ರೀಲ್ಸ್‌ ಮಾಡಲು ಬಿಡದ ಪತಿಯನ್ನು ಕೊಂದು ನೇತು ಹಾಕಿದ ಪತ್ನಿ!

Published : Jan 09, 2024, 09:12 PM IST
ರೀಲ್ಸ್‌ ಮಾಡಲು ಬಿಡದ ಪತಿಯನ್ನು ಕೊಂದು ನೇತು ಹಾಕಿದ ಪತ್ನಿ!

ಸಾರಾಂಶ

ಸೋಶಿಯಲ್‌ ಮೀಡಿಯಾ ಗೀಳು ಯಾವ ಮಟ್ಟಕ್ಕೆ ಹೋಗಿದೆ ಎನ್ನುವುದಕ್ಕೆ ಉದಾಹರಣೆಯಂತಿದೆ ಈ ಘಟನೆ. ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡಲು ಬಿಡದ ಪತಿಯನ್ನು ಕೊಂದು ಆತನನ್ನು ನೇತು ಹಾಕಿರುವ ಘಟನೆ ನಡೆದಿದೆ.

ನವದೆಹಲಿ (ಜ.9): ಸೋಶಿಯಲ್‌ ಮೀಡಿಯಾ ಅದರಲ್ಲೂ ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡುತ್ತಿದ್ದ ಪತ್ನಿಗೆ ಅದನ್ನು ಮಾಡಬೇಡ ಎಂದಿದ್ದೇ ತಪ್ಪಾಯ್ತು. ಪತ್ನಿ ತನ್ನ ಕುಟುಂಬದವರ ಜೊತೆ ಸೇರಿಕೊಂಡು ಆತನನ್ನು ಕೊಂದಿದ್ದಲ್ಲದೆ, ಆತನ ಹೆಣವನ್ನು ನೇತು ಹಾಕಿರುವ ಘಟನೆ ಬಿಹಾರದ ಬೇಗುಸರಾಯ್‌ನಲ್ಲಿ ನಡೆದಿದೆ.  20ರ ಆಸುಪಾಸಿನಲ್ಲಿರುವ ಮಹಿಳೆ ತನ್ನ 25 ವರ್ಷದ ಪತಿಯನ್ನು ಕಳೆದ ಭಾನುವಾರ ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ತನ್ನ ಪತ್ನಿ ಮಾಡುತ್ತಿದ್ದ ರೀಲ್ಸ್‌ಗೆ ಆತ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಕಾರಣಕ್ಕೆ ತನ್ನ ಕುಟುಂಬದವರೊಂದಿಗೆ ಸೇರಿ ಗಂಡನ್ನೇ ಕೊಲೆ ಮಾಡಿದ್ದಾಳೆ. ಕಾರ್ಮಿಕ ಮಹೇಶ್ವರ ರೈ ಅವರನ್ನು ರಾಣಿ ಮತ್ತು ಆಕೆಯ ಸಂಬಂಧಿಕರು ಕತ್ತು ಹಿಸುಕಿ ಹತ್ಯೆಗೈದಿದ್ದಾರೆ ಮತ್ತು ಫಫೌತ್ ಗ್ರಾಮದ ಖೋಡಾಬಂಡ್‌ಪುರದಲ್ಲಿರುವ ಅವರ ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಗ ಪತ್ತೆಯಾಗಿದ್ದಾನೆ ಎಂದು ಅವರ ತಂದೆ ರಾಮ್ ರೈ ಅವರ ದೂರನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ. ರಾಣಿಯನ್ನು ಈಗಾಗಲೇ ಬಂಧಿಸಲಾಗಿದೆ ಆದರೆ ಆಕೆಯ ಸಂಬಂಧಿಕರು ತಲೆಮರೆಸಿಕೊಂಡಿದ್ದಾರೆ ಎಂದು ಎಸ್‌ಎಚ್‌ಒ ಮಿಥಿಲೇಶ್ ಕುಮಾರ್ ತಿಳಿಸಿದ್ದಾರೆ.

ಮಹೇಶ್ವರ್ ಸಮಸ್ತಿಪುರ ಜಿಲ್ಲೆಯ ನಿವಾಸಿಯಾಗಿದ್ದು, ಕೋಲ್ಕತ್ತಾದಲ್ಲಿ ಕೆಲಸ ಮಾಡುತ್ತಿದ್ದ. ಆರು ವರ್ಷಗಳ ಹಿಂದೆ ರಾಣಿಯನ್ನು ಮದುವೆಯಾಗಿದ್ದು, ದಂಪತಿಗೆ ಒಬ್ಬ ಪುತ್ರನಿದ್ದಾನೆ. 'ರಾಣಿಗೆ ತಾನು ಪ್ರಖ್ಯಾತಿ ಆಗಬೇಕು ಎನ್ನುವ ಹಂಬಲವಿತ್ತು. ಅದಲ್ಲದೆ, ತನ್ನ ರೀಲ್ಸ್‌ಗಳು ಹಣ ಗಳಿಸಬೇಕು ಎನ್ನುವ ಆಕಾಂಕ್ಷೆಗಳಿದ್ದವು. ಅದಕ್ಕಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ರೀಲ್ಸ್‌ ಹಾಗೂ ಇತರ ವಿಚಾರಗಳನ್ನು ಪೋಸ್ಟ್‌ ಮಾಡುತ್ತಿದ್ದರು. ಇದಕ್ಕೆ ನನ್ನ ಮಗ ವಿರೋಧ ವ್ಯಕ್ತಪಡಿಸಿದ್ದ. ಆದರೆ, ರಾಣಿ ರೀಲ್ಸ್‌ ಮಾಡುವುದನ್ನು ಮುಂದುವರಿಸಿದ್ದಳು' ಎದು ರಾಮ್‌ ಪರ್ವೇಶ್‌ ತಿಳಿಸಿದ್ದಾರೆ.

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲೇ ಯುವತಿ ಮುಂದೆ ಹಸ್ತಮೈಥುನ ಮಾಡ್ಕೊಂಡ ಕಾಮುಕ..!

ರಾಮ್‌ ಪರ್ವೇಶ್‌ ಹೇಳಿರುವ ಪ್ರಕಾರ, ನನ್ನ ಹಿರಿಯ ಮಗ ರುದಾಲ್‌, ಮಹೇಶ್ವರ್‌ಗೆ ಕರೆ ಮಾಡಿದ್ದ. ಈ ವೇಳೆ ಆತನ ಕರೆಯನ್ನು ಬೇರೆ ಯಾರೋ ಸ್ವೀಕರಿಸಿದ್ದರು. ಈ ವೇಳೆ ಆತನಿಗೆ ಏನೋ ಆಗಿರಬೇಕು ಎಂದು ಊಹಿಸಿಯೇ ನಾನು ರಾಣಿಯ ಮನೆಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ.

ಗೋವಾದಲ್ಲಿ ಮಗು ಕೊಂದ ಬೆಂಗಳೂರು ಸ್ಟಾರ್ಟಪ್‌ ಸಂಸ್ಥಾಪಕಿ ಅರೆಸ್ಟ್: ಶವದ ಸಮೇತ ಕರ್ನಾಟಕದಲ್ಲಿ ಸಿಕ್ಕಿಬಿದ್ದ ಪಾತಕಿ!

ಈತನನ್ನು ಆಸ್ಪತ್ರೆಗೆ ಸಾಗಿಸುವ ನೆಪದಲ್ಲಿ ಮಹೇಶ್ವರ್‌ನ ಶವವನ್ನು ಬೇರೆಡೆಗೆ ಸಾಗಿಸಲು ಕೆಲವು ಯುವಕರು ಪ್ರಯತ್ನಿಸಿದ್ದರು. ಆದರೆ, ಈ ವೇಳೆ ಅಲ್ಲಿಗೆ ಬಂದ ನಾನು ಪೊಲೀಸರಿಗೆ ಮಾಹಿತಿ ತಿಳಿಸಿದ್ದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!