಂದು ಸೋನಿ ತಿಳಿಸಿದ್ದಾರೆ.
ಸೌತೇಕಾಯಿ ತಿಂದು ಜಗಳ ಮಾಡಿಕೊಂಡ ಬೆನ್ನಲ್ಲಿಯೇ ನನ್ನ ಪತಿ ಅಲ್ಲಿಂದ ಹೊರಟು ಮನೆಗೆ ಬಂದಿದ್ದಾರೆ. ಆದರೆ, ಮಹೇಶ್ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ. ಮನೆಗೆ ಹೊಕ್ಕಿದ್ದ ಮಹೇಶ್, ಪತಿಯನ್ನು ಹೊಡೆಯಲು ಆರಂಭ ಮಾಡಿದ್ದ ಎಂದು ಸೋನಿ ತಿಳಿಸಿದ್ದಾರೆ. ಈ ವೇಳೆ ಬಹಳ ಸಿಟ್ಟಿನಲ್ಲಿದ್ದ ಮಹೇಶ್, ತನ್ನ ಹಲ್ಲಿನಿಂದ ಪತಿಯಿ ಕಿವಿಯನ್ನು ಕಚ್ಚಿ ಹರಿದುಹಾಕಿದ್ದಾನೆ ಎಂದು ತಿಳಿಸಿದ್ದಾರೆ.
ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಠಾಣಾಧಿಕಾರಿ ಅಚಲ್ ಕುಮಾರ್ ಮಾತನಾಡಿ, ಸಾಲ ಕೊಡುವ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಘಟನೆ ನಡೆದಾಗ ಇಬ್ಬರೂ ಮದ್ಯದ ಅಮಲಿನಲ್ಲಿದ್ದರು ಎಂದು ಹೇಳಿದ್ದಾರೆ.
ಈದ್ ದಿನ ರಸ್ತೆಯಲ್ಲಿ ನಮಾಜ್, 1700 ಎಫ್‌ಐಆರ್ ದಾಖಲಿಸಿದ ಉತ್ತರ ಪ್ರದೇಶ ಪೊಲೀಸ್!
2017ರಲ್ಲಿ ನಡೆದ ಇಂಥದ್ದೇ ಪ್ರಕರಣದಲ್ಲಿ ಮದ್ಯದ ಅಮಲಿನಲ್ಲಿದ್ದ ತಂದೆಯೊಬ್ಬ ಮಗಳ ಕಿವಿಯನ್ನು ಕಚ್ಚಿ ಹರಿದು ಹಾಕಿದ್ದ. ಆದರೆ, ಆತನ ಪತ್ನಿ ಭೂತಚೇಷ್ಟೇಯಿಂದ ಈ ರೀತಿ ಆಗಿದ್ದಾಗಿ ಹೇಳಿದ್ದಳು. ವಿಚಾರಣೆ ನಡೆದ ಬಳಿಕ ಇದು ತಂದೆ ಮಾಡಿದ್ದ ಕೃತ್ಯ ಎನ್ನುವುದು ಬೆಳಕಿಗೆ ಬಂದಿತ್ತು.
ಕೊಹ್ಲಿ 'ಸ್ಲೋ' ಬ್ಯಾಟಿಂಗ್ ಕೆಣಕಿದ ಮುಂಬೈ ಪೊಲೀಸ್‌ಗೆ ಬೆಂಗಳೂರು ಪೊಲೀಸ್ ಖಡಕ್ ಉತ್ತರ, ಆದರೆ ಒಂದಿದೆ ಟ್ವಿಸ್ಟು!