ಒಂದು ಎಕರೆ ಜಾಗಕ್ಕಾಗಿ ತಾಯಿಯ ರುಂಡ ಕತ್ತರಿಸಿದ ಮಗ, ತಲೆಯನ್ನು ಕೈಯಲ್ಲಿ ಹಿಡಿದು ತೋಟದಲ್ಲಿ ಕುಳಿತಿದ್ದ ಆರೋಪಿ!

By Santosh Naik  |  First Published Dec 10, 2023, 6:49 PM IST

ಒಂದು ಎಕರೆ ಜಾಗಕ್ಕಾಗಿ ಹೆತ್ತ ತಾಯಿಯ ರುಂಡವನ್ನು ಕಡಿದ ಮಗ ಬಳಿಕ ಆಕೆಯ ತಲೆಯನ್ನು ತೆಗೆದುಕೊಂಡು ಹೋಗಿರುವ ಭೀಬತ್ಸ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ.


ನವದೆಹಲಿ (ಡಿ.10): ಉತ್ತರ ಪ್ರದೇಶದ ಸೀತಾಪುರದಲ್ಲಿ ಒಂದು ಎಕರೆ ಭೂಮಿಗಾಗಿ ಮಗ ತನ್ನ ತಾಯಿಯ ತಲೆ ಕಡಿದು ಕೊಂದಿದ್ದಾನೆ. ಇದಾದ ಬಳಿಕ ಆರೋಪಿ ಆಕೆಯ ತಲೆ ಎತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನು ಕಂಡು ಗಾಬರಿಗೊಂಡಿದ್ದ ಗ್ರಾಮಸ್ಥರು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದಾಗ ಆರೋಪಿಯಾಗಿರುವ ಪುತ್ರ ಗದ್ದೆಯಲ್ಲಿ ತಾಯಿಯ ತಲೆ ಹಿಡಿದು ತಲೆತಗ್ಗಿಸಿ ಕುಳಿತುಕೊಂಡಿದ್ದು ಕಂಡಿದೆ. ಮಾಹಿತಿ ಪ್ರಕಾರ, ಸೀತಾಪುರದ ತಲಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಮಿರ್ಜಾಪುರ ನಿವಾಸಿ, ಆರೋಪಿ ದಿನೇಶ್ ಪಾಸಿ ಅವರ ತಾಯಿ ಕಮಲಾದೇವಿ ಹೆಸರಿನಲ್ಲಿ 3 ಎಕರೆ ಜಮೀನು ಇತ್ತು. ಕಮಲಾ ಅವರ ಪುತ್ರ ದಿನೇಶ್ ಈ ಭೂಮಿಯನ್ನು ತಮ್ಮ ಹೆಸರಿಗೆ ಪಡೆಯಲು ಬಯಸಿದ್ದರು. 3 ಎಕರೆ ಜಾಗದ ಪೈಕಿ 1 ಎಕರೆ ಭೂಮಿಯನ್ನು ತನ್ನ ಹೆಸರಿಗೆ ಮಾಡುವಂತೆ ತಾಯಿಯ ಬಳಿ ದಿನೇಶ್‌ ಬೇಡಿಕೆ ಇಟ್ಟಿದ್ದ. ಆದರೆ, ಇದಕ್ಕೆ ಕಮಲಾ ದೇವಿ ವಿರೋಧ ವ್ಯಕ್ತಪಡಿಸಿದ್ದರಿಂದ ಆತ ಕೋಪಗೊಂಡಿದ್ದ.

1 ಎಕರೆ ಜಮೀನಿನ ಸಲುವಾಗಿ  ಕೋಪಗೊಂಡಿದ್ದ ದಿನೇಶ್‌ ತನ್ನ ತಾಯಿಯನ್ನು ಕೊಲೆ ಮಾಡಲು ಮುಂದಾದ. ಕುಡಿದು ಮನೆ ತಲುಪಿದ ಈತ ಆ ಬಳಿಕ ತನ್ನ ತಾಯಿಯೊಂದಿಗೆ ಜಗಳ ಆರಂಭಿಸಿದ್ದ. ಅಷ್ಟರಲ್ಲಿ ದಿನೇಶ್ ಕೊಡಲಿ ಎತ್ತಿಕೊಂಡು ತನ್ನ ತಾಯಿ ಕಮಲಾ ದೇವಿಯ ತಲೆ ಕಡಿದಿದ್ದಾನೆ. ಇದಾದ ಬಳಿಕ ತಾಯಿಯ ತಲೆಯನ್ನು ಹೊತ್ತು ಗದ್ದೆಯ ಕಡೆ ಓಡಿ ಪರಾರಿಯಾಗಿದ್ದ.

ಘಟನೆ ಬಗ್ಗೆ ಎಸ್ಪಿ ಹೇಳಿದ್ದೇನು?: ಇದನ್ನು ಕಂಡ ಗ್ರಾಮಸ್ಥರು ಭಯಭೀತರಾಗಿ  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪೊಲೀಸರು ಶವವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಇದಾದ ಬಳಿಕ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದರು.

Latest Videos

undefined

ಶ್ರೀರಂಗಪಟ್ಟಣ: ಹಳೇ ವೈಷಮ್ಯ, ಯುವಕನ ಬರ್ಬರ ಹತ್ಯೆ

ಪೊಲೀಸರು ಮುತ್ತಿಗೆ ಹಾಕಿ ಆರೋಪಿಯನ್ನು ಗದ್ದೆಯಿಂದ ಹಿಡಿದಿದ್ದಾರೆ. ಆರೋಪಿ ದಿನೇಶ್ ತನ್ನ ತಾಯಿಯ ತಲೆಯನ್ನು ಹೊತ್ತು ಹೊಲದಲ್ಲಿ ಕುಳಿತಿರುವುದು ಪತ್ತೆಯಾಗಿದೆ. ಆತನನ್ನು ಬಂಧಿಸಲಾಗಿದೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

ನಿವೃತ್ತ ಸೇನಾಧಿಕಾರಿಗೆ ಮದುವೆ ಮಾಡಿಸುವುದಾಗಿ ವಂಚನೆ, ಹೋಂ ಸ್ಟೇಗೆ ಕರೆದೊಯ್ದು ಖದೀಮರು ಮಾಡಿದ್ದೇನು?

click me!